ಡಿಸೆಂಬರ್ 10ರಂದು ಬಂಟ್ವಾಳ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಮಾಲೋಚನಾ ಸಭೆ ಬಂಟ್ವಾಳ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಅಕಾಡೆಮಿ ನಡಿಗೆ ಜನರ ಕಡೆಗೆ ಎಂಬ ತುಳು ಸಾಹಿತ್ಯ ಅಕಾಡೆಮಿ ಯ ಯೋಚನೆಯಂತೆ ಈ ಸಮ್ಮೇಳನ ನಡೆಯಲಿದೆ. ತುಳು ಕೂಟ ಬಂಟ್ವಾಳ ಇದಕ್ಕೆ ಸಾಥ್ ನೀಡಲಿದೆ.
ತುಳುಕೂಟ ತಾಲೂಕು ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಸದಸ್ಯರಾದ ಗೋಪಾಲ ಅಂಚನ್, ವಿಜಯಾ ಶೆಟ್ಟಿ ಸಾಲೆತ್ತೂರು, ವಿದ್ಯಾಶ್ರೀ ಎಸ್, ಸುಧಾ ನಾಗೇಶ , ಹಿರಿಯ ನಾಟಕಕಾರ ಶಿವಾನಂದ ಕರ್ಕೇರ, ಕಸಾಪ ತಾಲೂಕು ಅಧ್ಯಕ್ಷ ಮೋಹನ ರಾವ್, ಸರಪಾಡಿ ಅಶೋಕ ಶೆಟ್ಟಿ, ಸುಭಾಶ್ಚಂದ್ರ ಜೈನ್, ಡಿ.ಎಂ.ಕುಲಾಲ್, ಬಿ.ತಮ್ಮಯ್ಯ, ಕೆ.ಗಂಗಾಧರ ಭಟ್, ರಮೇಶ್ ನಾಯಕ್ ರಾಯಿ, ಮಂಜು ವಿಟ್ಲ, ಜಯಾನಂದ ಪೆರಾಜೆ, ತಾರಾನಾಥ ಕೊಟ್ಟಾರಿ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪ್ರಭಾಕರ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ತುಳು ಕೂಟ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಡಿ.10ರಂದು ಬಂಟ್ವಾಳದಲ್ಲಿ ತುಳು ಸಾಹಿತ್ಯ ಸಮ್ಮೇಳನ, ಸಮಾಲೋಚನಾ ಸಭೆ"