ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಶನಿವಾರ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಎಚ್.ವಿ. ರಾವ್, ಮಾನವ ಬಂಧುತ್ವ ರಾಜ್ಯಾಧ್ಯಕ್ಷ ವಿಲ್ಫ್ರೆಂಡ್ ಡಿಸೋಜ, ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡ ಸೇಸಪ್ಪ ಬಿ.ಕೆ., ಭಾನುಚಂದ್ರ ಕೃಷ್ಣಾಪುರ, ಬ್ಯಾರಿ ಫೌಂಡೇಶನ್ ಸಂಸ್ಥೆಯ ಕೆ.ಎಚ್.ಅಬುಬಕ್ಕರ್, ಜೆಡಿಎಸ್ ಮುಖಂಡ ಹಾರೂನ್ ರಶೀದ್, ಸಾಮಾಜಿಕ ನ್ಯಾಯ ಪರ ಸಮಿತಿಯ ಪ್ರಭಾಕರ ದೈವಗುಡ್ಡೆ, ಮಹಿಳಾ ಮುಖಂಡೆ ರವಿಕಲಾ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಮಾನವ ಬಂಧುತ್ವ ವೇದಿಕೆಯ ಸಂಚಾಲಕ ನಾರಾಯಣ ಕಿಲಂಗೋಡಿ, ಸಹ ಸಂಚಾಲಕ ಚೆನ್ನಕೇಶವ, ಸಂಚಾಲಕರಾದ ಪಾರ್ವತಿ ಸುಳ್ಯ, ಸುಂದರ ನಿಡ್ಪಳ್ಳಿ, ಗೋಪಾಲ ಅಂಚನ್, ರಮನಾಥ ಕುತ್ತಾರ್ ಮತ್ತಿತರರಿದ್ದರು.ಇದೇ ವೇಳೆ ಸಾಮಾಜಿಕ ಮುಖಂಡರು,ಚಿಂತಕರು,ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Be the first to comment on "ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ"