ಸ್ಪರ್ಧೆಗಳನ್ನು ಸಹಜ ಮತ್ತು ಸ್ಫರ್ಧಾತ್ಮಕ ಮನೋಭಾವದಿಂದ ಸ್ವೀಕರಿಸುವುದು ಮುಖ್ಯ. ತರಗತಿಯೊಳಗಿನ ಶಿಕ್ಷಣ ಒಂದೇ ಜೀವನವನ್ನು ರೂಪಿಸುವುದಿಲ್ಲ. ತರಗತಿಯ ಹೊರಗಿನ ಪರಿಸರವೂ ಕೂಡ ಜೀವನವನ್ನು ರೂಪಿಸಲು ಮುಖ್ಯವಾಗಿರುತ್ತದೆ. ಸ್ಫರ್ಧೆಗಳು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಂತಿರಬೇಕು ಎಂದು ಕುಂಬಳೆಯ ಸೈಂಟ್ ಮೋನಿಕಾ ಆಂಗ್ಲ ಮಾಧ್ಯಮ ಸ್ಕೂಲ್ ಸಂಚಾಲಕರಾದ ರೆವರೆಂಡ್ ಫಾ. ಮಾರ್ಸೆಲ್ ಸಲ್ದಾನ ಹೇಳಿದರು..
ಬಂಟ್ವಾಳದ ಶ್ರಿ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ಎಸ್‌ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ರಸಪ್ರಶ್ನೆ ’ಸಿದ್ಧಾಂತ್- ೨೦೧೭’ ರನ್ನು ಉದ್ಘಾಟಿಸಿ ಮಾತನಾಡಿದರು
ಶ್ರ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ ಇದರ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇದನ್ನು ಆಯೋಜಿಸಿದ್ದು, ತಾಲೂಕಿನ ೨೨ ಪ್ರೌಢಶಾಲೆಯ ೧೯೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಾರ್ಯಕ್ರಮವನ್ನು ೨ ಹಂತದಲ್ಲಿ ಆಯೋಜಿಸಲಾಯಿತು. ಮೊದಲ ಹಂತವನ್ನು ಆಯಾ ಪ್ರೌಢಶಾಲೆಯಲ್ಲಿ ಆಯೋಜಿಸಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೋಲ್ಡನ್ ಟಿಕೆಟ್ ಟು ಸಿದ್ಧಾಂತ್ ನೀಡಲಾಯಿತು. ಅಂತಿಮ ಹಂತದಲ್ಲಿ ೨೧ ಪ್ರೌಢಶಾಲೆಯ ೪೨ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲPರಾದ ಕೂಡಿಗೆ ಪ್ರಕಾಶ್ ಶೆಣೈ ಮಾತನಾಡಿ ’ಸಿದ್ಧಾಂತ್-೨೦೧೭’ ರ ಆಯೋಜಕರನ್ನು ಅಭಿನಂಧಿಸುತ್ತಾ ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮೂಡಿಬರಲಿ ಎಂದು ಆಶಿಸಿದರು
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್, ಕಾರ್ಯಕ್ರಮದ ಸಂಯೋಜಕಿ ಅಖಿಲಾ ಪೈ ಮತ್ತು ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕ ಚರಿತ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗ್ರೀಷ್ಮಾ ಸಲ್ಮಾ ವೇಗಸ್ ವಂದಿಸಿದರು. ನವ್ಯಾ ಕಿಣಿ ಕಾರ್ಯಕ್ರಮವನ್ನು ನಿರೂಪಿಸಿದರು
Be the first to comment on "ಎಸ್.ವಿ.ಎಸ್.ಕಾಲೇಜಿನಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ"