ಸಾಂಸ್ಕೃತಿಕ

ಫೆ.3,4ರಂದು ‘ಸಮರ್ಪಣ್-2018’

ಮಂಗಳೂರು ನೃತ್ಯಾಂಗನ್ ನೃತ್ಯ ಸಂಸ್ಥೆಯ 5ನೇ ವರ್ಷದ ಉತ್ಸವ ‘ಸಮರ್ಪಣ್-2018’ ಫೆ.3,4ರಂದು ಜರುಗಲಿದೆ.

ಡಾನ್ಬಾಸ್ಕೋ ಸಭಾಂಗಣದಲ್ಲಿ 3ರಂದು ಸಾಯಂಕಾಲ 5.30ಕ್ಕೆ ತಿರುವನಂತಪುರಂನ ಸೂರ್ಯ ಸ್ಟೇಜ್ ಆಂಡ್ ಫಿಲ್ಮ್ ಸೊಸೈಟಿ ಸ್ಥಾಪಕ ನಿರ್ದೇಶಕ ಸೂರ್ಯ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡುವರು.

ಕ್ಯಾಂಪ್ಕೋ ನಿರ್ದೇಶಕ ಎಸ್.ಆರ್.ಸತೀ ಶ್ಚಂದ್ರ ಅಧ್ಯಕ್ಷತೆ ವಹಿಸುವರು. ಸಂಸ್ಕೃತಿ ಇಲಾಖೆ ದ.ಕ.ಜಿಲ್ಲಾ ಉಪ ನಿರ್ದೇಶಕ ಚಂದ್ರಹಾಸ ರೈ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಶಾರದಾಮಣಿ ಶೇಖರ್ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥೆಯ 5 ವರ್ಷದ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುವ ಸ್ಮರಣ ಸಂಚಿಕೆ (ಪಯಣ)ವನ್ನು ಸೂರ್ಯ ಕೃಷ್ಣಮೂರ್ತಿ ಅನಾವರಣಗೊಳಿಸುವರು.

ಜಾಹೀರಾತು

ಸಾಯಂಕಾಲ 6 ಗಂಟೆಗೆ ಶುಭಮಣಿ ಚಂದ್ರಶೇಖರ್ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ, 6.30ಕ್ಕೆ ತ್ರಿಶೂರಿನ ಕಲಾವಿದೆ ಶ್ರೀಲಕ್ಷ್ಮೀ ಗೋವರ್ಧನ್ ಏಕವ್ಯಕ್ತಿ ಕೂಚುಪುಡಿ ಪ್ರದರ್ಶನ ನೀಡುವರು. 7.15ಕ್ಕೆ ಬೆಂಗಳೂರಿನ ಕಲಾವಿದೆ ಡಾ.ಸೌಂದರ್ಯ ಶ್ರೀವತ್ಸ ‘ದ್ರೌಪದಿ’ ಭರತನಾಟ್ಯ ಪ್ರದರ್ಶನ ನೀಡುವರು. ಸೌಂದರ್ಯ ಅವರಿಗೆ ಡಿ.ಎಸ್.ಶ್ರೀವತ್ಸ (ಗಾಯ ನ), ಡಿ.ವಿ.ಪ್ರಸನ್ನ ಕುಮಾರ್(ನಟುವಾಂಗ), ಹರ್ಷ ಸಾಮಗ (ಮೃದಂಗ), ವಿವೇಕ್ ಕೃಷ್ಣ (ಕೊಳಲು) ಗೋಪಾಲ್(ವೀಣೆ) ಸಾಥ್ ನೀಡುವರು.

ಫೆ.4ರಂದು 6 ಗಂಟೆಗೆ ಮಂಗಳೂರಿನ ಉದಯೋನ್ಮುಖ ಕಲಾವಿದೆ ಶ್ರಿಯಾ ಮಯ್ಯ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಇರಲಿದೆ.

6.15ಕ್ಕೆ ನವದೆಹಲಿಯ ಕಲಾವಿದ ಹಿಮಾಂಶು ಶ್ರೀವತ್ಸ ಭರತನಾಟ್ಯ ಪ್ರಸ್ತುತಪಡಿಸುವರು. ಸಾಯಂಕಾಲ 7 ಗಂಟೆಗೆ ಬೆಂಗಳೂರಿನ ಕಲಾವಿದೆ ಐಶ್ವರ್ಯಾ ನಿತ್ಯಾನಂದ ಅವರ ಭರತನಾಟ್ಯ ಪ್ರಸ್ತುತಿ ಇದೆ.

‘ಸಮರ್ಪಣ್-2018’ ಹಿನ್ನೆಲೆಯಲ್ಲಿ ಫೆ.4ರಂದು ಬೆಳಗ್ಗೆ 10.30ಕ್ಕೆ ಡಾನ್ಬಾಸ್ಕೋ ಸಭಾಂಗಣದಲ್ಲಿ ಹಿಮಾಂಶು ಶ್ರೀವಾತ್ಸವ ಅವರು ‘ಉದ್ಗಂ’ ಎಂಬ ವಿಷಯದ ಬಗ್ಗೆ ಮಾತನಾಡುವರು. ಎಲ್ಲ ಕಾರ್ಯಕ್ರಮಗಳಲ್ಲಿ ಕಲಾಸಕ್ತರಿಗೆ ಮುಕ್ತ ಪ್ರವೇಶ ಎಂದು ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.