ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪ್ರಧಾನ ಗರ್ಭಗುಡಿಯ ದ್ವಾರ ಮತ್ತು ಸುತುಪೌಳಿಯ ಸ್ಥಾಪನೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ ಉತ್ತರ ಚೌಕಟ್ಟು ಇರಿಸುವಿಕೆ ಕಾರ್ಯಕ್ರಮವು ಸೆ.21ರಂದು ವಾಸ್ತುಶಿಲ್ಪಿ ಮಹೇಶ್ ಮುಣಿಯಂಗಳ್ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ವೆಂಕಟೇಶ್ ತಂತ್ರಿವಿಧಿವಿಧಾನಗಳನ್ನು ನೆರವೇರಿಸಿದರು.
ದೇವಳದ ಅರ್ಚಕರಾದ ಪೊಳಲಿ ಮಾಧವ ಭಟ್, ನಾರಾಯಣ ಭಟ್, ರಾಮ್‌ಭಟ್, ದೋಟ ಪರಮೇಶ್ವರ್ ಭಟ್,ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಸಹಕರಿಸಿದರು, ಸಚಿವ ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಜಿರ್ಣೋದ್ದಾರ ಸಮಿತಿಯ ಕಾರ್‍ಯದರ್ಶಿ ಹಾಗೂ ದೇವಳದ ಮೊಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ, ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರಸೂರ್‍ಯನಾರಾಯಣ ರಾವ್, ಜಿಣೋದ್ಧಾರ ಕಮಿಟಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸೇಸಪ್ಪ ಕೋಟ್ಯಾನ್ ಪಚಿನಡ್ಕ,ರಘುನಾಥ ಸೋಮಾಯಾಜಿ, ಕೃಷ್ಣರಾಜ್ ಮಾರ್ಲ, ಜೀವರಾಜ್ ಶೆಟ್ಟಿ ಅಮುಂಜೆಗುತ್ತು, ದೇವುದಾಸ್‌ಶೆಟ್ಟಿ ಅಮುಂಜೆಗುತ್ತು, ಸುಭ್ರಾಯ ಕಾರಂತ್, ಚಂದ್ರಶೇಖರ್ ಭಂಡಾರಿ,ಪ್ರಚಾರ ಸಮಿತಿಯ ಆಶಾಜ್ಯೋತಿ ರೈ ಮಾಲಾಡಿ, ದಿವಾಕರ ಸಾಮಾನಿ, ಸೋಮಶೇಖರ್ ಶೆಟ್ಟಿ, ಕಟ್ಟಡ ಸಮಿತಿ ಸದಸ್ಯ ಗಿರಿಧರ್ ಶೆಟ್ಟಿ, ಕಾರ್ಯನಿರ್ವಾಹಣಾಕಾರಿ ಪ್ರವೀಣ್, ಬಿಲ್ಡಿಂಗ್ ಕಾಂಟ್ರಕ್ಟರ್ ಮಹಬಲ ಶೆಟ್ಟಿ, ಶಿಲ್ಪಿ ಕುಪ್ಪುಸ್ವಾಮಿ, ಮರದ ಶಿಲ್ಪಿ ವಾಸು ಆಚಾರ್ಯ, ಗಣೇಶ್ ಆಚಾರ್ಯಹಾಗೂ ಕರಸೇವೆಸಮಿತಿ ಸದಸ್ಯರು,ಕಟ್ಟಡ ಕಾಮಗಾರಿ ಸದಸ್ಯರು, ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.
Be the first to comment on "ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪ್ರಧಾನ ದ್ವಾರ ಸ್ಥಾಪನೆ"