- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ನೀರು ಎನ್ನುವುದು ಪ್ರತಿಯೊಂದು ಜೀವ ದ್ರವ್ಯಗಳ ಅವಿಭಾಜ್ಯ ಅಂಗ. ನೀರನ್ನು ಹೊರತು ಪಡಿಸಿ ಜೀವನ ಅಸಾಧ್ಯ. ಹೇಗೆ ನೀರು ನಿತ್ಯ ಬಳಕೆಗೆ ಪ್ರಾಮುಖ್ಯವಾಗಿದೆ,ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಸಹ ಅತ್ಯಂತ ಪ್ರಧಾನ ದ್ರವ್ಯವಾಗಿದೆ.
ಬಾಹ್ಯ ಉಪಯೋಗಗಳು:
- ಅತಿ ಆದ ಜ್ವರದಿಂದ ಬಳಲುತ್ತಿದ್ದರೆ ಮೈ ಮೇಲೆ ತಣ್ಣೀರನ್ನು ಸುರಿಯಬೇಕು. ಇದರಿಂದ ಜ್ವರದ ತಾಪ ಕಡಿಮೆಯಾಗುತ್ತದೆ.
- ಬೆಸಿಲಿನ ಬೇಗೆಯಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ತಲೆ ಸುತ್ತುವಿಕೆ ಇದ್ದಾಗ ಮುಖಕ್ಕೆ ತಣ್ಣೀರನ್ನು ಚಿಮುಕಿಸಬೇಕು ಅಥವಾ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
- ಅಧಿಕ ರಕ್ತದ ಒತ್ತಡ ಇದ್ದಾಗ ನೆತ್ತಿಗೆ ತಣ್ಣೀರನ್ನು ಸುರಿಯಬೇಕು
- ಮೈಗ್ರೈನ್ ತಲೆನೋವಿನಿಂದ ಬಳಲುತ್ತಿರುವವರು ತಣ್ಣೀರಿನಲ್ಲಿ ತಲೆಗೆ ಸ್ನಾನಮಾಡಬೇಕು
- ಅಪಸ್ಮಾರದ ಲಕ್ಷಣ ಕಂಡು ಬಂದಾಗ ಮುಖದ ಮೇಲೆ ತಣ್ಣೀರು ಚಿಮುಕಿಸಬೇಕು.
- ಕಣ್ಣು ಉರಿ ಸಮಸ್ಯೆ ಇದ್ದಾಗ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಕಣ್ಣಿನ ಮೆಲಿಡಬೇಕು ಅಥವಾ ತಣ್ಣೀರು ತುಂಬಿದ ಲೋಟದಲ್ಲಿ ಕಣ್ಣನ್ನು ಮುಳುಗಿಸಿ ಇಡಬೇಕು.
- ಮುಟ್ಟಿನ ಸಮಯದಲ್ಲಿ ತಲೆನೋವು ಕಾಣಿಸಿಕೊಂಡಾಗ ಹೊಟ್ಟೆಯಮೇಲೆ ತಣ್ಣೀರಿನ ಪಟ್ಟಿ ಹಾಕಬೇಕು ಅಥವಾ ತಣ್ಣೀರಿನಲ್ಲಿ ಸೊಂಟ ಮುಳುಗುವ ಹಾಗೆ ಕುಳಿತುಕೊಳ್ಳಬೇಕು.
- ಗಂಡಸರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ ಇದ್ದರೆ ಸಾಧಾರಣ 3 ವಾರಗಳ ಕಾಲ ದಿನಕ್ಕೆ 30 ನಿಮಿಷಗಳಷ್ಟು ಸಮಯ ತಣ್ಣೀರಿನಲ್ಲಿ ಸೊಂಟ ಮುಳುಗುವ ಹಾಗೆ ಕುಳಿತುಕೊಳ್ಳಬೇಕು.
- ಕಾಲಿನ ಅಡಿ ಅಥವಾ ಅಂಗಾಲು ಉರಿ ಹಾಗು ಬಿಸಿ ಇದ್ದರೆ ತಣ್ಣೀರಿನಲ್ಲಿ ಕಾಲು ಮುಳುಗಿಸಿ ಇಡಬೇಕು.
- ಕಾಲು ಆಥವಾ ಕೈ ಉಳುಕಿದಾಗ ಆ ಜಾಗಕ್ಕೆ ಕೂಡಲೇ ತಣ್ಣೀರು ಪಟ್ಟಿ ಹಾಕಬೇಕು.ಇದರಿಂದ ನೋವು ಹಾಗು ಬಾವು ಕಡಿಮೆಯಾಗುತ್ತದೆ.
- ಶರೀರಕ್ಕೆ ಏಟು ಬಿದ್ದು ರಕ್ತ ಹೆಪ್ಪು ಕಟ್ಟಿದ ಬಾವು ಮೂಡಿದಾಗ ಕೂಡಲೇ ತಣ್ಣೀರು ಪಟ್ಟಿ ಹಾಕ ಬೇಕು. ಇದರಿಂದ ಒಳಗೆ ರಕ್ತಸ್ರಾವ ಆಗುವುದು ನಿಲ್ಲುತ್ತದೆ.
- ಶರೀರಕ್ಕೆ ಸಣ್ಣ ಪ್ರಮಾಣದ ಗಾಯ ಆಗಿ ರಕ್ತ ಸ್ರಾವ ಆಗುವುದಿದ್ದರೆ ಗಾಯದ ಮೇಲೆ ತಣ್ಣೀರ ಧಾರೆ ಎರೆಯಬೇಕು.
- ಬೆಂಕಿ ತಾಗಿ ಗಾಯವಾದ ಕೂಡಲೇ ಉರಿ ಹಾಗು ನೋವು ಶಮನವಾಗುವ ತನಕ ಗಾಯವಾನು ತಣ್ಣೀರಿನಲ್ಲಿ ಇಡಬೇಕು ಅಥವಾ ಧಾರೆ ಎರೆಯಬೇಕು.
- ಬೆನ್ನು ಹಾಗು ಸೊಂಟ ನೋವು ಇರುವವರು ತಣ್ಣೀರಿನಲ್ಲಿ ನೇರವಾಗಿ ಮಲಗಬೇಕು.
ಆಭ್ಯಂತರ ಉಪಯೋಗಗಳು …ಮುಂದಿನವಾರ …
Be the first to comment on "ತಣ್ಣೀರೇಕೆ?"