ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಯುನೈಟೆಡ್ ಪೆರುವಾಯಿ ಧಮಾಕ ಸೀಸನ್–2 ಪ್ರಯುಕ್ತ ಮೈದಾನದಲ್ಲಿ ಗಮ್ಮತ್ ವಿಶೇಷ ಕಾರ್ಯಕ್ರಮ ಭಾನುವಾರ ನಡೆಯಿತು.

ವಿಟ್ಲ ಸಮೀಪದ ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಯುನೈಟೆಡ್ ಪೆರುವಾಯಿ ಧಮಾಕ ಸೀಸನ್-2 ಪ್ರಯುಕ್ತ ಮೈದಾನದಲ್ಲಿ ಗಮ್ಮತ್ ವಿಶೇಷ ಕಾರ್ಯಕ್ರಮದಲ್ಲಿ ಮನೆ ದುರಸ್ತಿ ಮಾಡಲು ಬಡಕುಟುಂಬಗಳಿಗೆ ಚೆಕ್ ವಿತರಿಸಲಾಯಿತು.
ಮಂಗಳೂರು ಕೇಂದ್ರ ಕಥೋಲಿಕ್‌ನ ಅಧ್ಯಕ್ಷ ಅನಿಲ್ ಲೋಬೋ ಅವರು ಪೆರುವಾಯಿ ಚರ್ಚ್ ವ್ಯಾಪ್ತಿಯ 5 ಮಂದಿ ಬಡ ಕುಟುಂಬಗಳಿಗೆ ಮನೆ ದುರಸ್ತಿ ಕಾರ್ಯಕ್ಕೆ ಚೆಕ್ ವಿತರಿಸಿದರು. ಪೆರುವಾಯಿ ಚರ್ಚ್‌ನ ಧರ್ಮ ಗುರು ವಿಶಾಲ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೈಮಂಡ್ ಡಿ ಸೋಜ, ಕಾರ್ಯದರ್ಶಿ ವಿಲಿಯಂ ಡಿ ಸೋಜ, ಚಾರ್ಲಿ ಡಿಸೋಜ, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ, ವಿಲ್ಪ್ರೆಡ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು. ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವ್ಯಾಪ್ತಿಯ ಆರು ವಲಯಗಳ ಭಕ್ತಾದಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತುಳು ಸಂಸ್ಕೃತಿಯನ್ನು ಬಿಂಬಿಸುವ 30ಕ್ಕಿಂತಲೂ ಅಧಿಕ ಸ್ಪರ್ಧೆಗಳು ನಡೆದವು.
Be the first to comment on "ಪೆರುವಾಯಿ: ಮೈದಾನದಲ್ಲಿ ಗಮ್ಮತ್"