ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಠರಾವು ಮಂಡನೆ, ಸಾಧಕರಿಗೆ ಸನ್ಮಾನ, ತುಳು ಬದುಕಿನ ಬದಲಾದ ಸ್ಥಿತಿ, ತುಳು ಹಿರಿಮೆ ಸಾರುವ ನೃತ್ಯರೂಪಕ, ತುಳು ಭೂಮಿಯ ಕಾಡು, ನಾಡು ಕಡಲಿನ ಮಹತ್ವ ಸಾರುವ ಕಬಿತೆ, ಪದೊ, ಚಿತ್ರೊ, ತುಳು ಮಣ್ಣಿನ ಭಾಷೆಯ ಯಕ್ಷಗಾನ…
ಹೀಗೆ ಒಂದಿಡೀ ದಿನ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ತುಳುನಾಡ್ದ ನುಡಿ – ನಡಕೆ ಕರಿಪು, ಪರಿಪು, ಒರಿಪು… ಪದಿನೆಣ್ಮನೇ ಐಸಿರೋ, ತುಳು ಸಾಹಿತ್ಯ ಸಮ್ಮೇಳನೊ ನಡೆಯಿತು.
ಉದ್ಘಾಟನೆ:
ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಹೋರಾಟದ ಅಗತ್ಯವಿದೆ. ಧರ್ಮ ಸಂಸ್ಕೃತಿಯ ಜಾಗೃತಿಗಾಗಿ ತುಳುನಾಡ ಜಾತ್ರೆಯನ್ನು ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ತುಳುನಾಡಿನ ಮೂಲ ಸಂಸ್ಕೃತಿ ಬೆಳೆದಾಗ ಮಾತ್ರ ನಾವು ನಮ್ಮತನದೊಂದಿಗೆ ಬೆಳೆಯಲು ಸಾಧ್ಯ. ನಮ್ಮ ಸಂಸ್ಕೃತಿಗೆ ದಕ್ಕೆಯಾಗಬಾರದು ಎಂದು ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ ತಾಯಿ ಭಾಷೆಯನ್ನು ಕಲಿಯುವ, ಕಲಿಸುವ ಕಾರ್ಯ ಶಾಲೆಗಳಲ್ಲಿ ನಡೆಯಬೇಕು. ಎಂದು ಹೇಳಿದರು.ಸಮ್ಮೇಳನಾಧ್ಯಕ್ಷ ಡಾ. ಕನರಾಡಿ ವಾದಿರಾಜ ಭಟ್ ಮಾತನಾಡಿ ಬದುಕಿನಲ್ಲಿ ಕೃತಕತೆ ಹೆಚ್ಚಾಗಿ, ತಂತ್ರಜ್ಞಾನಗಳು ನಮ್ಮನ್ನು ಅತಂತ್ರಗೊಳಿಸುತ್ತಿದೆ ಎಂದು ಎಚ್ಚರಿಸಿದರು.ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಮುಂಬೈ ಉಪಸ್ಥಿತರಿದ್ದರು.
ರಾಜೇಶ್ವರಿ ಮತ್ತು ಬಳಗ ಪ್ರಾರ್ಥಿಸಿದರು. ಒಡಿಯೂರ್‍ದ ತುಳುಕೂಟದ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿದರು. ತುಳುನಾಡ್ದ ನಿಡಿ – ನಡಿಕೆ ಲೇಸ್ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಬದಲಾಗುತ್ತಿರುವ ತುಳು ಬದುಕು:
ಬದಲಾವೊಂದುಪ್ಪಿ ತುಳು ಬದ್ಕ್ ಗೋಷ್ಠಿಯು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ. ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ನಡೆಯಿತು. ಯು. ಬಿ. ಪವಜನ ಬೆಂಗಳೂರು, ಮೂಡಬಿದ್ರೆ ಆಳ್ವಾಸ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಸುಧಾರಾಣಿ, ಮಂಗಳೂರು ಶ್ರೀ ರಾಮಕೃಷ್ಣ ಪಿ ಯು ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಅಭಿಪ್ರಾಯ ಮಂಡಿಸಿದರು.
ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಉಡುಪಿ ವಲಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಡುಪಿ ಸ್ವಾಗತಿಸಿದರು. ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ನವೀನ್ ಶೆಟ್ಟಿ ವಂದಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಿ. ಎಂ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ ರಾಣಿ ಅಬ್ಬಕ್ಕ ನೃತ್ಯ ರೂಪಕೊ:
ಮಾಸ್ಟರ್ಸ್ ಮೀಯಪದವು ಅವರಿಂದ ದೇಶಭಕ್ತಿ ಸಾರುವ ಯೋಗೀಶ್ ರಾವ್ ಚಿಗುರುಪಾದೆ ಬರೆದ ನೃತ್ಯ ರೂಪಕ ಉಳ್ಳಾಲ ರಾಣಿ ಅಬ್ಬಕ್ಕ ತುಳುನಾಡ ರತ್ನ ದಿನೇಶ್ ಅತ್ತಾವರ ಅವರ ನಿರ್ದೇಶದಲ್ಲಿ ನಡೆಯಿತು. ಮೋಹನ್ ಹೆಗ್ಡೆ ಥಾಣೆ ಸಹಕರಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗ್ರಾಮ ಸಂಯೋಜಕಿ ಲೀಲಾ ವಂದಿಸಿದರು.
ಕಾಡ್- ನಾಡ್- ಕಡಲ್ – ಕಬಿತೆ – ಪದೊ – ಚಿತ್ರೊ
ವಿಜಯಾ ಶೆಟ್ಟಿ ಸಾಲೆತ್ತೂರು, ಅಶೋಕ ಎನ್. ಕಡೇಶಿವಾಲಯ, ವಿಜಯಲಕ್ಷ್ಮೀ ಕಟೀಲು ಪದ್ಯ ಓದಿದರು. ಪೆರ್ಮುದೆ ಮೋಹನ್ ಕುಮಾರ್ ಚಿತ್ರ ಬಿಡಿಸಿದರು. ಜೈಗುರುದೇವ ಕಲಾಕೇಂದ್ರದ ಸಂತೋಷ್ ಕುಮಾರ್ ಭಂಡಾರಿ, ಸಾಯೀಶ್ವರಿ, ರೇಣುಕಾ ಎಸ್. ರೈ, ಅವಿನಾಶ್ ಹಾಡಿದರು. ಒಡಿಯೂರು ಜೈ ಗುರುದೇವ ಕಲಾಕೇಂದ್ರ ಅಧ್ಯಕ್ಷ ಟಿ. ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪುತ್ತೂರು ತಾಲೂಕು ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗರೊಡಿ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ತುಳು ಯಕ್ಷಗಾನ:
ಕಾಟಿಪಳ್ಳ ಶ್ರೀಮಹಾಗಣಪತಿ ಮಕ್ಕಳ ಹಾಗೂ ಮಹಿಳೆಯರ ಯಕ್ಷಗಾನ ತಂಡದಿಂದ ಜಾಂಬವತಿ ಕಲ್ಯಾಣ ತುಳು ಯಕ್ಷಗಾನ ಪೂರ್ಣಿಮಾ ವೈ. ಶೆಟ್ಟಿ ಕಾಟಿಪಳ್ಳ ನಿರ್ದೇಶನದಲ್ಲಿ ನಡೆಯಿತು.
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಹಳೆ ಬೇರನ್ನು ಮರೆಯದೆ ದೃಢಗೊಳಿಸುವ ಕಾರ್ಯವಾಗಬೇಕು. ಸಮ್ಮೇಳನಗಳು ಭವಿಷ್ಯತ್ತಿನಲ್ಲಿ ಫಲ ನೀಡುವ ಕಾರ್ಯ ಮಾಡುತ್ತವೆ ಎಂದರು.
ತುಳುನಾಡ್ದ ನಿಡಿ – ನಡಿಕೆ ಲೇಸ್ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಠರಾವು ಮಂಡಿಸಿದರು. ೮ನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ. ಕರಾವಳಿ ಭಾಗದ ಮೂವರು ಸಂಸದರಿಗೆ, ಪ್ರಧಾನಿಗಳಿಗೆ, ಕೇಂದ್ರ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳಿಗೆ ಹಾಗೂ ಸಂಸ್ಕೃತಿ ಸಚಿವರಿಗೆ ಠರಾವಿನ ಪ್ರತಿಯನ್ನು ನೀಡಲಾಗುವುದು ಎಂದು ಹೇಳಿದರು.
ಮಲಾರು ಜಯರಾಮ ರೈ ಮಲಾರ್ (ಪತ್ರಿಕೋದ್ಯಮ), ಶಿಕ್ಷಣ ಕ್ಷೇತ್ರದಿಂದ ಹಾಜಬ್ಬ ಹರೇಕಳ, ದೈವಾರಾಧನೆಯಿಂದ ಲಕ್ಷ್ಮಣ ಕಾಂತ ಕಣಂತೂರು, ತುಳುವಿನ ವಿಚಾರದಲ್ಲಿ ಸಾಧನೆ ಮಾಡಿದ ಬಾಲಕೃಷ್ಣ ಸಾಮಗ ಮಲ್ಪೆ, ಕೃಷಿ ವಿಚಾರದಲ್ಲಿ ದೇರಂಬಳ ತ್ಯಾಂಪಣ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪತ್ತನಾಜೆ ತುಳು ಸಿನೆಮಾ ನಿರ್ಮಾಪಕ, ಮುಂಬೈ ಕಲಾಜಗತ್ತು ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಶುಭ ಹಾರೈಸಿದರು. ಒಡಿಯೂರ್‍ದ ತುಳುಕೂಟದ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ, ಉದ್ಯಮಿಗಳಾದ ವಾಮಯ್ಯ ಶೆಟ್ಟಿ, ಕೃಷ್ಣ ಎಲ್. ಶೆಟ್ಟಿ ಮುಂಬೈ, ತಾರಾನಾಥ ಟಿ ಕೊಟ್ಟಾರಿ, ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬಿಸಿ ರೋಡ್ ಶಾಖೆ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿದರು. ಒಡಿಯೂರು ಐಟಿಐ ಪ್ರಾಚಾರ್ಯ ಕರುಣಾಕರ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಚೈತ್ರಾ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗ್ರಾಮ ಸಂಯೋಜಕಿ ಕಾವ್ಯಲಕ್ಷ್ಮೀ, ಪ್ರಸಾದ ಸಮಿತಿ ಸಂಚಾಲಕ ಸುಖೇಶ್ ಭಂಡಾರಿ ಸನ್ಮಾನ ಪತ್ರ ಓದಿದರು. ವೇದಿಕೆ ಸಮಿತಿ ಸದಸ್ಯ ಮಾತೇಶ್ ಭಂಡಾರಿ ವಂದಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ತುಳುನಾಡ್ದ ನುಡಿ – ನಡಕೆ: ಕರಿಪು, ಪರಿಪು, ಒರಿಪು"