ಭಾಷೆಯು ಹರಿಯುತ್ತಿರುವ ನೀರಿನಂತೆ ಎಲ್ಲ ಸಮುದಾಯದವರನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ ಎಂದು ಪತ್ತೂರು ಸಂತ ಫಿಲೋಮಿನ ಕಾಲೇಜಿನ ವಿಶ್ರಾಂತ ಉಪಪ್ರಾಂಶುಪಾಲ ಮತ್ತು ಹಿಂದಿ ಉಪನ್ಯಾಸಕ ಪ್ರೋ. ವಿಷ್ಣು ಭಟ್ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪ.ಪ. ಕಾಲೇಜು ಹಿಂದಿ ಸಂಘದ ಆಶ್ರಯದಲ್ಲಿ ಉಪನ್ಯಾಸ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಉದ್ಯೋಗಕ್ಷೇತ್ರ ಮತ್ತು ಶಿಕ್ಷಣಕ್ಷೇತ್ರದಲ್ಲಿ ಮುನ್ನಡೆಯಲು ಭಾಷೆಯ ಜ್ಞಾನ ಅಗತ್ಯ. ವಿದ್ಯಾರ್ಥಿ ರಾಷ್ಟ್ರ ಭಾಷೆಯಾದ ಹಿಂದಿಯನ್ನು ಅವಶ್ಯವಿರುವ ಕಡೆ ಬಳಸಿ ಸದುಪಯೋಗ ಪಡೆದುಕೊಳ್ಳಬೇಕು. ಭಾಷಾ ಶಿಕ್ಷಣವನ್ನು ಪಡೆಯುವುದರ ಜತೆ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ಆ ಮೂಲಕ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಎಸ್.ವಿ.ಎಸ್. ಪ.ಪ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಓದುವ ಹವ್ಯಾಸ ಬೆಳೆಸಿ ಜೀವನದಲ್ಲಿ ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ವಿ.ಎಸ್. ಪ.ಪ. ಕಾಲೇಜು ಹಿಂದಿ ಉಪನ್ಯಾಸಕಿ ಮತ್ತು ಹಿಂದಿ ಸಂಘದ ಅಧ್ಯಕ್ಷೆ ದಿವ್ಯಲಕ್ಷ್ಮೀ ಸಂಪತ್ ರೈ ಅತಿಥಿ ಪರಿಚಯಸಿ ಪ್ರಾಸ್ತಾವಿಕ ಮಾತನಾಡಿದರು. ಹಿಂದಿ ಉಪನ್ಯಾಸಕಿ ಹಾಗೂ ಹಿಂದಿ ಸಂಘದ ಸಲಹೆಗಾರೆ ಬಬಿತಾ ಸವಿತಾ ಕ್ರಾಸ್ತಾ ಸಹಕರಿಸಿದರು. ವಿದ್ಯಾರ್ಥಿನಿ ವೈಷ್ಣವಿ ವಿ. ಶೆಣೈ ಸ್ವಾಗತಿಸಿ, ಗ್ವಾಡ್ವಿನ್ ಥೋಮಸ್ ಡಿ’ಸೋಜ ವಂದಿಸಿದರು. ವಿದ್ಯಾರ್ಥಿನಿ ಮೇಘನಾ ಶೆಣೈ ಕಾರ್‍ಯಕ್ರಮ ನಿರೂಪಿಸಿದರು.
Be the first to comment on "ಭಾಷೆಗೆ ಎಲ್ಲ ಸಮುದಾಯದವರ ಒಂದುಗೂಡಿಸುವ ಶಕ್ತಿ: ಪ್ರೊ. ವಿಷ್ಣು ಭಟ್"