ಇದರಿಂದ ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಅನುಕೂಲ. ವಿಶೇಷವಾಗಿ ಬಿ.ಸಿ.ರೋಡಿನಿಂದ ದೇರಳಕಟ್ಟೆಗೆ ಆಸ್ಪತ್ರೆಗೆಂದು ತೆರಳುವವರಿಗೆ ಈ ಬಸ್ಸುಗಳು ಹೊಸ ಸೇರ್ಪಡೆ. ಹಾಗೆಯೇ ಕಾಸರಗೋಡಿನಿಂದ ದೇರಳಕಟ್ಟೆಗೆ ಬರುವವರಿಗೆ ಲಾಭ.
ಬಂಟ್ವಾಳನ್ಯೂಸ್ ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಒದಗಿಸಿದ ಮಾಹಿತಿ ಇವು.
- ಬಿ.ಸಿ.ರೋಡ್ ನಿಂದ ಹೊರಡುವ ಕೆಎಸ್ಸಾರ್ಟಿಸಿ ಬಸ್ ಮೇಲ್ಕಾರ್, ಸಜಿಪ ಮಾರ್ಗವಾಗಿ ಮುಡಿಪುವಿಗೆ ಹೋಗುತ್ತದೆ. ಅಲ್ಲಿಂದ ದೇರಳಕಟ್ಟೆ ಮಾರ್ಗವಾಗಿ ತೊಕ್ಕೊಟ್ಟಿಗೆ ತಲುಪಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ.
- ಬಿ.ಸಿ.ರೋಡ್ – ಮೇಲ್ಕಾರ್- ದೇರಳಕಟ್ಟೆ – ತೊಕ್ಕೊಟ್ಟು – ಮಂಜೇಶ್ವರ – ಉಪ್ಪಳ – ಕುಂಬಳೆ – ಕಾಸರಗೋಡು ಮಾರ್ಗ 78 ಕಿ.ಮೀ. ಆದರೆ ಇಲ್ಲಿ ಕೇವಲ 8 ಕಿ.ಮೀ. ಹೆಚ್ಚು. ಪ್ರಯಾಣದ ಅವಧಿ 2 ಗಂಟೆ 10 ನಿಮಿಷ.
- ಒಟ್ಟು 5 ಬಸ್ಸುಗಳು 12 ಟ್ರಿಪ್ ಗಳನ್ನು ನಡೆಸುತ್ತವೆ. ಬಿ.ಸಿ.ರೋಡ್ ಮತ್ತು ಕಾಸರಗೋಡಿನಿಂದ ಏಕಕಾಲಕ್ಕೆ ಒಂದೇ ವೇಳಾಪಟ್ಟಿಯಲ್ಲಿ ಬಸ್ ಬರುತ್ತದೆ.
- ಬೆಳಗ್ಗೆ 7, 8, 9, 10, 11 ಮಧ್ಯಾಹ್ನ 1, 2, 3, 4, ಸಂಜೆ 5, 7 ಮತ್ತು 8 ಗಂಟೆಗೆ ಬಸ್ಸುಗಳು ಬಿ.ಸಿ.ರೋಡ್ ಮತ್ತು ಕಾಸರಗೋಡಿನಿಂದ ಏಕಕಾಲಕ್ಕೆ ಪ್ರಯಾಣ ಆರಂಭಿಸುತ್ತವೆ.
- ಬಿ.ಸಿ.ರೋಡಿನಿಂದ ಕಾಸರಗೋಡಿಗೆ 64 ರೂ. ಮೇಲ್ಕಾರಿನಿಂದ ಕಾಸರಗೋಡಿಗೆ 61. ಮುಡಿಪಿನಿಂದ ಕಾಸರಗೋಡಿಗೆ 53 ರೂ. ದೇರಳಕಟ್ಟೆಯಿಂದ ಕಾಸರಗೋಡಿಗೆ 48 ರೂ. ತೊಕ್ಕೊಟ್ಟಿನಿಂದ 42 ರೂ. ದರ ನಿಗದಿಪಡಿಸಲಾಗಿದೆ. ಬಿ.ಸಿ.ರೋಡಿನಿಂದ ದೇರಳಕಟ್ಟೆಗೆ 28 ರೂ. ಬಸ್ಸಿನ ದರವಿದೆ.
Be the first to comment on "ಬಿ.ಸಿ.ರೋಡ್ – ಮೇಲ್ಕಾರ್ – ಮುಡಿಪು – ತೊಕ್ಕೊಟ್ಟು – ಕಾಸರಗೋಡು"