ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಿಸಿಯೂಟ ಸ್ಥಗಿತಗೊಳಿಸಿದ ವಿಚಾರ ಶನಿವಾರ ಇಲ್ಲಿನ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವದಲ್ಲೂ ವ್ಯಕ್ತವಾಯಿತು. ಸರಕಾರದ ಧೋರಣೆಯನ್ನು ಖಂಡಿಸಿ, ಅಣಕು ಪ್ರದರ್ಶನದ ಮೂಲಕ ಸರಕಾರ ಮತ್ತು ಸಚಿವರಿಗೆ ಧಿಕ್ಕಾರ ಕೂಗಿ, ಮತ್ತೊಮ್ಮೆ ಪ್ರತಿಭಟನೆಯನ್ನು ನಡೆಸಿದರು.
ಶನಿವಾರ ಸಂಜೆಯ ಬಳಿಕ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ, ಪದವಿ ತರಗತಿಗಳ ೩೩೦೦ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ , ಸಾಹಸಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರದರ್ಶನ, ನೃತ್ಯ, ಭಜನೆ, ಮಲ್ಲಕಂಭ, ಘೋಷ್ ಟಿಕ್ ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ, ಏಕಚಕ್ರ ಸಮತೋಲನ, ಬೆಂಕಿ ಸಾಹನ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯಪೂರ್ಣವಾಗಿ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತವಾದ ಪ್ರದರ್ಶನ ಇಲ್ಲಿ ನಡೆದಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ದೇಶಭಕ್ತಿ ಸಂಸ್ಕಾರ ಅಡಕವಾಗಿದೆ. ಶಿಸ್ತಿಗೆ ಪ್ರಾಮುಖ್ಯತೆ ನೀಡುವುದೇ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಕಾರಣ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಟಾಟಾ ಗ್ರೂಪ್ ನ ಮಾಜಿ ಚೇರ್‍ಮನ್ ಸೈರಸ್ ಮಿಸ್ಟ್ರೀ, ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಆರ್ ಸಿ. ಸಿನ್ಹಾ, ತ್ರಿಪಾಠಿ ಗ್ರೂಪ್ಸ್ ನ ಮಿಥಿಲೇಶ್ ಕುಮಾರ್ ತ್ರಿಪಾಠಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ, ಉದ್ಯಮಿ ರವೀಂದ್ರ ಪೈ, ಶಾಸಕರಾದ ಮುನಿರಾಜು, ಸಂಜಯ್ ಬಿ.ಪಾಟೀಲ್, ಶಶಿಕಲಾ ಎ.ಜೊಲ್ಲೆ, ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ, ರಾಜು ಕಾಗೆ, ಮಾಜಿ ಶಾಸಕರಾದ ಎಂ.ಸಿ.ಅಶ್ವತ್ಥ, ಸುರೇಶ್ ಗೌಡ ಪಾಟೀಲ, ಉದ್ಯಮಿ ಅಶೋಕ್ ಕುಮಾರ್ ರೈ, ಕೊಲ್ಲೂರು ಮೂಕಾಂಬಿಕಾ ದೇವಳ ಧರ್ಮದರ್ಶಿ ರಾಜೇಶ್ ಕಾರಂತ್, ಉದ್ಯಮಿ ಶಿವಕುಮಾರ್ ಗೌಡ, ಉದ್ಯಮಿ ರಾಜೇಂದ್ರ ಮೈಸೂರು, ಬಿಜೆಪಿ ಮುಖಂಡರಾದ ಎಂ.ಸಿ.ಶ್ರೀನಿವಾಸ್, ಸದಾಶಿವ, ಪ್ರಮುಖರಾದ ರಮೇಶ್, ವರಪ್ರಸಾದ್ ರೆಡ್ಡಿ, ಧನಂಜಯ್ ಸರ್ ದೇಸಾಯಿ, ರಾಘವೇಂದ್ರ ಶೆಟ್ಟಿ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರಹೀಂ ಉಚ್ಚಿಲ್, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಶಾಲಾ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪದವಿ ಕಾಲೇಜು ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಸಂತ ಬಲ್ಲಾಳ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಮೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿರಾಜ ಕಣಂತೂರು, ಪ್ರಮುಖರಾದ ಸತೀಶ್ ಕುಮಾರ್ ಶಿವಗಿರಿ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
Be the first to comment on "ಕಲ್ಲಡ್ಕ ಕ್ರೀಡೋತ್ಸವದಲ್ಲೂ ವ್ಯಕ್ತಗೊಂಡ ಬಿಸಿಯೂಟ ಸ್ಥಗಿತ ವಿಚಾರ"