ಮತೀಯ ಸಾಮರಸ್ಯ ಸಾಧಿಸಲು ಮಾನವ ಸರಪಳಿಯಂಥ ಕಾರ್ಯಕ್ರಮ ಇಂದು ಅಗತ್ಯವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೌಹಾರ್ದತೆಗಾಗಿ ಕರ್ನಾಟಕ ಎಂಬ ಘೋಷವಾಕ್ಯದಡಿ ಕೋಮುದ್ವೇಷ ಸಹಿತ ನಾನಾ ಕಾರಣಗಳಿಂದ ಶಾಂತಿ ಕದಡುವ ಸನ್ನಿವೇಶವನ್ನು ತಿಳಿಗೊಳಿಸಿ, ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಸಲುವಾಗಿ ಜ.೩೦ರಂದು ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಸಹಿತ ಸಮಾನ ಮನಸ್ಕ ಸಂಘಟನೆಗಳಡಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತೀಯ ಸಾಮರಸ್ಯ ಕಾಪಾಡುವುದು ಇಂದಿನ ಅಗತ್ಯ ಎಂದ ಅವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಪ್ರಮುಖರಾದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ನಾನಾ ಪಕ್ಷ, ಸಂಘಟನೆಗಳ ಮುಖಂಡರಾದ ಮಹಮ್ಮದ್ ಶಫಿ, ಬಿ.ಮೋಹನ್, ಹಾರೂನ್ ರಶೀದ್, ಪಿ.ಎ.ರಹೀಂ, ವಾಸು ಗಟ್ಟಿ, ಸಂಜೀವ ಬಂಗೇರ, ರಾಮಣ್ಣ ವಿಟ್ಲ, ಬಿ.ಶೇಖರ್, ಭಾನುಚಂದ್ರ ಕೃಷ್ಣಾಪುರ, ರಾಜ ಪಲ್ಲಮಜಲು, ಪ್ರಭಾಕರ ದೈವಗುಡ್ಡೆ ಸಹಿತ ಹಲವರು ಹಾಜರಿದ್ದರು. ಸುರೇಶ್ ಕುಮಾರ್ ಸ್ವಾಗತಿಸಿದರು. ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಎ.ಗೋಪಾಲ ಅಂಚನ್ ಪ್ರಾಸ್ತಾವಿಕ ಮಾತನಾಡಿದರು.
Be the first to comment on "ಮತೀಯ ಸಾಮರಸ್ಯಕ್ಕೆ ಮಾನವ ಸರಪಳಿ ಅಗತ್ಯ: ರೈ"