ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಶ್ರೀದೇವಿ ಭವನದಲ್ಲಿ ಫೆ.24ರಂದು ಡಾ.ಟಿ.ಆರ್.ಶರ್ಮ ದೇರಣಮೂಲೆ ವೇದಿಕೆಯಲ್ಲಿ ಕೋಡಂದೂರು ನಾರಾಯಣ ಅಡ್ಯಂತಾಯ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ, ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ವಿವರ ಹೀಗಿದೆ.
ಬೆಳಗ್ಗೆ 8.30ಕ್ಕೆ ಮೆರವಣಿಗೆ. ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಎಸ್.ಆರ್.ರಂಗಮೂರ್ತಿ ಅವರಿಂದ ಉದ್ಘಾಟೆ. ಬಳಿಕ ಜಿಪಂ ಸದಸ್ಯೆ ಜಯಶ್ರೀ ಕೋಡಂದೂರು ರಾಷ್ಟ್ರಧ್ವಜ, ತಾಪಂ ಸದಸ್ಯೆ ಕವಿತಾ ಎಸ್. ನಾಯಕ್ ಪರಿಷತ್ ಧ್ವಜ, ಗ್ರಾಪಂ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಕನ್ನಡ ಧ್ವಜಾರೋಹಣ ಮಾಡುವರು.ವಿಟ್ಲ ಅರಮನೆ ಅರಸ ಜನಾರ್ದನ ವರ್ಮಾ ವಸ್ತು ಪ್ರದರ್ಶನ, ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡುವರು.
ಬೆಳಗ್ಗೆ 10 ಗಂಟೆಗೆ ಜಿಲ್ಲಾ ಎಸ್ಪಿ ಡಾ. ಬಿ.ಆರ್. ರವಿಕಾಂತೇ ಗೌಡ ಸಮ್ಮೇಳನವನ್ನು ಉದ್ಘಾಟಿಸುವರು. ಶಾಸಕಿ ಶಕುಂತಳಾ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
12 ಗಂಟೆಯ ಬಳಿಕ ಸಂಸದ ನಳಿನ್ ಕುಮಾರ್ ಅದ್ಯಕ್ಷತೆಯಲ್ಲಿ ಸಾಹಿತ್ಯ, ಸಂಸ್ಕೃತಿ ಪ್ರಸಾರದಲ್ಲಿ ಸ್ಥಳೀಯ ಭಾಷಾ ಅಕಾಡೆಮಿಗಳ ಪಾತ್ರ ಒಂದು ಚಿಂತನೆಯಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಭಾಗವಹಿಸುವರು. ಮಧ್ಯಾಹ್ನ 1.25ರಿಂದ ಸಿ.ಎಚ್.ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ದಿ.ಅಗ್ರಾಳ ಪುರಂದರ ರೈ, ಚಕ್ರಕೋಡಿ ಸುಬ್ಬಣ್ಣ ಶಾಸ್ತ್ರಿ, ಪುಳಿಂಚ ರಾಮಯ್ಯ ರೈ, ವಾರಣಾಸಿ ಸುಬ್ರಾಯ ಭಟ್ ಸ್ಮರಣೆ ನಡೆಯಲಿದೆ. 2.30ರಿಂದ ಡಾ. ಗಿರೀಶ ಭಟ್ಟ ಅಜಕ್ಕಳ ಅಧ್ಯಕ್ಷತೆಯಲ್ಲಿ ಸಾಹಿತ್ ಪ್ರಸ್ತುತಿ, 3.35ರಿಂದ ಗಣಪತಿ ಪದ್ಯಾಣ ಅವರಿಂದ ಗಮಕ, 4ರಿಂದ ಚಲನಚಿತ್ರ ಸಾಹಿತ್ಯ ಕುರಿತು ಗೋಷ್ಠಿ, ಬಳಿಕ ತಾಲೂಕಿನ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ 6ರಿಂದ ಸಮಾರೋಪ ನಡೆಯಲಿದ್ದು, ಡಾ. ಹರಿಕೃಷ್ಣ ಭರಣ್ಯ ಸಮಾರೋಪ ಭಾಷಣ ಮಾಡುವರು. ರಾತ್ರಿ 7.30ರಿಂದ ಸರಪಾಡಿ ಅಶೋಕ ಶೆಟ್ಟಿ ಬಳಗದಿಂದ ಗರುಡ ಗರ್ವಭಂಗ ಯಕ್ಷಗಾನ ನಡೆಯುವುದು.
Be the first to comment on "ಪುಣಚದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ, ಡಾ.ಪಾದೇಕಲ್ಲು ವಿಷ್ಣು ಭಟ್ ಸಮ್ಮೇಳನಾಧ್ಯಕ್ಷ"