ಬಂಟ್ವಾಳ

ಏ.26ರಂದು ನಿವೇದಿತಾ ಕಾರಂತ, ಶಮಿತಾ ಕಾರಂತ ಭರತನಾಟ್ಯ ರಂಗಪ್ರವೇಶ

ಗಾನ ನೃತ್ಯ ಅಕಾಡೆಮಿ ಪ್ರಸ್ತುತಿಯಲ್ಲಿ ಏಪ್ರಿಲ್ 26ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರಾದ ನಿವೇದಿತಾ ಕಾರಂತ ಮತ್ತು ಶಮಿತಾ ಕಾರಂತ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.

ದೀಪಪ್ರಜ್ವಲನವನ್ನು ಸುರತ್ಕಲ್ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ಕಲಾಶ್ರೀ ಗುರು ಚಂದ್ರಶೇಖರ ನಾವಡ ಮಾಡಲಿದ್ದಾರೆ. ಪುತ್ತೂರು ವಿಶ್ವ ಕಲಾ ನಿಕೇತನ ನಿರ್ದೇಶಕರಾದ ವಿದುಷಿ ನಯನಾ ವಿ. ರೈ ಕುದ್ಕಾಡಿ ಉಪಸ್ಥಿತರಿರುವರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನ್ನೈನ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ , ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ವೀಣೆಯಲ್ಲಿ ವಿದ್ವಾನ್ ಸೌಂದರ ರಾಜನ್, ಕೊಳಲಿನಲ್ಲಿ ವಿದ್ವಾನ್ ರಘುನಂದನ್ ಭಾಗವಹಿಸುವರು.

ಕಲ್ಲಡ್ಕದ ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ್ ಎನ್ ಹಾಗೂ ನಿವೃತ್ತ ಅಧ್ಯಾಪಕಿ ವರಮಹಾಲಕ್ಷ್ಮೀ ದಂಪತಿ ಪುತ್ರಿಯರಾದ ನಿವೇದಿತಾ ಕಾರಂತ ಮತ್ತು ಶಮಿತಾ ಕಾರಂತ ಸಹೋದರಿಯರು ಬಾಲ್ಯದಲ್ಲಿ ವಿದುಷಿ ನಯನ ಸತ್ಯನಾರಾಯಣ ಅವರಲ್ಲಿ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿ ಸೀನಿಯರ್ ಹಂತದ ಪರೀಕ್ಷೆ ಪೂರೈಸಿದ್ದಾರೆ. ಮಂಗಳೂರಿನಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಭರತನಾಟ್ಯ ಅಭ್ಯಾಸ ಮುಂದುವರಿಸಿದ್ದು, ಶಮಿತಾ ಕಾರಂತ್ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಜಾಹೀರಾತು
VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.