ನನ್ನ ಕಾರ್ಯಕರ್ತರೇ ಫೇಸ್ ಬುಕ್, ವಾಟ್ಸಾಪ್ – ಅಭಿವೃದ್ಧಿ ಕಾರ್ಯವೇ ನನ್ನ ಉತ್ತರ – ರಮಾನಾಥ ರೈ
ವಿಡಿಯೋ ಮತ್ತು ಸಂಪೂರ್ಣ ವರದಿಗೆ ಕ್ಲಿಕ್ ಮಾಡಿರಿ
ವಿಧಾನಸಭೆಯ ಬಂಟ್ವಾಳ ಕ್ಷೇತ್ರವಿಂದು ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆಂದು ಕಳೆದ ನಾಲ್ಕೂವರೆ ವರ್ಷಗಳ ತನ್ನ ಶಾಸಕತ್ವದ ಅವಧಿಯಲ್ಲಿ ವಿವಿಧ ಮೂಲಗಳಿಂದ ಒದಗಿಸಲಾದ 1000 ಕೋಟಿ ರೂಪಾಯಿಗಳ ಯೋಜನೆ ಅನುಷ್ಠಾನಗೊಳ್ಳುತ್ತಿವೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಪ್ರವಾಸಿ ಬಂಗ್ಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪಯಣ, ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ಬಿಂಬಿಸುವ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಭಿವೃದ್ಧಿಯೇ ನನ್ನ ಉತ್ತರ:
ಇದೇ ಸಂದರ್ಭ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ ಸಚಿವ ರೈ, ಚುನಾವಣೆ ಸಂದರ್ಭ ಟೀಕೆ ನಡೆಸುವ ವಿರೋಧಿಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡದ್ದೇ ನನ್ನ ಉತ್ತರವಾಗಿರುತ್ತದೆ ಎಂದರು. ನಾನು ನನ್ನ ಮೊಬೈಲ್ ನಲ್ಲಿ ಫೇಸ್ ಬುಕ್, ವಾಟ್ಸಾಪ್ ಖಾತೆ ಹೊಂದಿಲ್ಲ. ನನ್ನ ಫೇಸ್ ಬುಕ್, ವಾಟ್ಸಾಪ್ ಗಳೆಲ್ಲವೂ ನನ್ನ ಕಾರ್ಯಕರ್ತರೇ ಆಗಿದ್ದಾರೆ. ನಾನು ಮತೀಯ ಸಾಮರಸ್ಯಕ್ಕೆ ಕೆಲಸ ಮಾಡಿದವನು ಎಂದು ತನ್ನ ವಿರೋಧಿಗಳಿಗೆ ತಿಳಿಸಿದ ರೈ, ಅಭಿವೃದ್ಧಿಯ ಕಾಮಗಾರಿಗಳ ಪಟ್ಟಿಯನ್ನು ಒದಗಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್ ಬಂಟ್ವಾಳ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾದ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಸದಸ್ಯ ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯ್ಲ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಪ್ರಮುಖರಾದ ವೆಂಕಪ್ಪ ಪೂಜಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಾಂಶಗಳು
- ಶುದ್ಧ ಕುಡಿಯುವ ನೀರು: ನದಿಯಿಂದ ನೀರೆತ್ತಿ ಶುದ್ಧೀಕರಿಸಿ ನೀಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 5 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು ಅಂದಾಜು ಮೊತ್ತ ರೂ.125 ಕೋಟಿ.
- ಕನ್ಯಾನ, ಕರೋಪಾಡಿ, ಕೊಳ್ನಾಡು, ವಿಟ್ಲಪಡ್ನೂರು, ಸಾಲೆತ್ತೂರು ಗ್ರಾಮಗಳ 80 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದೆ. ರೂ.25ಕೋಟಿ 82ಲಕ್ಷ
- ಸಂಗಬೆಟ್ಟು, ಕುಕ್ಕಿಪಾಡಿ, ಚೆನ್ನೈತ್ತೋಡಿ, ರಾಯಿ, ಅರಳ,ಪಂಜಿಕಲ್ಲು ಹಾಗೂ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 17 ಗ್ರಾಮಗಳ 65 ಜನವಸತಿ ಪ್ರದೇಶಗಳಿಗೆ ನೀರು ಒದಗಿಸಲು ಯೋಜನೆ ಪೂರ್ಣಗೊಂಡಿದೆ. ರೂ.36ಕೋಟಿ 7ಲಕ್ಷ
- ನರಿಕೊಂಬು, ಶಂಭೂರು, ಬಾಳ್ತಿಲ, ಗೋಳ್ತಮಜಲು ಹಾಗೂ ಅಮ್ಟೂರು ಗ್ರಾಮಗಳ 39 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ ರೂ.16ಕೋಟಿ 97ಲಕ್ಷ
- ಸರಪಾಡಿ, ಮಣಿನಾಲ್ಕೂರು, ದೇವಸ್ಯಮುಡೂರು, ದೇವಸ್ಯಪಡೂರು, ನಾವೂರು, ಬಡಗಕಜೆಕಾರು, ತೆಂಕಕಜೆಕಾರು ಕಾವಳಪಡೂರು, ಕಾಡಬೆಟ್ಟು, ಕಾವಳಮುಡೂರು, ಪಿಲಾತಬೆಟ್ಟು, ಇರ್ವತ್ತೂರು ಹಾಗೂ ಉಳಿ ಗ್ರಾಮಗಳ 97 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ ರೂ.29ಕೋಟಿ 94ಲಕ್ಷ
- ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು ಹಾಗೂ ಬರಿಮಾರು ಗ್ರಾಮಗಳ 51 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿ ರೂ.16 ಕೋಟಿ 47 ಲಕ್ಷ
- ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಟಾಸ್ಕ್ಪೋರ್ಸ್ ಮೂಲಕ 329ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ರೂ.2ಕೋಟಿ 5ಲಕ್ಷ
- ಆರೋಗ್ಯ:
- ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ರೂ.6ಕೋಟಿ 15ಲಕ್ಷ ವೆಚ್ಚ.
- ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರೂ.130ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣ.
- ಶಿಕ್ಷಣ:
- ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ಶೂ–ಸಾಕ್ಸ್, ಮಧ್ಯಾಹ್ನದ ಉಪಹಾರ ಯೋಜನೆ, ಕ್ಷೀರಭಾಗ್ಯ ಇತ್ಯಾದಿಗಳನ್ನು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
- ಶಾಲಾ ಕಟ್ಟಡಗಳ ದುರಸ್ತಿಗೆ ರೂ 1ಕೋಟಿ 18ಲಕ್ಷ, ಶಾಲಾ ಶೌಚಾಲಯ ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕಾಗಿ ರೂ 40ಲಕ್ಷ ಅನುದಾನ ವಿನಿಯೋಗಿಸಲಾಗಿದೆ.
- ಕನ್ಯಾನಕ್ಕೆ ಪ್ರಥಮ ದರ್ಜೆ ಕಾಲೇಜು.
- ಮಹಿಳಾ ಮತ್ತು ಮಕ್ಕಳ ಅಭಿವೃದಿ:
- ಪುಟಾಣಿಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮಕ್ಕೆ 4ಕೋಟಿ 83ಲಕ್ಷ ಅನುದಾನ ವಿನಿಯೋಗಿಸಲಾಗಿದೆ.
- 192 ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ಉನ್ನತೀಕರಣದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
- ಕೃಷಿ:
- ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೃಷಿಪರಿಕರಗಳ ವಿತರಣೆಯನ್ನು ಕಾಲ ಕಾಲಕ್ಕೆ ನೀಡಲಾಗುತ್ತಿದ್ದು ಬೆಳೆ ವಿಮೆ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ, ಕೃಷಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರ ತುಂತುರು ನೀರಾವರಿ, ಕೃಷಿ ವಿಕಾಸ ಯೋಜನೆ ಮೊದಲಾದ ಯೋಜನೆಗಳ ಮೂಲಕ 2574 ರೈತರ ಶ್ರೇಯೋಭಿವೃದ್ಧಿಗೆ ರೂ.1 ಕೋಟಿ 41 ಲಕ್ಷ ಅನುದಾನ ವಿನಿಯೋಗಿಸಲಾಗಿದೆ.
- ರೈತರ ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು 15201 ರೈತರು ಪಡೆದುಕೊಂಡಿದ್ದು ರೂ.67ಕೋಟಿ 80ಲಕ್ಷ ಅನುದಾನ ವಿನಿಯೋಗಿಸಲಾಗಿದೆ.
ಅರಣ್ಯ ಇಲಾಖೆ:-
-
- ವೀರಕಂಬದಲ್ಲಿ ಸಿರಿಚಂದನವನ, ಕಾರಿಂಜೇಶ್ವರದ ಔಷಧವನ, ಹಾಗೂ ಬಂಟ್ವಾಳದಲ್ಲಿ ಸಾಲು ಮರದ ತಿಮ್ಮಕ್ಕ ಟ್ರೀಪಾರ್ಕ್, ಹಸಿರು ಶಾಲೆ, ರಸ್ತೆ, ಬದಿ ಗಿಡ ನೆಡುವ ಕಾರ್ಯಕ್ರಮ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ–ಒಲೆ ವಿತರಣೆಗೆ ರೂ.31 ಲಕ್ಷ ಅನುದಾನ ವಿನಿಯೋಗಿಸಲಾಗಿದೆ.
- ಪಶುಸಂಗೋಪನೆ:
- ರೈತರಿಗೆ ಪ್ರತೀ ಲೀಟರ್ ಹಾಲಿಗೆ ರೂ.5 ರಂತೆ 84 ಕೋಟಿ ಪ್ರೋತ್ಸಾಹಧನ.
- ಸಿದ್ದಕಟ್ಟೆ ಮತ್ತು ಮಂಚಿಯಲ್ಲಿ ಎರಡು ಹೊಸ ಪಶು ಚಿಕಿತ್ಸಾಲಯಗಳು 5 ಹೊಸ ಕಟ್ಟಡ ರಚನೆಗೆ ಆರ್.ಐ.ಡಿ.ಎಫ್ ಮೂಲಕ ರೂ.1 ಕೋಟಿ 24 ಲಕ್ಷ ವಿನಿಯೋಗ.
- ಅಮೃತ ಯೋಜನೆ, ಪಶುಭಾಗ್ಯ, ಯೋಜನೆ ರೂ.71 ಲಕ್ಷ ಅನುದಾನ 409 ರೈತರಿಗೆ ರೂ.1.95 ಕೋಟಿ ಸಹಕಾರಿ ಇಲಾಖೆಯ ಮೂಲಕ ಬಡ್ಡರಹಿತ ಸಾಲ.
- ತೋಟಗಾರಿಕೆ:
- ತೆಂಗು, ಬಾಳೆ, ಅಡಿಕೆ ಮೊದಲಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರಿಗೆ ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗಾಗಿ 500 ಕ್ಕಿಂತಲೂ ಹೆಚ್ಚು ರೈತರಿಗೆ ರೂ 35 ಕೋಟಿ ವೆಚ್ಚದಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ.
- ಕಾರ್ಮಿಕ ಇಲಾಖೆ:-
- ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯೋಜನೆಯಲ್ಲಿ 12979 ಕಾರ್ಮಿಕರಿಗೆ ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ.
ಸಣ್ಣ ನೀರಾವರಿ ಇಲಾಖೆ:-
-
- ಅಂತರ್ಜಲ ಅಭಿವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ 22 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
- ತೋಡಿನ ದಂಡೆಗಳ ಸಂರಕ್ಷಣಾ ಕಾಮಗಾರಿ, ಸಜೀಪಮೂಡ ಏತ ನೀರಾವರಿ ಯೋಜನೆ ಅಭಿವೃದ್ಧಿ, ಕೆರೆ ಪುನಶ್ಚೇತನ ಕಾಮಗಾರಿಗಳಲ್ಲದೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 76 ಫಲಾನುಭವಿಗಳಿಗೆ ಕೃಷಿಗೆ ನೀರು ಒದಗಿಸುವ ಗಂಗಾಕಲ್ಯಾಣ ಯೋಜನೆಯನ್ನು ಈ ಇಲಾಖೆಯ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 126 ಕಾಮಗಾರಿಗಳಿಗೆ ರೂ.66 ಕೋಟಿ ಅನುದಾನ ಮಂಜೂರಾಗಿದೆ.
- ನಮ್ಮ ಗ್ರಾಮ ನಮ್ಮ ರಸ್ತೆ:-
- ಈ ಯೋಜನೆಯಲ್ಲಿ ಸುಮಾರು 60 ಕಿ.ಮೀ ರಸ್ತೆಯನ್ನು ಸರ್ವಋತು ಸಂಚಾರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ರೂ. 77 ಕೋಟಿ ವೆಚ್ಚ ಭರಿಸಲಾಗಿದೆ.
- ಮೆಸ್ಕಾಂ:-
- ರಾಜೀವ್ಗಾಂಧಿ ಗ್ರಾಮೀಣ ವಿದ್ಯುದ್ಧೀಕರಣ ಯೋಜನೆಯಲ್ಲಿ 1692ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ವ್ಯವಸ್ಥೆ ಸುಧಾರಣಾ ಕಾಮಗಾರಿಯಡಿ 890 ಹೊಸ ಪರಿವರ್ತಕಗಳನ್ನು ಹಾಗೂ 369 ಕಿ.ಮೀ. ಹಳೆ ಹೆಚ್.ಟಿ/ಎಲ್.ಟಿ ತಂತಿ ಬದಲಾವಣೆ ಮಾಡಲಾಗಿದೆ.
- ವಗ್ಗ ಹಾಗೂ ಕುಕ್ಕಿಪ್ಪಾಡಿ ವಿತರಣಾ ಕೇಂದ್ರಗಳಲ್ಲಿ ಹೆಚ್ಚುವರಿ 5 ಎಂವಿಎ ಪರಿವರ್ತಕಗಳನ್ನು ಅಳವಡಿಸಲಾಗಿದೆ ಒಟ್ಟು ರೂ.06 ಕೋಟಿ ಅನುದಾನ ವಿನಿಯೋಗಿಸಲಾಗಿದೆ.
- v ಲೋಕೋಪಯೋಗಿ ಇಲಾಖೆ:-
- ರಾಜ್ಯ ಹೆದ್ದಾರಿ ನವೀಕರಣ ಸುಧಾರಣೆ ಜಿಲ್ಲಾ ಮುಖ್ಯ ರಸ್ತೆಗಳ ನವೀಕರಣ–ಸುಧಾರಣೆ, ಕಾಲೇಜು ಕಟ್ಟಡಗಳು ವಿಶೇಷಘಟಕ ಹಾಗೂ ಗಿರಿಜನ ಉಪಯೋಜನೆ ಕಾಮಗಾರಿಗಳು ಗ್ರಾಮೀಣ ರಸ್ತೆಗಳನ್ನು ಒಂದು ಭಾರಿ ಅಭಿವೃದ್ಧಿ ಪಡಿಸುವ ಕಾರ್ಯಕ್ರಮ ಸೇರಿದಂತೆ ಒಟ್ಟು 116 ಕಾಮಗಾರಿಗಳಿಗೆ 144 ಕೋಟಿ 69 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಇತರ ಅಭಿವೃದ್ಧಿ ಯೋಜನೆಗಳು:-
-
- ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.85 ಕೋಟಿ
- ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ರೂ.28 ಕೋಟಿ
- ನಬಾರ್ಡ್ ಕಾಮಗಾರಿಗಳಿಗೆ ರೂ.04 ಕೋಟಿ
- ಲೆಕ್ಕಶೀರ್ಷಿಕೆ ೩೦೫೪ರಲ್ಲಿ ರೂ.57 ಕೋಟಿ
- ಜಂಕ್ಷನ್ ಅಭಿವೃದ್ಧಿಗಾಗಿ ರೂ.39 ಕೋಟಿ
- ಸುವರ್ಣ ಕಾಮಗಾರಿಗಳಿಗೆ ರೂ24 ಕೋಟಿ
- ಗ್ರಾಮವಿಕಾಸ ಕಾರ್ಯಕ್ರಮಗಳಿಗೆ ರೂ.75 ಕೋಟಿ
- ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾರ್ಯಕ್ರಮ ರೂ.10.ಕೋಟಿ
- ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ರೂ.10 ಕೋಟಿ ಹೀಗೆ ಸುಮಾರು ೫೪೭ ಕಾಮಗಾರಿಗಳಿಗೆ ಒಟ್ಟು 40 ಕೋಟಿ 58ಲಕ್ಷ ಅನುದಾನದ ಕಾಮಗಾರಿಗಳು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿದೆ.
- ಪರಿಶಿಷ್ಟ ಪಂಗಡಗಳ ಕಾಲನಿ ಸಂಪರ್ಕದ 144 ರಸ್ತೆಗಳ ರಸ್ತೆ ಕಾಂಕ್ರಿಟೀಕರಣಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ 144 ಕಾಮಗಾರಿಗಳ ರೂ.12ಕೋಟಿ 92ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗಿದೆ.
- ಬಂಟ್ವಾಳ ಪುರಸಭೆ:-
- ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ–2 ಹಾಗೂ ಇತರ ಅನುದಾನ ಸೇರಿ ಒಟ್ಟು ಸುಮಾರು ರೂ.48 ಕೋಟಿ ಅನುದಾನ ಬಿಡುಗಡೆಯಾಗಿದ್ದು 338 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗತ್ತಿದೆ.
- ಪುರಸಭೆಯ ಸಮಗ್ರ ಕುಡಿಯುವ ನೀರಿನ ಕಾಮಗಾರಿಗಾಗಿ ರೂ.79 ಕೋಟಿ ಅನುದಾನ ಒದಗಿಸಲಾಗಿದೆ.
- ಪುರಸಭೆಯ 2ನೇ ಹಂತದ ಒಳಚರಂಡಿ ಯೋಜನೆ ಮಂಜೂರಾಗಿದ್ದು ರೂ.56 ಕೋಟಿ 54 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ:-
-
- ಈ ಯೋಜನೆಯಲ್ಲಿ ಸುಮಾರು ರೂ.8 ಕೋಟಿ ವೆಚ್ಚದಲ್ಲಿ 274 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
- ಸುಂದರವಾದ ಮಿನಿವಿಧಾನ ಸೌಧ ರೂ.10 ಕೋಟಿ ವೆಚ್ಚದಲ್ಲಿ ನಿರ್ಮಾಣ.
- ರೂ.3 ಕೋಟಿ ವೆಚ್ಚದಲ್ಲಿ ನೆಲ ಅಂತಸ್ತು ಮತ್ತು 2 ತಳ ಅಂತಸ್ತುಗಳನ್ನೊಳಗೊಳಗೊಂಡ ನಿರೀಕ್ಷಣಾ ಮಂದಿರ ಕಟ್ಟಡ.
- ಬಿ.ಸಿ.ರೋಡ್ನಲ್ಲಿ ರೂ.10 ಕೋಟಿ 7ಲಕ್ಷ ವೆಚ್ಚದಲ್ಲಿ ಸುಂದರವಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
- 30 ಹಾಸಿಗೆಗಳ ಹಳೆಯ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 100 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ.
- ಮೆಸ್ಕಾಂ ಕಛೇರಿ ಉಪಯೋಗಕ್ಕಾಗಿ ರೂ.16 ಕೋಟಿ ವೆಚ್ಚದಲ್ಲಿ ಬಿ.ಸಿ.ರೋಡ್ನಲ್ಲಿ ನೂತನ ಮೆಸ್ಕಾಂ ಕಟ್ಟಡ.
- ಬಿ.ಸಿ.ರೋಡ್ನಲ್ಲಿ ತಾಲೂಕು ಮಟ್ಟದ ರೂ.3 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮಂಜೂರು.
- ಸಂಚಾರಿ ಪೊಲೀಸು ಠಾಣೆ.
- ಪೊಲೀಸ್ ಉಪವಿಭಾಗ.
- ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣ ರೂ.1೦ ಕೋಟಿ
- ಜೋಡುಮಾರ್ಗ ಉದ್ಯಾನವನ, ಬಂಟ್ವಾಳ ಟ್ರೀಪಾರ್ಕ್.
- ಕಾವಳಕಟ್ಟೆಗೆ ಕೈಗಾರಿಕಾ ತರಬೇತಿ ಸಂಸ್ಥೆ.
- ಐದು ಮಾದರಿ ವಿದ್ಯುತ್ ಗ್ರಾಮಗಳ ಆಯ್ಕೆ.
- ಬಂಟ್ವಾಳಕ್ಕೆ ಪಾಲಿಟೆಕ್ನಿಕ್ ಕಾಲೇಜು.
- ಪಂಚಾಯತ್ ಪುನರ್ವಿಂಗಡಣೆ –10 ಹೆಚ್ಚುವರಿ ಗ್ರಾಮ ಪಂಚಾಯತ್ಗಳು.
- 13826 ಮಂದಿಗೆ ವಿವಿಧ ಪಿಂಚಣಿ ಸೌಲಭ್ಯಗಳು.
- 94ಸಿ ಮತ್ತು 94ಸಿಸಿ ಮೂಲಕ ಬಂಟ್ವಾಳ ತಾಲೂಕಿನಲ್ಲಿ 20000 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ.
- ಕಂದಾಯ ಅದಾಲತ್ ಮೂಲಕ 6412 ಪ್ರಕರಣ ಇತ್ಯರ್ಥ.
- 15824 ಪಡಿತರ ಚೀಟಿಗಳ ವಿತರಣೆ
- 80299 ಮಂದಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು
- ಬಸವ ವಸತಿ ಯೋಜನೆಯಲ್ಲಿ 4986 ಮನೆಗಳ ಮಂಜೂರಾತಿ.
- 3 ಸಾವಿರ ಮನೆ ನಿವೇಶನ ಹಕ್ಕು ಪತ್ರ
- ಬಂಟ್ವಾಳದಲ್ಲಿ ಖಾಸಗಿ ಬಸ್ ತಂಗುದಾಣ ನಿರ್ಮಾಣಕ್ಕೆ ಸಿದ್ಧತೆ
- ಬಂಟ್ವಾಳ ನಗರಕ್ಕೆ ಒಳಚರಂಡಿ ಯೋಜನೆ ಮಂಜೂರಾತಿ
- ಬಿ.ಸಿ.ರೋಡ್ ವೃತ್ತದಿಂದ ಪುಂಜಾಲಕಟ್ಟೆ ರಸ್ತೆ ಕಾಂಕ್ರೀಟೀಕರಣ
- ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ 4 ಗ್ರಾಮಗಳ ಆಯ್ಕೆ
- ರೂ.5 ಕೋಟಿ ವೆಚ್ಚದಲ್ಲಿ ಕವಿ ಪಂಜೆಮಂಗೇಶರಾಯರ ಸ್ಮಾರಕ ಭವನ ನಿರ್ಮಾಣ
- ರೂ.31 ಕೋಟಿ ವೆಚ್ಚದಲ್ಲಿ ಕಡೇಶ್ವಾಲ್ಯ – ಅಜಿಲಮೊಗರು ಸೌಹಾರ್ದ ಸೇತುವೆ ನಿರ್ಮಾಣಕ್ಕೆ ಚಾಲನೆ.
- ದೇವರಾಜ ಅರಸು, ಅಂಬೇಡ್ಕರ್ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಪಡೆದ ಸಾಲ ಮನ್ನ 32 ಕೋಟಿ 82 ಲಕ್ಷ
- ಜಿಲ್ಲೆಗೆ 10 ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದು 6 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಬಂಟ್ವಾಳ, ಪುತ್ತೂರು ಬೆಳ್ತಂಗಡಿ, ಸುಳ್ಯಕ್ಕೆ ತಲಾ 1.
- ಮುಖ್ಯಮಂತ್ರಿ ಅನಿಲ ಭಾಗ್ಯ:- ಈ ಯೋಜನೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಡುಗೆ ಅನಿಲ ರಹಿತ 8012 ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 2619 ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ .
Be the first to comment on "ಬಂಟ್ವಾಳ ಕ್ಷೇತ್ರದಲ್ಲಿ 1000 ಕೋಟಿ ರೂ. ಅಭಿವೃದ್ಧಿ ಕಾರ್ಯ"