ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕ ರಚನೆಯ ಪ್ರಥಮ ಸಭೆ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ಜರಗಿತು.
ಟ್ರಸ್ಟ್ ಸ್ಥಾಪಕಾಧ್ಯಕ್ಷ , ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲಾವಿದರು ಜೀವನ ಪೂರ್ತಿ ನೆಮ್ಮದಿಯಿಂದಿರಬೇಕೆಂಬ ಸದುದ್ದೇಶದಿಂದ ಟ್ರಸ್ಟ್ ಸ್ಥಾಪಿಸಲಾಗಿದ್ದು, ಯಕ್ಷಗಾನದ ಕಲಾವಿದರ ಸಂರಕ್ಷಣೆಗಾಗಿ ಪಟ್ಲ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ, ಹಿರಿಯ ಕಲಾವಿದರಿಗೆ ಪಟ್ಲ ಪ್ರಶಸ್ತಿ, ಯಕ್ಷಗೌರವ, ಅಶಕ್ತ ಕಲಾವಿದರಿಗೆ ಗೌರವ ಧನ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕಲಾವಿದರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುವುದು. ಕಲಾವಿದರಿಗಾಗಿ ಉಚಿತ ವಿಮೆಯನ್ನು ಸಂಸ್ಥೆ ವತಿಯಿಂದ ಮಾಡಿಸುತ್ತಿದ್ದು, ವಿಮಾ ಕಂತನ್ನು ಸಂಸ್ಥೆಯೇ ಭರಿಸುತ್ತಿದೆ ಎಂದರು.
ಸರಪಾಡಿ ಘಟಕದ ಅಧ್ಯಕ್ಷ ಡಾ| ಬಾಲಚಂದ್ರ ಶೆಟ್ಟಿ, ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ, ಪ್ರಮುಖರಾದ ವಸಂತ ಶೆಟ್ಟಿ ಕೇದಗೆ, ಚಂದ್ರಶೇಖರ ಶೆಟ್ಟಿ ವಾಮದಪದವು, ಜಯಂತ ಶೆಟ್ಟಿ, ಕಮಲ್ ಶೆಟ್ಟಿ ಬೊಳ್ಳಾಜೆ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಘಟಕದ ನೂತನ ಪದಾಽಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ವಸಂತ ಶೆಟ್ಟಿ ಕೇದಗೆ,ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ವಾಮದಪದವು, ಸಂಚಾಲಕರಾಗಿ ರಮೇಶ್ ಶೆಟ್ಟಿ ಮಜಲೋಡಿ, ಸಹಸಂಚಾಲಕರಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಅಂದ್ರಳಿಕೆ ಮತ್ತು ಏಳು ಮಂದಿ, ಪ್ರಧಾನ ಕಾರ್ಯದರ್ಶಿಯಾಗಿ ಕಮಲ ಶೆಟ್ಟಿ ಬೊಳ್ಳಾಜೆ, ಕೋಶಾಽಕಾರಿಯಾಗಿ ದಿನಕರ ಶೆಟ್ಟಿ ಅಂಕದಳ, ಸಂಘಟನಾ ಕಾರ್ಯದರ್ಶಿಗಳಾಗಿ ಸಂದೀಪ್ ಪೂಜಾರಿ ಬಸ್ತಿಕೋಡಿ ಮತ್ತು ನಾಲ್ಕು ಮಂದಿ, ಜತೆ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಆಚಾರ್ಯಎಡ್ತೂರು ಹಾಗೂ ಐದು ಮಂದಿ, ಗೌರವ ಸಲಹೆಗಾರರಾಗಿ ಹದಿನೆಂಟು ಮಂದಿ, ಕಾರ್ಯಕಾರಿ ಸದಸ್ಯರಾಗಿ ಹದಿನಾರು ಮಂದಿಯನ್ನು ಆಯ್ಕೆ ಮಾಡಲಾಯಿತು.
ಗಣೇಶ್ ಶೆಟ್ಟಿ ಸೇವಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಪ್ರಸ್ತಾವಿಸಿದರು. ನಿಶ್ಚಿತ್ ಆರ್. ಶೆಟ್ಟಿ ವಂದಿಸಿದರು.
Be the first to comment on "ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಸಭೆ"