www.bantwalnews.com REPORT
ಮಾಧ್ಯಮಗಳು ಎಚ್ಚರಿಸುತ್ತಲೇ ಬಂದಿದ್ದರೂ ಕಳವು ನಿಯಂತ್ರಣಕ್ಕೆ ಇನ್ನೂ ಸೀರಿಯಸ್ ಆಗಿ ಯಾರೂ ತೀರ್ಮಾನಕ್ಕೆ ಬಂದಿಲ್ಲ ಎಂಬ ಜನರ ಮಾತಿಗೆ ಪುಷ್ಠಿ ನೀಡುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಇಡ್ಕಿದು ಗ್ರಾಮದ ಉರಿಮಜಲು ವಿಜಯ ಬ್ಯಾಂಕ್ ಶಾಖೆಯ ಬಾಗಿಲು ಮರಿದು ಒಳಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನ ನಡೆಸಿ, ವಿಫಲವಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮುಖ್ಯ ದ್ವಾರದ ಗ್ರಿಲ್ ಮುರಿದು ಒಳ ನುಗ್ಗಿದ ಕಳ್ಳರು ಲಾಕರ್ ಮುರಿಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PLS CLICK FOR BANTWALNEWS REPORT ABOUT VITTLA CRIME


Be the first to comment on "ಮತ್ತೆ ವಿಟ್ಲ ಪರಿಸರದಲ್ಲಿ ಕಳವು ಯತ್ನ, ಈ ಬಾರಿ ವಿಜಯಾ ಬ್ಯಾಂಕಿನತ್ತ ಕಣ್ಣು!"