ಯಾವುದೇ ಪ್ರತಿಷ್ಠೆ, ಸ್ಥಾನಮಾನಕ್ಕಾಗಿ ನಮ್ಮ ಕೆಲಸ ಕಾರ್ಯಗಳು ಇರಕೂಡದು. ನಿಸ್ವಾರ್ಥ ವಾದ ಮನಸ್ಸಿನ ಸೇವೆಯನ್ನು ಸಮಾಜಗುರುತಿಸುತ್ತದೆ.ಸಾಮಾಜಿಕ ಸೇವೆಯಿಂದದೊರೆಯುವತೃಪ್ತಿಎಲ್ಲಾ ಬಗೆಯ ಸನ್ಮಾನ ಪ್ರಶಂಸೆಗಳನ್ನು ಮೀರಿದುದು. ಎಂದು ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಸಂಸ್ಥಾಪಕ ರೋಹಿನಾಥ ಪಾದೆ ಹೇಳಿದರು.
ಮೆಲ್ಕಾರ್ ಬಿರ್ವ ಸೆಂಟರ್‌ನಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ನಡೆದ ಅನ್ವೇಷಣಾ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಅನ್ವೇಷಣಾ ಪ್ರಶಸ್ತಿ-೨೦೧೭ ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಗೌರವ ಕಾರ್ಯದರ್ಶಿ ಬಿ.ತಮ್ಮಯ, ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ., ಶ್ರೀಧರ ಅಮೀನ್ ಉಪಸ್ಥಿತರಿದ್ದರು.
ಯುವವಾಹಿನಿ ಉಪಾಧ್ಯಕ್ಷ ಗಣೇಶ್ ಪೂಂಜೆರಕೋಡಿ ಸ್ವಾಗತಿಸಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು. ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಯುವವಾಹಿನಿಯ ಅನ್ವೇಷಣಾ ಪ್ರಶಸ್ತಿ ಪ್ರದಾನ"