ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಗರ್ಭಗುಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆಯನ್ನು ಬಿಜೆಪಿ ಖಂಡಿಸಿದೆ.
ದೇಗುಲದ ಬೆಲೆಬಾಳುವ ಆಭರಣಗಳನ್ನು ಕಳ್ಳರು ದೋಚಿದ್ದು ಘಟನೆ ಬೆಳಕಿಗೆ ಬಂದ ಕೂಡಲೇ ಸಾವಿರಾರು ಭಕ್ತಾದಿಗಳು ಸೇರಿದ್ದು ಈ ಸಂದರ್ಭ ಬಿಜೆಪಿ ನಾಯಕರಾದ ಉಳಿಪ್ಪಾಡಿ ರಾಜೇಶ್ ನಾಯಕ್ ಭೇಟಿ ನೀಡಿ ಸ್ಥಳಿಯರಲ್ಲಿ ಘಟನೆಯ ವಿವರ ಪಡೆದರು. ಶೀಘ್ರವೇ ಕಳ್ಳತನಗೈದ ಆರೋಪಿಗಳ ಬಂಧನಕ್ಕೆ ಊರವರ ಸಮ್ಮುಖದಲ್ಲಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರದ ಭಕ್ತಾದಿಗಳು ಆತಂಕಗೊಂಡಿದ್ದಾರೆ ಭಕ್ತರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಶೀಘ್ರವಾಗಿ ಪೋಲೀಸ್ ಇಲಾಖೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕಾಗಿ ಆಗ್ರಹಿಸಿದರು.
ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಜಿ.ಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ,ಮಾಜಿ ಜಿ.ಪಂ ಸದಸ್ಯರಾದ ಚೆನ್ನಪ್ಪ ಆರ್ ಕೋಟ್ಯಾನ್, ಕಡೇಶ್ವಾಲ್ಯ ಪಂಚಾಯತ್ ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಕಡೇಶ್ವಾಲ್ಯ ವ್ಯವಸಾಯ ಸೇವಾಸಹಕಾರಿ ಬ್ಯಾಂಕ್‌ನ ವಿದ್ಯಾಧರ ರೈ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಾಂತಪ್ಪ ಪೂಜಾರಿ, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ತಿರುಮಲೇಶ್ವರ ಭಟ್,ರಮಾನಾಥ ರಾಯಿ, ಪಂಚಾಯತ್ ಸದಸ್ಯರಾದ ಸುರೇಶ್ ಬನಾರಿ,ಸುರೇಶ್ ಕನ್ನೊಟ್ಟು,ಸುರೇಂದ್ರ ರಾವ್ ನೆಕ್ಕಿಲಾಡಿ,ಸನತ್ ಆಳ್ವ ಅಮೈ,ಲಲಿತ ನೆತ್ತರ, ಸಂಪತ್ ಕೋಟ್ಯಾನ್ ಕಡೇಶ್ವಾಲ್ಯ ,ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
Be the first to comment on "ಕಡೇಶ್ವಾಲ್ಯ ದೇವಳ ಕಳವು ಆರೋಪಿಗಳ ಬಂಧನಕ್ಕೆ ಬಿಜೆಪಿ ಪ್ರಾರ್ಥನೆ"