- ಯಾದವ ಕುಲಾಲ್
ತುಂಬೆಯ ಜನರು ಸಜಿಪಮುನ್ನೂರಿಗೆ, ಸಜಿಪಮುನ್ನೂರು ಗ್ರಾಮದ ಜನರು ಮೊದಲು ತುಂಬೆ ಫರಂಗಿಪೇಟೆಗೆ ಹೇಗೆ ಬರಬೇಕಿತ್ತು ಗೊತ್ತೇ?
ಆದರೆ ಯಾವಾಗ ತುಂಬೆಯಲ್ಲಿ ಡ್ಯಾಂ ನಿರ್ಮಾಣವಾಯಿತೋ ಈ ಭಾಗದ ಜನರ ಪ್ರಯಾಸವಂತೂ ಕಡಿಮೆಯಾಯಿತು.
ಸುಮಾರು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಡ್ಯಾಂ ಮೂವತ್ತಾರು ಪಿಲ್ಲರ್ಗಳನ್ನು ಒಳಗೊಂಡಿದ್ದು ನೇತ್ರಾವತಿ ನದಿಯುದ್ದಕ್ಕೂ ತುಂಬೆಯಿಂದ ಸಜಿಪಮುನ್ನೂರು ಗ್ರಾಮದ ಆಲಾಡಿ ಪ್ರದೇಶಕ್ಕೆ ಸೇತುವೆಯಂತೆ ನೇರ ಸಂಪರ್ಕ ಕಲ್ಪಿಸಿದೆ. ಡ್ಯಾಂ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಮಾದರಿ ನಿರ್ಮಾಣದಿಂದಾಗಿ ಇದನ್ನು ಈ ಎರಡೂ ಗ್ರಾಮಗಳ ಜನ ತಮ್ಮ ಕಾಲ್ನಡಿಗೆ ಸಂಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸಜಿಪ ಮುನ್ನೂರು ಆಸುಪಾಸಿನ ಆರು ಗ್ರಾಮಗಳ ಜನತೆಗೆ ಇದು ಲಾಭವಾಗಿದೆ. ಸುಮಾರು 5000 ಮನೆಗಳು ಈ ವ್ಯಾಪ್ತಿಯಲ್ಲಿವೆ.
Be the first to comment on "ತುಂಬೆ – ಸಜಿಪ ಬೆಸೆದ ಅಣೆಕಟ್ಟು"