ಪೆರಾಜೆ ಗ್ರಾಮದ ಸಾದಿಕುಕ್ಕು ಶ್ರೀ ಗುಡ್ಡೆಚಾಮುಂಡಿ – ಪಂಜುರ್ಲಿ – ಮಲೆಕೊರತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ಚಂಡಿಕಾಹೋಮ ಫೆ.3 ಮತ್ತು 4ರಂದು ನಡೆಯಲಿದೆ.
3ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಸಂಜೆ ದೈವಗಳ ಭಂಡಾರ ಪೆರಾಜೆಗುತ್ತಿನಿಂದ ಹೊರಟು ಸಾನಿಧ್ಯಕ್ಕೆ ಆಗಮನ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 4ರಂದು ಬೆಳಗ್ಗೆ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಬಳಿಕ 11.30ರಿಂದ ಧಾರ್ಮಿಕ ಸಭೆ ನಡೆಯುವುದು. ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಸಚಿವ ಬಿ.ರಮಾನಾಥ ರೈ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಧಾರ್ಮಿಕ ಪರಿಷತ್ತು ಸದಸ್ಯ ಜಗನ್ನಾಥ ಚೌಟ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಭಾಗವಹಿಸುವರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧ್ಯಕ್ಷ ಜಯರಾಮ ರೈ ಕಾಂತಾಡುಗುತ್ತು, ಕಾರ್ಯಾಧ್ಯಕ್ಷ ಡಾ. ಶ್ರೀನಾಥ ಆಳ್ವ ಪೆರಾಜೆಗುತ್ತು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೆರಾಜೆ, ಅನುವಂಶೀಯ ಆಡಳಿತ ಮೊಕ್ತೇಸರ ಶ್ರೀಕಾಂತ ಆಳ್ವ ಪೆರಾಜೆಗುತ್ತು, ಉಪಾಧ್ಯಕ್ಷರಾದ ಕುಶಲ ಎಂ.ಪೆರಾಜೆ, ಶ್ರೀನಿವಾಸ ಪೆರಾಜೆ, ಕೋಶಾಧಿಕಾರಿ ಬಿ.ಟಿ.ನಾರಾಯಣ ಭಟ್ ಮತ್ತು ಗೌರವ ಸಲಹೆಗಾರರಾದ ಬಿ.ಅಪ್ರಾಯ ಪೈ, ಕೋಮಲೆ ನಾರಾಯಣ ಭಟ್ ಮತ್ತು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಸಾದಿಕುಕ್ಕು ಶ್ರೀಗುಡ್ಡೆಚಾಮುಂಡಿ – ಪಂಜುರ್ಲಿ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ, ಚಂಡಿಕಾಹೋಮ"