ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೇಲ್ಕಾರ್ ಬಳಿ ಪಾಣೆಮಂಗಳೂರಿಗೆ ತಿರುಗುವ ರಸ್ತೆ ಸಮೀಪ ಮಂಗಳವಾರ ಮಧ್ಯಾಹ್ನದ ಬಳಿಕ ನಡೆದ ಅಪಘಾತದಲ್ಲಿ ಲಾರಿ ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ ಪಾವಂಜೆ ಹಳೆಯಂಗಡಿ ನಿವಾಸಿ ನಾಗಭೂಷಣ್ (46) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಗು ಸಹಿತ ಐವರಿಗೆ ಗಾಯಗಳುಂಟಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಡುಬಿದ್ರಿಯ ಜಗದಾಭಿರಾಮಸ್ವಾಮಿ (44), ಮುಲ್ಕಿಯ ಸಿವಾಸಿಗಳಾದ ಮಂಜುಶ್ರೀ (27) ಹಾಗೂ ಅವರ ಮಗು ಮನನ್ (2), ಕೃಷ್ಣರಾಜ ಭಟ್ (45), ಸುಬ್ರಹ್ಮಣ್ಯ (55) ಗಾಯಗೊಂಡವರು.
ರಾಮಕುಂಜದಲ್ಲಿರುವ ಜಾತ್ರಾಮಹೋತ್ಸಕ್ಕೆ ಮಂಗಳವಾರ ಈ ಕುಟುಂಬ ತೆರಳಿದ್ದು, ಮಧ್ಯಾಹ್ನದ ಸುಮಾರಿಗೆ ಅಲ್ಲಿಂದ ವಾಪಸ್ ಬರುತ್ತಿದ್ದಾಗ. ಬಿ.ಸಿ.ರೋಡ್ ಮಾರ್ಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮೆಲ್ಕಾರ್ ಬಳಿ ಕಾರಿಗೆ ಢಿಕ್ಕಿಯಾಯಿತು.
ಕೂಡಲೇ ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಾಗಭೂಷಣ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯನಿಮಿತ್ತ ಪುತ್ತೂರು ಕಡೆಯಿಂದ ಬರುತ್ತಿದ್ದ ಡಿವೈಎಸ್ಪಿ ಶ್ರೀನಿವಾಸ್ ಅವರು ಅಪಘಾತಕ್ಕೆ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸಿದರು.
ಜಗದಾಭಿರಾಮ ಅವರು ಹನುಮಗಿರಿ ಯಕ್ಷಗಾನ ಮೇಳದ ಕಲಾವಿದರು.
ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟೆ, ಪರಿಶೀಲನೆ ನಡೆಸಿದ್ದು, ತದನಂತರ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಈ ಸಂಬಂಧ ಮೆಲ್ಕಾರ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
Be the first to comment on "ಮೇಲ್ಕಾರ್ ಸಮೀಪ ಅಪಘಾತ, ಓರ್ವ ಸಾವು, ಮಗು ಸಹಿತ ಐವರಿಗೆ ಗಾಯ"