ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ

ವರದಿ  : ಮಹೇಶ್ ಕೃಷ್ಣಮೂರ್ತಿಮಸ್ಕತ್

www.bantwalnews.com

 
 ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ  ಒಮಾನ್  ದೇಶ  ಅಪಾರ ಭಾರತೀಯರ ನೆಲೆಯಾಗಿದ್ದು ,  ಒಮಾನ್ ನಿವಾಸಿ  ಭಾರತೀಯರಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಕೂಡ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ,ದಿನಾಂಕ  16 ಡಿಸೆಂಬರ್ 2017 ರಂದು  ಒಮಾನಿನ  ಸ್ಥಳೀಯ   ‘ಇಸ್ಕಾನ್ ಸಂಸ್ಥೆ ‘  ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರಿಂದ  ರಾಜಧಾನಿ  ನಗರ  ಮಸ್ಕತ್  ನಲ್ಲಿ ಒಂದು ಸುಂದರಕೀರ್ತನ ಮೇಳ” ವನ್ನು ಆಯೋಜಿಸಿದ್ದರು.
 
ಕೀರ್ತನ ಮೇಳದ ಅಂಗವಾಗಿಪ್ರಪ್ರಥಮವಾಗಿ,  ಮಕ್ಕಳು ಹಿರಿಯರಾದಿಯಾಗಿ,”ಹರೇರಾಮ ಹರೇಕೃಷ್ಣ”  ಜಪನಾಮಾವಳಿಯನ್ನು ವಿವಿಧ ರಾಗಗಳಲ್ಲಿ ಪ್ರಸ್ತುತ ಪಡಿಸಿದರು.
 
 ಕರ್ನಾಟಕದಿಂದ ಆಗಮಿಸಿದ್ದ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರುವಿವಿಧ ಹರಿ ಕೀರ್ತನೆಗಳಿಂದ ಮತ್ತು ಭಜನ್ ಗಳ ಗಾಯನದಿಂದಸಭಿಕರನ್ನು ಭಕ್ತಿ ಪರವಶರನ್ನಾಗಿ ಮಾಡಿದರು.  ಸಭಿಕರುತಾವೂ ಸಹಎಲ್ಲ ಹಾಡುಗಳಿಗೆ ದನಿಗೂಡಿಸಿಕರತಾಲಗಳಿಂದ ಆನಂದಿಸಿದರು.
 
ಮೀರಾ ಭಜನ್ “ಕೀನು ಸಂಗ್ ಖೇಲು ಹೋಲಿ“,   ” ವನಮಾಲಿ ರಾಧಾರಮಣ” , “ಶ್ರೀ ರಾಧೆ ಗೋವಿಂದ ಮನ ಭಜಲೆ ಹರಿಕಾ ಪ್ಯಾರಾ ನಾಮ್ಹೈ“,  “ರಾಧಾ ರಮಣ ಮುಕುಂದ ಮಾಧವ” ಮುಂತಾದ ಭಜನ್ ಗಳನ್ನು ಅಂಜಲಿಯವರು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು .
 
ಅಂಜಲಿಯವರೊಂದಿಗೆಅನುಪಮಾ ಮಹೇಶ್ಶೋಭಿತಾ ಮಾತಾಜಿ ಕುತನುಶ್ರಿ ಸಹಗಾಯನದಲ್ಲಿ ಇಂಪಾಗಿ ಹಾಡಿದರುಶ್ರೀಉತ್ಪಲ ಪ್ರಭುಅವರು ಢೋಲಕ್ ನಲ್ಲಿ ಉತ್ತಮ ಸಹಕಾರ ನೀಡಿದರು.
 
ಕೀರ್ತನ ಮೇಳಕ್ಕೆ  ಇಸ್ಕಾನ್ ಅನುಯಾಯಿಗಳಷ್ಟೇ ಅಲ್ಲದೆ,  ಮಸ್ಕತ್ ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಆಗಮಿಸಿದ್ದು ಕೃಷ್ಣಸಂಕೀರ್ತನೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಅನುಭವಿಸಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
 
ಇಸ್ಕಾನ್ ಮಸ್ಕತ್  ಅಲ್ ಖ್ವೇರ್ ಘಟಕದ ಮುಖ್ಯಸ್ಥರಾದ “ಬಲದಾಯಿನಿ ಮಾತಾಜಿ” ಮತ್ತು ರಾಧಾ ಹರಿಣಿ ಮಾತಾಜಿ ಯವರ ಸಮರ್ಥನೇತೃತ್ವದಲ್ಲಿ  ಕಾರ್ಯಕ್ರಮ ಆಯೋಜನಗೊಂಡಿತ್ತು
 
ಅಂಜಲಿ ಹಳಿಯಾಳ್ ಸಂಗೀತದ ಹಾದಿಯ ಪಯಣ
 
 ವೃತ್ತಿಯಾಗಿ  ಭಾರತ ಸರ್ಕಾರದ    ಬಿ ಎಸ್ ಎನ್ ಎಲ್ ನಲ್ಲಿ  ಲೇಖಾಧಿಕಾರಿ ಹುದ್ದೆಯನ್ನು ಆರಿಸಿಕೊಂಡು,   25 ವರ್ಷ ಕ್ಕೂ ಹೆಚ್ಚು ಸೇವೆಸಲ್ಲಿಸಿತಮ್ಮ ಸಂಗೀತಪ್ರೇಮದಿಂದ ಈಗ ಸ್ವಯಂ ನಿವೃತ್ತಿ ಪಡೆದಿರುವ ಶ್ರೀಮತಿ ಅಂಜಲಿ  ದಕ್ಷಿಣ ಭಾರತದಪ್ರಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ  ಸಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತ ಕಲಿಯಲು ಪ್ರಾರಂಭಿಸಿದ್ದು ಕೆಲವು ವರ್ಷಗಳ ಹಿಂದೆ 1997 ರಲ್ಲಿ. 
 
2004 ರ ಅನಂತರ ಮಂಗಳಾ  ಹೆಗಡೆ,  ಮತ್ತು ಕಾಶಿನಾಥ್ ಪತ್ತಾರ್ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದಅಂಜಲಿ  ಹಳಿಯಾಳ್ ಅವರು ದೂರದರ್ಶನದಚಂದನ ವಾಹಿನಿಯ “ಮಧುರ ಮಧುರವೀ ಮಂಜುಳ ಗಾನ ”  ಎಂಬ ಅತ್ಯಂತ ಜನಪ್ರಿಯಕಾರ್ಯಕ್ರಮ ದಲ್ಲಿ ಹಲವಾರು ಗೀತೆಗಳನ್ನು  ಪ್ರಸ್ತುತ ಪಡಿಸಿದ್ದಾರೆ
 
 ಖ್ಯಾತ  ಹಿನ್ನೆಲೆ ಗಾಯಕರಾದ ಶ್ರೀ ಎಸ್  ಪಿ  ಬಾಲಸುಬ್ರಮಣ್ಯಂ  ಜೊತೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಲವಾರು ಯುಗಳ ಗೀತೆಹಾಡಿದ  ಅಂಜಲಿ  ಬೆಂಗಳೂರಿನ ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರ ಸಮ್ಮುಖದಲ್ಲಿ 2015 ರ  ಗಾಂದಿ  ಜಯಂತಿ ಆಚರಣೆಯ  ಕಾರ್ಯಕ್ರಮದಲ್ಲಿ ಹಾಡಿದ್ದಾರೆ.
 
ಮೈಸೂರು ಮಲ್ಲಿಗೆಯ ಕವಿ ಶ್ರೀ.ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ26  ಜನವರಿ 2015 ರಂದುಕೆ.ಎಸ್.ನರಸಿಂಹಸ್ವಾಮಿ  ಅವರ ವಿರಳ ಗೀತೆಗಳನ್ನು ಸಂಗೀತಕ್ಕೆ  ಅಳವಡಿಸಿ ತಮ್ಮ ಧ್ವನಿಯಲ್ಲಿ “ಅಂಕುರ ” ಎಂಬ  ಧ್ವನಿ ಸುರುಳಿ ಯನ್ನುಹೊರತಂದಿರುವ  ಅಂಜಲಿ  ಹಳಿಯಾಳ್ ಇಂಗ್ಲೆಂಡಿನ ಮ್ಯಾಂಚೆಸ್ಟರ್  ನಲ್ಲಿ ಗಜಲ್ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ  ಹಾಗು ಸಂಯುಕ್ತ ಅರಬ್ಸಂಸ್ಥಾನದ  ದುಬೈಯಲ್ಲಿ  ಕನ್ನಡ ಚಿತ್ರಗೀತೆಗಳ  ಸಂಗೀತ  ಕಾರ್ಯಕ್ರಮ ನೀಡಿದ್ದಾರೆ.
 
2014 ರಲ್ಲಿ ಪುಣೆ ಕರ್ನಾಟಕ ಸಂಘದಲ್ಲಿ ಪುರಂದರ ಪುಣ್ಯತಿಥಿಯ ಸಂದರ್ಭದಲ್ಲಿ ಮೂರು ತಾಸು  ನಿರಂತರ ಪುರಂದರ ದಾಸರ ರಚನೆಗಳನ್ನುಹಾಡಿದ ಹೆಗ್ಗಳಿಕೆ ಅಂಜಲಿ ಹಳಿಯಾಳ್ ಅವರದ್ದು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*