ವಿಟ್ಲದ “ಡಿ ಗ್ರೂಪ್” ವತಿಯಿಂದ ಉಚಿತ ಸೇವೆಯ ಆಂಬ್ಯುಲೆನ್ಸ್ ವಾಹನವನ್ನು ವಿಟ್ಲದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ಖಾನ್ ಕೊಡಾಜೆ ಅವರು ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ನಿಸ್ವಾರ್ಥ ಸೇವೆಗಳು ಸಮಾಜದಲ್ಲಿ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಡಿ ಗ್ರೂಪ್ ಸಮಾಜ ಸೇವೆಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಸಮಾಜಕ್ಕೆ ಅರ್ಪಣೆ ಮಾಡಿದ ಕಾರ್ಯ ಶ್ಲಾಘನೀಯವಾಗಿದೆ. ಸಮುದಾಯಕ್ಕಾಗಿ ಯಾರು ಸವಲತ್ತುಗಳನ್ನು ಮಾಡಿಕೊಡಬೇಕಾಗಿತ್ತೋ ಅವರು ನಿರ್ಲಕ್ಷ್ಯ ಮಾಡಿ ಮಾಡಿಕೊಡದೆ ಇದ್ದಾಗ, ನಮ್ಮ ಯುವಕರೇ ಸ್ವತಹ ಉತ್ಸುಕತೆಯಿಂದ ಮಾಡಿದ ಇಂತಹ ಉಚಿತ ಆಂಬ್ಯುಲೆನ್ಸ್ ಸೇವೆಯು ಎಲ್ಲಾ ಊರಿನವರಿಗೂ ಮಾದರಿಯಾಗಿದೆ ಎಂದು ಹೇಳಿದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್ ಮಾತನಾಡಿ ಬೆಳೆಯುತ್ತಿರುವ ವಿಟ್ಲ ಪರಿಸರಕ್ಕೆ ಆಂಬ್ಯುಲೆನ್ಸ್ ಸೇವೆ ಅತ್ಯಾವಶ್ಯಕವಾಗಿ ಬೇಕು. ಒತ್ತಡದ ಸಮಯದಲ್ಲಿ ಬೇರೆ ಊರಿನಿಂದ ಆಂಬ್ಯುಲೆನ್ಸ್ ಕರೆಸುವ ಅನಿವಾರ್ಯತೆ ಎದುರಾಗುತ್ತಿದೆ. ಈ ಆಂಬ್ಯುಲೆನ್ಸ್ ಸೇವೆಯಿಂದ ಬಡವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಸ್ಸಲಾಂ ಲತೀಫಿ ದುವಾಃ ಆಶೀರ್ವಚನ ನೀಡಿದರು.
ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಖಲಂದರ್ ಪರ್ತಿಪ್ಪಾಡಿ ,ದ.ಕ.ಜಿಲ್ಲಾ ಯುವ ಕಾಂಗ್ರೆಸ್ನ ಲುಕ್ಮಾನ್ ಬಂಟ್ವಾಳ, ಯುಟಿ ತೌಸೀಫ್ ಪುತ್ತೂರು, ಇಬ್ರಾಹಿಂ ಏರ್ ಸೌಂಡ್ಸ್, ಇಬ್ರಾಹಿಂ ಹಾಜಿ ಪೊನ್ನೋಟ್ಟು, ಹೊರೈಝನ್ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಡಿ ಗ್ರೂಪ್ನ ಅಧ್ಯಕ್ಷ ವಿ.ಕೆ.ಎಂ.ಹಂಝ, ವಿ.ಕೆ.ಎಂ.ಅಬೂಸ್ವಾಲಿ, ಮಂಗಳೂರು ಬ್ಲಡ್ ಡೋನರ್ಸ್ನ ಅಧ್ಯಕ್ಷ ಸಿದ್ದೀಖ್ ಮಂಜೇಶ್ವರ, ಡಿ ಗ್ರೂಪ್ನ ಶಾಹಿದ್ ಮೇಗಿನಪೇಟೆ, ಇಸಾಕ್ ಪೊನ್ನೋಟ್ಟು ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು ಹೈಕೋರ್ಟ್ನ ನ್ಯಾಯವಾದಿ ಅನ್ಸಾರ್ ವಿಟ್ಲ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ನಿರೂಪಿಸಿದರು. ಹಂಝ ಮೇಗಿನಪೇಟೆ ಹಾಗೂ ವಿ.ಎಚ್ ರಿಯಾಝ್ ಸಹಕರಿಸಿದರು.
Be the first to comment on "ಆಂಬುಲೆನ್ಸ್ ಉಚಿತ ಸೇವೆ ವಿಟ್ಲದಲ್ಲಿ ಲೋಕಾರ್ಪಣೆ"