ಪರಂಪರೆಯನ್ನು ಮರೆಯುವ ಕೆಲಸ ಸಲ್ಲದು, ಜೀವವೈವಿಧ್ಯಕ್ಕೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಸಹಯೋಗದಲ್ಲಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಯ ಜೀವ ವೈವಿಧ್ಯ ಸಮಿತಿ ಸದಸ್ಯ ರುಗಳಿಗೆ ತರಬೇತಿ ಕಾರ್ಯ ಕ್ರಮ ತಾಲೂಕು ಪಂಚಾಯತ್ ಎಸ್ .ಜಿ.ಆರ್. ಎಸ್ ವ್ಯೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಕರ್ಕೇರ, ನಾಟಿ ವಿದ್ಯೆ ಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಅಧಿಕಾರಗಳು ಇಚ್ಚಾಶಕ್ತಿಯಿಂದ ನಾಟಿ ವೈದ್ಯರು ಗಳನ್ನು ಗುರುತಿಸಿ ಅ ಮೂಲಕ ಗ್ರಾಮೀಣ ಜನರಿಗೆ ಸಹಾಯವಾಗುವಂತೆ ಮಾಡಬೇಕು. ಮುಂದಿನ ಪೀಳಿಗೆಗೂ ನಾಟಿ ವೈದ್ಯಪದ್ಧತಿ ಉಳಿಯಬೇಕು ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ ಬಂಗೇರ, ಸಂಪನ್ಮೂಲ ವ್ಯಕ್ತಿಗಳಾದ ಐಶ್ವರ್ಯ. ನಿರೂಪ್ ಉಪಸ್ಥಿತರಿದ್ದರು. ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಸ್ಬಾಗತಿಸಿ ಪಿಡಿಒ ಆಶೋಕ್ ವಂದಿಸಿದರು.
Be the first to comment on "ಪರಂಪರೆಯನ್ನು ಮರೆಯುವ ಕೆಲಸ ಸಲ್ಲದು: ಚಂದ್ರಹಾಸ ಕರ್ಕೇರ"