ಸಾಧನೆ ಮಾಡುವವರನ್ನು ನಾವು ಗುರುತಿಸಬೇಕು. ಹಾಗೆ ಗುರುತಿಸಿದಾಗ ಅವರ ಸಾಧನೆಯು ಇನ್ನಷ್ಟು ಮಂದಿಗೆ ಸ್ಪೂರ್ತಿಯಾಗುತ್ತದೆ ಎಂದು ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಬಿ. ಮೋಹನದಾಸ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಂ.ಆರ್.ಪಿ.ಎಲ್.ನ ವಿತ್ತಾಧಿಕಾರಿ ಜಯೇಶ್ ಗೋವಿಂದ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಧರಿಯಾಗಬೇಕು ಎಂದು ತಿಳಿಸಿದರು. ಕುಲಾಲ ಸಂಘದ ಅಧ್ಯಕ್ಷ ಬಿ.ಸತೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಪುರಸ್ಕಾರದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಬಾಗದಲ್ಲಿ ಪ್ರಥಮ ಸುಶ್ಮಿತಾ ಕುಲಾಲ್ ನಾವೂರು, ದ್ವಿತೀಯ ಶುಭಶ್ರೀ ಕಂದೂರು ಸಜೀಪಮೂಡ, ದೀಕ್ಷಾ ಕೊಲ, ತೃತೀಯ ರಮ್ಯಾ ಮೂಡನಡುಗೋಡು, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಅಪೂರ್ವ ಬಿ.ಸಿ.ರೋಡು, ದ್ವಿತೀಯ ಧನ್‌ರಾಜ್ ಕುಲಾಲ್ ಕರೆಂಕಿ, ತೃತೀಯ ಲಿಖಿತಾ ನರಿಕೊಂಬು, ಕಲಾ ವಿಭಾಗದಲ್ಲಿ ಪ್ರಥಮ ವಾಣಿಶ್ರೀ, ದ್ವಿತೀಯ ಚೈತನ್ಯ, ತೃತೀಯ ಕವಿತಾ ವೈ ಹಾಗೂಎಸ್‌ಎಸ್‌ಎಲ್‌ಸಿಯಲ್ಲಿ ೬೨೫ರಕ್ಕಿ ೬೨೨ ಅಂಕ ಗಳಿಸಿದ ಪ್ರಥಮ ಶ್ರೇಯಾ ದಾಸಬೈಲು, ದ್ವಿತೀಯ ರಕ್ಷಿತಾ ಮೂಲ್ಯ ಪಲ್ಲತ್ತಿಲ ಮಾಣಿ, ತೃತೀಯ ಸ್ಮರಣ್ ಬಿ. ಎಲ್. ಪೊಸಳ್ಳಿ ಬಿ.ಸಿ.ರೋಡು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಪುರಸ್ಕಾರವನ್ನು ಪಡೆದರೆ ರಕ್ಷಿತಾ ಮತ್ತು ಸ್ಮರಣ್ ಬಿ.ಎಲ್. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಪುರಸ್ಕಾರವನ್ನು ಪಡೆದರು. ಶೇ. 90ಕ್ಕಿಂತ ಅತ್ಯಧಿಕ ಅಂಕಗಳನ್ನು ಗಳಿಸಿದ 16 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.25 ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ ನೀಡಲಾಯಿತು. ಕುರಿಯಾಳದ ಕೇಶವ ಬಂಗೇರ ಮತ್ತು ರಾಜೀವಿ ದಂಪತಿಗಳ ಮಗಳು ಭಾಗ್ಯಶ್ರೀ ವಿಕಲ ಚೇತನಳಾಗಿದ್ದು ವಿಶೇಷ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಚದುರಂಗದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿ ವಿದ್ಯಾರ್ಥಿನಿ ಯಶಸ್ವಿಯನ್ನು ಅಭಿನಂದಿಸಲಾಯಿತು.
ಉಪಾದ್ಯಕ್ಷ ಡಿ.ಎಂ. ಕುಲಾಲ್ ಅತಿಥಿಗಳನ್ನು ಸ್ವಾಗತಿಸಿದರು. ಮೀನಾಕ್ಷಿ ಪ್ರಾರ್ಥನೆ ಮಾಡಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಬಂಗೇರ ದನ್ಯವಾದಗೈದರು.
Be the first to comment on "ಸಾಧಕರ ಪ್ರೋತ್ಸಾಹಿಸಿದರೆ ಮತ್ತೊಬ್ಬರಿಗೂ ಸ್ಪೂರ್ತಿ: ಬಿ.ಮೋಹನದಾಸ"