- ಡಾ. ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಗೋಧಿಯು ಅತ್ಯಂತ ಸತ್ವಭಾರಿತವಾದ ಒಂದು ಸಂಪೂರ್ಣ ಆಹಾರ ದ್ರವ್ಯವಾಗಿದೆ. ಗೋಧಿಯಲ್ಲಿ ಕಬ್ಬಿಣಾಂಶ, ಉಪ್ಪು, ಕ್ಯಾಲ್ಸಿಯಂ,ಪೊಟ್ಯಾಸಿಯಂ ಮೆಗ್ನೀಷಿಯಂ,ಜಿಂಕ್, ತಾಮ್ರ, ಗಂಧಕ, ಮ್ಯಾಂಗನೀಸ್, ವಿಟಮಿನ್ ಎ ,ಇ ಇತ್ಯಾದಿ ಅಂಶಗಳು ಯಥೇಷ್ಟವಾಗಿ ಅಡಗಿದೆ. ಆದುದರಿಂದ ಇದು ಮಾನವನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ವಸ್ತುವಾಗಿದೆ.
- ಗೋಧಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುವುದರಿಂದ ಹೃದಯಕ್ಕೆ ಇದು ಸ್ನೇಹಿಯಾಗಿದೆ .
- ಇದು ಶರೀರದಲ್ಲಿ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಅನುಕೂಲಕಾರಿಯಾಗಿದೆ.
- ಇದು ಮಧುಮೇಹದ ರೋಗಿಗಳಿಗೆ ಉತ್ತಮ ಪಥ್ಯ ಆಹಾರ ಮತ್ತು ರೋಗವನ್ನು ಹತೋಟಿಯಲ್ಲಿ ಇಡಲು ಸಹ ಸಹಕರಿಸುತ್ತದೆ.
- ಗೋಧಿಯು ಗರ್ಭಿಣಿಯರಲ್ಲಿ ಸತ್ವಗಳ ಕೊರತೆಯನ್ನು ನಿವಾರಿಸುತ್ತದೆ.
- ಬಾಣಂತಿಯರಲ್ಲಿ ಮೊಲೆಹಾಲಿನ ಉತ್ಪತ್ತಿಯನ್ನು ಪ್ರಚೋದಿಸುತ್ತದೆ.
- ಗೋಧಿಯ ಉಪಯೋಗದಿಂದ ಸ್ಥನದ ಕ್ಯಾನ್ಸರ್ ಸಾಧ್ಯತೆಯು ಕಡಿಮೆಯಾಗುತ್ತದೆ.
- ಮುಟ್ಟು ನಿಂತ ಮಹಿಳೆಯರಲ್ಲಿ ಕಾಣಿಸುವ ಹೃದಯ ಹಾಗು ರಕ್ತನಾಳಗಳ ತೊಂದರೆಗಳಿಗೆ ಗೋಧಿಯು ಉತ್ತಮ ಪರಿಹಾರ ದ್ರವ್ಯವಾಗಿದೆ.
- ಕಬ್ಬಿಣದ ಅಂಶ ಹಾಗು ಇತರ ಖನಿಜಗಳ ಇರುವಿಕೆಯಿಂದ ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.
- ಜೀರ್ಣ ವ್ಯವಸ್ಥೆಯ ಸ್ನೇಹಿಯಾಗಿದ್ದು ಇದರಲ್ಲಿ ನಾರಿನ ಅಂಶ ಅಧಿಕವಾಗಿ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿಗೆ ಬಲವನ್ನು ನೀಡುತ್ತದೆ.
- ದೊಡ್ಡಕರುಳಿನ ಕ್ಯಾನ್ಸರ್ ತಡೆಕಟ್ಟಲು ಮತ್ತು ಹತೋಟಿಯಲ್ಲಿ ಇಡಲು ಸಹಕರಿಸುತ್ತದೆ.
- ಅಧಿಕವಾದ ಕೊಬ್ಬನ್ನು ಕರಗಿಸುವುದರ ಮೂಲಕ ಸ್ಥೂಲ ಕಾಯವನ್ನು ಹೋಗಲಾಡಿಸುತ್ತದೆ.
- ಗೋಧಿಯು ಪಿತ್ತಾಶಯದ ಕಲ್ಲನ್ನು(gall stone ) ಹೋಗಲಾಡಿಸಲು ಸಹಕರಿಸುತ್ತದೆ.
- ಗೋಧಿಯು ಬಹು ಕಾಲೀನ ವ್ಯಾಧಿಗಳಾದ ಕ್ಷಯರೋಗ ,ಸಂಧುವಾತ,ಮೂಳೆಗಳ ಸವೆತ ಇತ್ಯಾದಿಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ಇದು ಮರೆಗುಳಿ(Alzheimer’s disease) ರೋಗಿಗಳಿಗೆ ಉತ್ತಮ ಆಹಾರ ದ್ರವ್ಯವಾಗಿದೆ.
- ಎಳೆ ಮಕ್ಕಳಿಗೆ ಗೋಧಿಯನ್ನು ನೀಡುವುದರಿಂದ ಮೂಳೆ ಹಾಗು ಮಾಂಸ ಖಂಡಗಳು ಬಲಿಷ್ಟವಾಗಿ ಬೆಳವಣಿಗೆ ಆಗುತ್ತದೆ.
- ಮಕ್ಕಳಲ್ಲಿ ಕಪ ಹಾಗು ದಮ್ಮು ರೋಗದ ಬಾಧೆಯಿದ್ದರೆ ನಿಯಮಿತವಾಗಿ ಗೋಧಿಯನ್ನು ತಮ್ಮ ಆಹಾರದಲ್ಲಿ ಬಳಸಬೇಕು.
- ಗೋಧಿಯ ನಿಯಮಿತವಾದ ಸೇವನೆಯಿಂದ ಹಲ್ಲು ಹಾಗು ವಸಡಿನ ಆರೋಗ್ಯ ಉತ್ತಮವಾಗಿರುತ್ತದೆ.
- ಗೋಧಿಯು ಪುರುಷರಲ್ಲಿ ಸಂತಾನ ಉತ್ಪತ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ
Be the first to comment on "ಗೋಧಿಯಲ್ಲಿದೆ ಅಧಿಕ ಶಕ್ತಿ"