ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗೆ ಲಯನ್ ಜಿಲ್ಲಾ ಗವರ್ನರ್ ಎಚ್.ಆರ್.ಹರೀಶ್ ಅಧಿಕೃತ ಭೇಟಿ ಕಾರ್ಯಕ್ರಮ ಬಂಟ್ವಾಳ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ತೊಡಂಬಿಲ ಸೇಕ್ರೆಟ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ, ಬೆಂಜನಪದವಿನ ಸರಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲು ವಿಭಾಗದಲ್ಲಿ ಕಲೆ ಮತ್ತು ವೃತ್ತಿಶಿಕ್ಷಣದ ಕೊಠಡಿ ಉದ್ಘಾಟನೆ, ಪ್ರೊಜೆಕ್ಟರ್ ಕೊಡುಗೆ ಒದಗಿಸಲಾಯಿತು. ಬೆಂಜನಪದವಿನ ದ.ಕ.ಜಿಪಂ ಹಿ.ಪ್ರಾ.ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಜೆರಾಕ್ಸ್ ಮಿಷಿನ್ ಕೊಡುಗೆ, ಬಂಟ್ವಾಳ ಎಸ್.ವಿ.ಎಸ್.ವಿದ್ಯಾಗಿರಿಯಲ್ಲಿ ಶೈಕ್ಷಣಿಕ ಕಾರ್ಯಾಗಾರ, ಲಯನ್ಸ್ ಸೇವಾ ಮಂದಿರದ ನಿರ್ಮಲ ಹೃದಯದ ವಿಕಲ ಚೇತನ ಮಕ್ಕಳೊಂದಿಗೆ ಸ್ನೇಹ ಮಿಲನ ಕಾರ್ಯಕ್ರಮ ನಡೆಸಲಾಯಿತು.
ಕ್ಲಬ್ ಎರಡನೇ ಉಪಾಧ್ಯಕ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿಕೊಡಮಾಡಿದ ರಂಗೇಲು ಅಂಗನವಾಡಿ ಕೇಂದ್ರದ ಮೇಲ್ಚಾವಣಿ, ಇಂಟರ್‌ಲಾಕ್ ಹಾಗೂ ಆವರಣಗೋಡೆ ಮತ್ತುಧ್ವಜಸ್ತಂಭವನ್ನು ಉದ್ಗಾಟಿಸಿ ಹಸ್ತಾಂತರಿಸಲಾಯಿತು.
ಬಳಿಕ ಲಯನ್ಸ್ ಸೇವಾ ಮಂದಿರದಲ್ಲಿ ಸ್ನೇಹ ಮಿಲನ ಕಾರ್ಯಕ್ರಮದ ಮೂಲಕ ರಾಜ್ಯಪಾಲರ ಅಧಿಕೃತ ಭೇಟಿಯು ಸಂಪನ್ನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷರಾದ ಜಗದೀಶ ಎಡಪಾಡಿತ್ತಾಯ ಸ್ವಾಗತಿಸಿದರು. ಗವರ್‍ನರ್ ಎಚ್. ಆರ್. ಹರೀಶ್ ಜಿಲ್ಲಾ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಬಂಟ್ವಾಳ ಕ್ಲಬ್‌ನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವೀಲ್‌ಚೈಯರ್, ಜೆರೋಕ್ಸ್ ಮೆಶಿನ್, ಮನೆಕಟ್ಟಲು ಆಥಿಕ ಸಹಾಯ ಹಾಗೂ ಹಲವು ಸೇವೆಗಳನ್ನು ಒದಗಿಸಲಾಯಿತು.
ಉಪಗವರ್‍ನರ್ ದೇವದಾಸ ಭಂಡಾರಿ, ಸಂಪುಟ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, ಜಿ ಆರ್‌ಆರ್ ಲೊಕೇಶ್ ಬೊಳಾರ್ ಪ್ರಾಂತ್ಯಾಧಕ್ಷ ನರಸಿಂಹ ಶೆಟ್ಟಿ ವಲಯಾಧ್ಯಕ್ಷ ಶಿವಾನಂದ ಬಾಳಿಗಾ ಲಯನೆಸ್ ಅಧ್ಯಕ್ಷರಾದ ಚಿತ್ರಾಎಡಪಾಡಿತ್ತಾಯ ಕಾರ್ಯದರ್ಶಿಗಳಾದ ರಾಮಕೃಷ್ಣರಾವ್ ಹಾಗೂ ಸುಜಾತಾ ರವಿಶಂಕರ್. ಕೋಶಾಧಿಕಾರಿಗಳಾದ ರೋಹಿತಾಶ್ವ ಹಾಗೂ ವಸಂತಿಎಲ್. ಶೆಟ್ಟಿ ಉಪಸ್ಥಿತರಿದ್ದರು.
ಹೊಸ ಸದ್ಯಸರು ಮಾಹಿತಿಯನ್ನು ಮಾಜಿ ವಲಯಾಧ್ಯಕ್ಷ ಜಯಂತ್ ಶೆಟ್ಟಿ ವಾಚಿಸಿದರು. ಉಪಾಧ್ಯಕ್ಷ ಸುಧಾಕರ್‌ಆಚಾರ್ಯ ವಂದಿಸಿದರು. ದಾಮೊದರ್ ಹಾಗೂ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳಕ್ಕೆ ಲಯನ್ಸ್ ಗವರ್ನರ್ ಅಧಿಕೃತ ಭೇಟಿ"