ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದಲ್ಲಿ ಇರುವ ಪ್ರಸಿದ್ಧ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 23ರಂದು ಗುರುವಾರ ರಾತ್ರಿ 1 ಗಂಟೆಗೆ ವರ್ಷಾವಧಿ ಕೋಲ ನಡೆಯಲಿದೆ.
ಆ ಪ್ರಯುಕ್ತ ಭಕ್ತರು ಆಗಮಿಸಿ ಶ್ರೀ ಕಲ್ಲುರ್ಟಿ ದೈವದ ಸಿರಿಮುಡಿ ಗಂಧ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತಾಧಿಕಾರಿ ಎ.ಸಿ.ರೇಣುಕಾ ಪ್ರಸಾದ್ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಷಾವಧಿ ಕೋಲದ ಹಿನ್ನೆಲೆಯಲ್ಲಿ 22 ಮತ್ತು 23ರಂದು ನಾನಾ ಕಾರ್ಯಕ್ರಮಗಳು ನಡೆಯಲಿವೆ. 22ರಂದು ಸಂಜೆ 5.59ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ ಪಣೋಲಿಬೈಲು ಶ್ರೀ ಕೃಷ್ನಾ ಭಜನಾ ಮಂದಿರದಿಂದ ಕುಣಿತ ಭಜನೆ, 6.30ರಿಂದ ೮ರವರೆಗೆ ಸೌಮ್ಯ ಸುಂದ್ರ ರಾವ್ ಅವರಿಂದ ಭರತನಾಟ್ಯ ಮತ್ತು ನೃತ್ಯ ವೈಭವ ನಡೆಯಲಿದೆ. ರಾತ್ರಿ 8 ಗಂಟೆಯಿಂದ 9ವರೆಗೆ ಅಮ್ಮ ಡ್ಯಾನ್ಸ್ ಗ್ರೂಪ್ ಮಾರ್ನಬೈಲ್ ಅವರಿಂದ ನೃತ್ಯ, 9ರಿಂದ 12ವರೆಗೆ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ಸಾಮಾಜಿಕ ನಾಟಕ ಒವೂಲ ಒಂತೆ ದಿನಾನೇ ಪ್ರದರ್ಶನಗೊಳ್ಳುವುದು.
23ರಂದು ಬೆಳಗ್ಗೆ 9ರಿಂದ ನವಕ, ಕಲಶ ಪ್ರಧಾನ ಮತ್ತು 12 ತೆಂಗಿನ ಕಾಯಿಯ ಗಣಹೋಮ, 11ರಿಂದ ನಾಗತಂಬಿಲ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 2.30ರಿಂದ : ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ ಪಣೋಲಿಬೈಲು ಇವರಿಂದ ಭಜನೆ, 3.30ರಿಂದ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಭಜನಾ ಮಂಡಳಿ ಇವರಿಂದ ಭಜನೆ, 4.30ರಿಂದ ಗೌರಿ ಗಣೇಶ ಭಜನಾ ಮಂಡಳಿ, ತೊಕ್ಕೊಟ್ಟು, 5.30ರಿಂದ ಶ್ರೀ ಕೃಷ್ಣ ಭಜನಾ ಮಂದಿರ ಕುಡುಮೂನ್ನೂರು 6 ರಿಂದ ಕೃಷ್ಣ ಭಜನಾ ಮಂದಿರದಲ್ಲಿ ಭಜನೆ ನಡೆಯಲಿದೆ. ರಾತ್ರಿ 7ರಿಂದ ಪಣೋಲಿಬೈಲ್ ಶ್ರಿಕೃಷ್ಣ ಭಜನಾ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ತೆರಳುವುದು. ಬಳಿಕ ಯಕ್ಷಗಾನ ಬಯಲಾಟ ಮೋಕ್ಷ ಸಂಗ್ರಾಮ ನಡೆಯಲಿದೆ.
ಇದರಲ್ಲಿ ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಅಕ್ಷಯ ಮಾರ್ನಾಡು, ದಿನೇಶ್ ಶೆಟ್ಟಿ ಕಾವಳಕಟ್ಟೆ, ವಿಷ್ಣು ಶರ್ಮಾ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಮೋಹನ ಕುಮಾರ್ ಅಮ್ಮುಂಜೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಸಂತೋಷ ಮಾನ್ಯ, ಮಾಧವ ಬಂಗೇರ ಪಾಲ್ಗೊಳ್ಳುವರು. ರಾತ್ರಿ 10.30ರಿಂದ 11.30ವರೆಗೆ ತುಳು ಅಪ್ಪೆ ಕಲಾವಿದರು ಬಂಟ್ವಾಳ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ 1 ತನಕ ದೀಪಕ್ ರೈ ಪಾಣಾಜೆ, ಜೆ.ಪಿ ತೂಮಿನಾಡು, ರಾಜೇಶ್ ಮುಗುಳಿ, ಪ್ರಕಾಶ್ ತೂಮಿನಾಡು ಅವರಿಂದ ತೆಲಿಕೆ ಬಂಜಿ ನಿಲಿಕೆ ಕಾರ್ಯಕ್ರಮ ನಡೆಯುವುದು. ಬಳಿಕ ರಾತ್ರಿ 1ರಿಂದ ವರ್ಷಾವ ಕೋಲವು ಜರಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.
Be the first to comment on "23ರಂದು ನಡುರಾತ್ರಿ ಪಣೋಲಿಬೈಲಿನಲ್ಲಿ ವರ್ಷಾವಧಿ ಕೋಲ"