ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಹಾಗೂ ಗಡಿ ಪ್ರದೇಶಾಭಿವೃದ್ಧಿ ಯೋಜನೆಗಳಲ್ಲಿ ಲೋಕೋಪಯೋಗಿ ಇಲಾಖೆಗೆ 2017-18ನೇ ಸಾಲಿಗೆ ನಿಗದಿಪಡಿಸಲಾದ 1.23 ಕೋಟಿ ರೂಪಾಯಿ ಅನುದಾನದ 9 ರಸ್ತೆ ಕಾಮಗಾರಿಗಳಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಯಿ ಗ್ರಾಮದ ಕುದ್ಕೋಳಿ ಮಾದೇರಿ ರಸ್ತೆಗೆ 15.89 ಲಕ್ಷ ರೂ, ಇರ್ವತ್ತೂರು ಗ್ರಾಮದ ಕಲ್ಲಡ್ಕ ಪರಾರಿ; ಉಳಿ ಗ್ರಾಮದ ಬರೆ ಕುಂಞಲಿಕೆ ರಸ್ತೆ ಹಾಗೂ ಪೆರಾಜೆ ಗ್ರಾಮದ ಸಾದಿಕುಕ್ಕು ಬಡೆಕೋಡಿ ರಸ್ತೆಗೆ ತಲಾ 15 ಲಕ್ಷ ರೂ, ಮೂಡುಪಡುಕೋಡಿ ಗ್ರಾಮದ ಬಂಗೇರೆಕೆರೆ ಕೊಮ್ಮಲೆ ರಸ್ತೆಗೆ 10 ಲಕ್ಷ ರೂ, ಅಜ್ಜಿಬೆಟ್ಟು ಗ್ರಾಮದ ಕುಂಡೋಳಿ ನೆಲ್ಲಿಗುಡ್ಡೆ ರಸ್ತೆಗೆ 12 ಲಕ್ಷ ರೂ, ಕಾವಳಪಡೂರು ಗ್ರಾಮದ ತಾಳಿತ್ತೊಟ್ಟು ರಸ್ತೆಗೆ 16.37 ಲಕ್ಷ ರೂ, ಕರೋಪಾಡಿ ಗ್ರಾಮದ ಚಲ್ಲಂಗಾರು ರಸ್ತೆಗೆ 12.89 ಲಕ್ಷ ರೂ, ಕನ್ಯಾನ ಗ್ರಾಮದ ಮರ್ತನಾಡಿ ರಸ್ತೆಗೆ 11.28 ಲಕ್ಷ ರೂ ಅನುದಾನ ನಿಗದಿಪಡಿಸಲಾಗಿದ್ದು ಕಾಮಗಾರಿ ಶೀಘ್ರವಾಗಿ ಅನುಷ್ಠಾನಗೊಳ್ಳಲಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಂಜುಳಾ ಮಾವೆ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಲೂಕು ಪಂಚಾಯತ್ ಸದಸ್ಯರಾದ ಉಸ್ಮಾನ್ ಕರೋಪಾಡಿ, ಮಂಜುಳಾ ಕುಶಲ, ಧನಲಕ್ಷ್ಮೀ ಬಂಗೇರ, ಜಿನರಾಜ ಅರಿಗ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "1.23 ಕೋಟಿ ರೂ ಅನುದಾನದ ರಸ್ತೆ ಕಾಮಗಾರಿ ಶಿಲಾನ್ಯಾಸ"