- ಬಂಟ್ವಾಳ ಪುರಸಭೆಯಲ್ಲಿ ಚರ್ಚೆಗಳ ಪುನರಾವರ್ತನೆ
ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ ಎನ್ನುವ ಸದಸ್ಯರು, ಥೇಟ್ ವಿರೋಧ ಪಕ್ಷದಂತೆಯೇ ವಾಗ್ಬಾಣ ಹರಿಸುವ ಕೆಲ ಆಡಳಿತ ಪಕ್ಷದ ಸದಸ್ಯರು, ಗಂಭೀರವಾಗಿ ಆರಂಭಗೊಂಡು ಲಘು ಹಾಸ್ಯದ ಮಾತುಗಳೊಂದಿಗೆ ಮುಗಿದ ಸಭೆ. .. ಇದು ಗುರುವಾರ ನಡೆದ ಬಂಟ್ವಾಳ ಪುರಸಭೆ ಮೀಟಿಂಗ್ ಹೈಲೈಟ್ಸ್..
ಏನೇನಾಯಿತು? ಇಲ್ಲಿದೆ ಕೆಲ ಪಾಯಿಂಟ್ಸ್.
- ಪೌರಸಮಸ್ಯೆಗಳಲ್ಲಿ ಪ್ರಮುಖವಾದ ಪಾರ್ಕಿಂಗ್, ಫುಟ್ ಪಾತ್ ಸಮಸ್ಯೆಗಳು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುವ ವ್ಯವಸ್ಥೆಗಳ ಕುರಿತು ಕ್ರಮ ಕೈಗೊಳ್ಳುವ ಕುರಿತು ನಿರ್ಣಯ.
- ಅಧ್ಯಕ್ಷ ರಾಮಕೃಷ್ಣ ಆಳ್ವ ಗೈರುಹಾಜರಿಯಲ್ಲಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ನಿರ್ವಹಣೆ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಮತ್ತು ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಉಪಸ್ಥಿತಿ.
- ಸದಾಶಿವ ಬಂಗೇರ ನಿರ್ಮಲ ಬಂಟ್ವಾಳ ಯೋಜನೆಗೆ ಅಡ್ಡಿಯಾಗುತ್ತಿರುವ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪಕ್ಕ ಅಂಗಡಿಗಳಿಗೆ ಅನಧಿಕೃತವಾಗಿ ಶೀಟ್ ಅಳವಡಿಸಿ ಸಾಮಾಗ್ರಿಗಳನ್ನು ಹೊರಗಡೆ ಇರಿಸಿಕೊಳ್ಳುತ್ತಿರುವುದು, ಗುಜರಿ ಅಂಗಡಿಗಳ ಸಾಮಾಗ್ರಿಗಳನ್ನು ಬೇಕಾ ಬಿಟ್ಟಿ ರಸ್ತೆ ಬದಿ ದಾಸ್ತನು ಇಟ್ಟುಕೊಳ್ಳುತ್ತಿರುವ ಬಗ್ಗೆ ಬರೆದಿರುವ ಪತ್ರ ಚರ್ಚೆಗೆ
- ಅಂಗಡಿಗಳ ಮುಂದಿನ ಶೀಟ್ ತೆರವುಗೊಳಿಸಲು ತಕ್ಷಣ ಕ್ರಮ ಜರುಗಿಸುವ ಬಗ್ಗೆ ನಿರ್ಣಯ
- ಅಧಿಕಾರಿಗಳು ನನ್ನ ಮಾತು ಕೇಳುವುದಿಲ್ಲ. ಹೀಗಿದ್ದ ಮೇಲೆ ನಾನು ಯಾಕೆ ಅಧ್ಯಕ್ಷನಾಗಿ ಇರಬೇಕು ಎಂದು ಪ್ರಶ್ನಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ.
- ಬಿ.ಸಿ.ರೋಡಿನಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಈ ಬಗ್ಗೆ ಈ ಹಿಂದೆ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕೈಕುಂಜೆ ರಸ್ತೆ ಬದಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ದೂರು ಲೋಕೇಶ್ ಸುವರ್ಣ ಅವರಿಂದ.
- ಅಧಿಕೃತವಾಗಿ ನಾಲ್ಕು ಪಾರ್ಕಿಂಗ್‌ಗಳು ಮಾತ್ರ ಇದೆ. ಆದರೆ ಬಿ.ಸಿ.ರೋಡಿನಲ್ಲಿ ಅಲ್ಲಲ್ಲಿ ರಿಕ್ಷಾಪಾರ್ಕಿಂಗ್ ಮಾಡಲಾಗುತ್ತಿದ್ದು ಗ್ರಾಮೀಣ ಭಾಗದ ರಿಕ್ಷಾಗಳು ಇಲ್ಲಿಗೆ ಬರುವುದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿರುವ ಕುರಿತು ದೂರು. ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರನ್ನು ಕರೆಸಿ ಅಭಿಪ್ರಾಯ ಆಲಿಸಿದ ಸಭೆ. ಬಳಿಕ ಮುಂದಿನ ಸಭೆಯಲ್ಲಿ ಪಾರ್ಕಿಂಗ್ ಕುರಿತ ವಿಸ್ತರಿತ ಚರ್ಚೆಗೆ ನಿರ್ಧಾರ.
- ಕಳೆದ ಎರಡೂವರೆ ವರ್ಷದಿಂದ ಪುರಸಭಾ ಕಚೇರಿಯೊಳಗೆ ಕಾರ್ಯಚರಿಸುತ್ತಿರುವಬ್ಯಾಂಕ್ ನಿಂದ ಬಾಡಿಗೆ ವಸೂಲಿ ಮಾಡದ ಬಗ್ಗೆ ಸದಸ್ಯ ಗೋವಿಂದ ಪ್ರಭು ಆಕ್ರೋಶ.
- ಪುರಸಭೆಯಲ್ಲಿ ಲೆಕ್ಕಪತ್ರಗಳು ಸರಿಯಾಗಿರುವುದಿಲ್ಲ ಎಂದು ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಮತ್ತೆ ಆರೋಪ. ಅಂಕಿ, ಅಂಶಗಳೊಂದಿಗೆ ವಿವರಣೆ.
- ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಸದಸ್ಯರ ದೂರು. ಪಕ್ಷಬೇಧ ಮರೆತು ಆಕ್ರೋಶ. ಕ.ನ.ನೀ.ಸ. ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ ತರಾಟೆಗೆ.
- ಚರ್ಚೆಯಲ್ಲಿ ಪಾಲ್ಗೊಂಡವರು: ಬಿ.ಪ್ರವೀಣ್, ಬಿ.ಮೋಹನ್, ಗಂಗಾಧರ್, ಜಗದೀಶ ಕುಂದರ್, ಚಂಚಲಾಕ್ಷಿ, ಎ.ಗೋವಿಂದ ಪ್ರಭು, ಮಹಮ್ಮದ್ ಶರೀಫ್, ಇಕ್ಬಾಲ್ ಗೂಡಿನಬಳಿ, ಮೊನೀಶ್ ಆಲಿ, ವಸಂತಿ ಸಿ, ಲೋಕೇಶ ಸುವರ್ಣ.
Be the first to comment on "ಸಮಸ್ಯೆ ನೂರು, ಪರಿಹಾರಕ್ಕೆ ಬರುವವರು ಯಾರು?"