ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರೊಂದಿಗೆ ಎಸ್.ಡಿ.ಎಂ,ಸಿ, ಶಾಲಾಭಿವೃದ್ಧಿ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಊರಿನವರು ಕೈಜೋಡಿಸಿದಾಗ ಮಾದರಿ ಶಾಲೆಯನ್ನು ನಿರ್ಮಿಸಬಹುದೆಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ತಿಳಿಸಿದರು.
ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಇರಾ ತಾಳಿತ್ತಬೆಟ್ಟು ಶಾಲಾ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಆಗಮಿಸಿ ಶುಭ ಹಾರೈಸಿದರು. ಕುರ್ನಾಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಡಿ.ಎಸ್ ಗಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅನ್ನಛತ್ರಕ್ಕೆ ಜಿಲ್ಲಾ ಪಂಚಾಯತ್ ಅನುದಾನ ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ಅಡಪ, ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ತಿಮ್ಮಪ ರೈ, ಚುಟುಕು ಸಾಹಿತ್ಯ ಪರಿಷತ್ ನ ಜಿಲ್ಲಾ ಗೌರವಾಧ್ಯಕ್ಷರಾದ ನೇಮು ಪೂಜಾರಿ ಇರಾ, ಪುಷ್ಪರಾಜ್ ಕುಕ್ಕಾಜೆ, ಗುರುಪ್ರಸಾದ್ ರಾವ್ ಪಂಜಿಕಲ್ಲು, ಎ.ಡಿ.ಎಂ,ಸಿ ಅಧ್ಯಕ್ಷರಾದ ಮುರಳೀಧರ ಭಂಡಾರಿ, ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ಉಪಸ್ಥಿತರಿದ್ದರು.
ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ಮಲ್ಲಿಕಾ ಹಾಗೂ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಲ್ವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಶಿಕ್ಷಕ ವೃಂದ ಎ.ಡಿ.ಎಂ,ಸಿ ಸದಸ್ಯರು, ತಾಯಂದಿರ ಸಮಿತಿ, ಸುರಕ್ಷಾ ಸಮಿತಿ, ಅಕ್ಷರ ದಾಸೋಹ ಸಿಬ್ಬಂದಿಯನ್ನು ಗೌರವಿಸಲಾಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶಶಿ ಬಿ ಸ್ವಾಗತಿಸಿ ಸಹ ಶಿಕ್ಷಕಿ ಸೌಮ್ಯ ಎಚ್ ಮತ್ತು ಜೋನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.
ಊರಿನ ಹಿರಿಯರಾದ ಮಂಜುನಾಥ ಡಿ ಶೆಟ್ಟಿ ಬೆಳಗ್ಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಚಂದ್ರಾವತಿ, ಮೊಯಿದ್ದಿನ್ ಕುಂಞ ಸಂಪಿಲ, ದಾನಿಗಳಾದ ವಿಶ್ವನಾಥ ಕೊಟ್ಟಾರಿ, ಪ್ಲೋರಿನ್ ಡಿಸಿಲ್ವ, ಪ್ರಗತಿಪರ ಕೃಷಿಕರಾದ ನಿಶ್ಚಲ್ ಶೆಟ್ಟಿ ಕಲ್ಲಾಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿವಿಧ ಸ್ವರ್ಧೆಗಳಲ್ಲಿ ವಿಜೀತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
Be the first to comment on "ಶಾಲಾಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಚಂದ್ರಹಾಸ ಕರ್ಕೇರ"