ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ‘ಎದುರುಕೋಪ’ ನಾಟಕದ ಪ್ರದರ್ಶನದ ಮೊದಲು ಪಂಚಮುಖಿ ಕಂಬೈನ್ಸ್ ವತಿಯಿಂದ ನೆರವು, ಸನ್ಮಾನ ಕಾರ್ಯಕ್ರಮ ನಡೆಯಿತು. ನಿವೃತ್ತ ಯೋಧ ನಾರಾಯಣ ಮೂಲ್ಯ ಹಾಗೂ ಸ್ಪರ್ಶಾ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ ಅವರನ್ನು ಸನ್ಮಾನಿಸಲಾಯಿತು.
ಹುಟ್ಟಿನಿಂದಲೇ ಅಂಗವೈಕಲ್ಯತೆಗೆ ತುತ್ತಾಗಿರುವ ಕುರಿಯಾಳದ ಬಾಲಕಿ ಭವ್ಯಶ್ರಿಗೆ ಬಿ.ಸಿ.ರೋಡಿನ ಪಂಚಮುಖಿ ಕಂಬೈನ್ಸ್‌ನ ವತಿಯಿಂದ ರೂ.5 ಸಾವಿರ ವಿದ್ಯಾನಿಧಿಯನ್ನು ನೀಡಲಾಯಿತು. ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ವಿದ್ಯಾನಿಧಿ ಹಸ್ತಾಂತರಿಸಿದರು. ಈ ಸಂದರ್ಭ ರಾಜೇಶ್ ನಾಯಕ್ ಅವರು ವೈಯಕ್ತಿಕ ನೆರವು 10 ಸಾವಿರ ರುಪಾಯಿಯನ್ನು ನೀಡಿದರು. ಈ ಸಂದರ್ಭ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪ್ರಮುಖರಾದ ಕೇಶವ ಶಾಂತಿ, ಜಿ.ಆನಂದ, ಐತಪ್ಪ ಆಳ್ವ, ಭುವನೇಶ್ ಪಚ್ಚಿನಡ್ಕ, ರಾಜೇಶ್ ದೇವಸ್ಯ, ಮನೋಹರ ಫರಂಗಿಪೇಟೆ, ಹರೀಂದ್ರ ಪೈ ವಾಮದಪದವು, ಜಯರಾಜ ಕರ್ಕೆರಾ ಮಂಟಮೆ, ಪಂಚಮುಖಿ ಕಂಬೈನ್ಸ್‌ನ ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಉಪಸ್ಥಿತರಿದ್ದರು.
Be the first to comment on "ಬಾಲಕಿಗೆ ನೆರವು, ನಿವೃತ್ತ ಯೋಧರಿಗೆ ಸನ್ಮಾನ"