ಹಾಲು ಎಂದಾಕ್ಷಣ ಎಲ್ಲರಿಗೂ ಅದ ಆರೋಗ್ಯಕ್ಕೆ ಒಳ್ಳೆಯದು ಎಂದಷ್ಟೇ ತಿಳಿದಿದಿದೆ. ಆದರೆ ಬಹು ಪಾಲು ಜನರಿಗೆ ಯಾವ ಸಂದರ್ಭದಲ್ಲಿ, ಯಾವ ರೀತಿಯಾಗಿ ಉಪಯೋಗಕ್ಕೆ ಬರುತ್ತದೆ ಎಂದು ತಿಳಿದಿಲ್ಲ. ಹಾಲು ಒಂದು ಸಮತೋಲಿತ ಆಹಾರವಾಗಿದೆ.
- ಬಳಲಿ ಬಾಯಾರಿ ಮನೆಗೆ ಬಂದಾಗ 1 ಲೋಟ ಹಾಲು ಕುಡಿದರೆ ಶರೀರಕ್ಕೆ ಮುದ ನೀಡುತ್ತದೆ,ಆಯಾಸ ನಿವಾರಿಸುತ್ತದೆ ಮತ್ತು ಶರೀರದ ಧಾತುಗಳಿಗೆ ಕೂಡಲೇ ಬಲವನ್ನು ನೀಡುತ್ತದೆ.
- ಹಾಲಿನಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದು ಮಕ್ಕಳಲ್ಲಿ ಮೂಳೆಯ ಹಾಗು ಹಲ್ಲುಗಳ ಬೆಳವಣಿಗೆಗೆ ಹಾಗು ವಯಸ್ಕರಲ್ಲಿ ಮೂಳೆಯ ದೃಢತೆಗೆ ಸಹಕಾರಿಯಾಗಿದೆ.
- ಒಣ ಚರ್ಮ ಇದ್ದು ,ಚರ್ಮದ ಮೇಲ್ಪದರ ಬಿರಿಯುವುದಿದ್ದರೆ ಚರ್ಮದ ಮೇಲೆ ಹಸಿ ಹಾಲನ್ನು ಹಚ್ಚಬೇಕು.ಇದರಿಂದ ಚರ್ಮವು ನುಣುಪಾಗಿ ಕಾಂತಿ ಅಧಿಕವಾಗುತ್ತದೆ.
- ಕಾಲಿನ ಹಿಮ್ಮಡಿ ಒಡೆಯುವುದಿದ್ದರೆ ಕಾಲನ್ನು ಪ್ರತಿನಿತ್ಯ ಹದಾ ಬೆಚ್ಚಗಿರುವ ಹಾಲಿನಲ್ಲಿ ಮುಳುಗಿಸಿ ಇಡಬೇಕು.
- ಮೈಗ್ರೈನ್ ತಲೆ ನೋವಿನಿಂದ ಬಳಲಿತ್ತಿರುವವರು ಕುದಿಸಿ ಆರಿಸಿದ ಹಾಲಿಗೆ ಸಕ್ಕರೆ ಹಾಕಿ ಕುಡಿಯಬೇಕು
- ಮುಟ್ಟಿನ ಮೊದಲು ಆಯಾಸ ಹಾಗು ಮಾನಸಿಕ ಕಿರಿಕಿರಿಯಾಗುತ್ತಿದ್ದರೆ ಒಂದು ಲೋಟ ಹಾಲು ಸೇವಿಸಬೇಕು.
- ಅತಿಯಾದ ಖಾರ ಅಥವಾ ಮಸಾಲೆ ಪದಾರ್ಥ ಸೇವಿಸಿ ಹೊಟ್ಟೆ ಹಾಗೆ ಎದೆ ಉರಿ ಇದ್ದರೆ ಕುದಿಸಿ ಆರಿಸಿದ ತಂಪಾದ ಹಾಲನ್ನು ಕುಡಿಯಬೇಕು.
- ಹಾಲು ಜಠರ ಹಾಗು ಕರುಳಿಗೆ ತೇವಾಂಶವನ್ನು ನೀಡುವುದರ ಮೂಲಕ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ.
- ಹೊಟ್ಟೆಯಲ್ಲಿ ಹುಣ್ಣು ಇರುವವರು ಪ್ರತಿದಿನ ಹಾಲು ಕುಡಿಯುವುದರಿಂದ ಹುಣ್ಣು ವಾಸಿಯಾಗಲು ಸಹಕರಿಸುತ್ತದೆ.
- ಹಾಲು ರಕ್ತ ಹೆಪ್ಪು ಕಟ್ಟುವುದನ್ನು ತಡೆಯುವುದರ ಮೂಲಕ ರಕ್ತ ನಾಳಗಳಲ್ಲಿ ಸರಾಗವಾಗಿ ರಕ್ತ ಪರಿಚಲನೆಯಾಗಲು ಸಹಕರಿಸುತ್ತದೆ.
- ತಂಪಾದ ಹಾಲನ್ನು ಕುಡಿಯುವುದರಿಂದ ಮೂಗಿನ ರಕ್ತಸ್ರಾವ, ಮುಟ್ಟಿನ ಅತಿಯಾದ ರಕ್ತಸ್ರಾವ ಇತ್ಯಾದಿಗಳು ಕಡಿಮೆಯಾಗುತ್ತದೆ.
- ಹಾಲನ್ನು ತಲೆಗೆ ಧಾರೆ ಎರೆಯುವುದರಿಂದ ನಿದ್ರಾಹೀನೆತೆ, ತಲೆನೋವು ಕಡಿಮೆಯಾಗುತ್ತದೆ.
- ದನದ ಹಾಲು ದೊಡ್ಡ ಕರುಳಿನ ಸ್ನೇಹಿಯಾಗಿದ್ದು ಕರುಳಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
- ದನದ ಹಾಲಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ನು ಕಡಿಮೆಯಾಗುತ್ತದೆ ಮತ್ತು ಗಂಟಲು ಒಣಗುವುದು ದೂರವಾಗುತ್ತದೆ.
- ಹಾಲಿನ ಸೇವನೆಯಿಂದ ಶರೀರದ ಮಾಂಸ,ಮೂಳೆ ಇತ್ಯಾದಿ ಧಾತುಗಳು ದ್ರುಢವಾಗುತ್ತವೆ.
- ಸಂಧುಗಳ ಸವೆತ ಇದ್ದಾಗ ಹಾಲನ್ನು ಸಂಧುಗಳ ಮೇಲೆ ಲೇಪಿಸಿದರೆ ನೋವು ಕಡಿಮೆಯಾಗುತ್ತದೆ ಮತ್ತು ಸಂಧುಗಳು ದ್ರುಢವಾಗಿರಲು ಸಹಕರಿಸುತ್ತದೆ.
- ಹಾಲು ಬುದ್ಧಿ ಹಾಗು ಮೇಧಾ ಶಕ್ತಿ ಹಾಗು ವ್ಯಾಧಿ ಕ್ಷಮತ್ವವನ್ನು ಹೆಚ್ಚಿಸುತ್ತದೆ.
Be the first to comment on "ಹಾಲು ಹೇಗೆ ಒಳ್ಳೆಯದು?"