ಸ್ವರ್ಣಾಷ್ಟಮಂಗಳಾ ಪ್ರಶ್ನಾಪ್ರಕಾರ ಕಳೆದ 526 ವರ್ಷದ ಇತಿಹಾಸವಿರುವ ಗಾಣಿಗ ಯನೆ ಸಫಳಿಗ ಸಮುದಾಯದ ಕುಟುಂಭಕ್ಕೆ ಸೇರಿದ ತರವಾಡು ಮನೆ ಹಾಗು ಪರಿವಾರ ದೈವಗಳ ತನ್ನದೆ ಆದ ವೈಶಿಷ್ಟವಿರುವ ಮಾತೆ ಶ್ರೀ ರಾಜರಾಜೇಶ್ವರಿ,ವಿರಭದ್ರ ಸ್ವಾಮಿ, ಗಾಣದಅಮ್ಮನ ಸಾನಿದ್ಯವಾಗಿರುವ ಗಾಂದೊಟ್ಯ (ಗಾಣದಕೊಟ್ಯಾ) ಎಂದೇ ಹೆಸರಾಗಿರುವ ಈ ತಾನವು, ದ.ಕ. ಜಿಲ್ಲೆಯ ಪಾವುರು ಗ್ರಾಮದ, ಇನೋಳಿಯಲ್ಲಿದೆ. ಕಳೆದ 300 ವರ್ಷಗಳ ಹಿಂದೆ ಬೇರೆ ಬೇರೆ ಕಾರಣಗಳಿಂದ ಸಂಪೂರ್ಣವಾಗಿ ನಶಿಸಿಹೋಗಿರುವ ಈ ಗಾಣದಕೊಟ್ಯ, ತರವಾಡು ಮನೆಯನ್ನು ಪುನರ್ ಪ್ರತಿಷ್ಟಾಪಿಸುವ ಮತ್ತು ಈ ಸನ್ನಿದಾನಕ್ಕೆ ಪುನರ್ಜೀವ ತುಂಬಲು ಕುಟುಂಭ ಸಮಾಜದವರು ತಿರ್ಮಾನಿಸಿದ್ದು. ಈ ಸನ್ನಿದಾನಕ್ಕೆ ಭೂಮಿ ಪೂಜೆ ನಡೆಯಿತು. ಪೊಳಲಿ ಆರ್ಚಕ ಡಿ.ಪರಮೇಶ್ವರ ಭಟ್ , ಉಳಿಯ ಶ್ರೀ ಉಲಾಳ್ತಿ ದರ್ಮರಸರ ಕ್ಷೇತ್ರ , ಉಲ್ಲಾಲ. ಮಾಜಿ ಆಡಳಿತ ಮುಖ್ಯಸ್ಥ ಯು ಎಸ್ ಪ್ರಕಾಶ್ ಎಕ್ಕೂರು, ಕುಟುಂಬದ ಹಿರಿಯ ಗಣ್ಯ ವ್ಯಕ್ತಿಗಳಾದ ಹೊನ್ನಯ್ಯ ಸಪಳಿಗ ಕಂಧಾವರ ಮೂಡುಕೆರೆ ಹಾಗು ಸೀತ ಸಪಳ್ತಿ ಕಡಂದಳೆ ಶಿಲಾನ್ಯಾಸ ನೆರವೇರಿಸಿದರು.
ಈ ಶಿಲಾನ್ಯಾಸ ದೊಂದಿಗೆ ಶ್ರೀ ಗಾಣದಕೊಟ್ಯಾ ಬಂಗೇರ ತರವಾಡು ಟ್ರಷ್ಟ್ (ರಿ) ಎಂದು ನಾಮಕರಣ ಗೊಂಡಿರುವ ಸನ್ನಿಧಾನವನ್ನು 2 ವರ್ಷದೊಳಗೆ ಪೂರ್ಣಗೊಳಿಸಲು ಕುಟುಂಭದವರು ನಿರ್ಧರಿಸಿರುವರು,ಈ ಸನ್ನಿಧಾನವನ್ನು ಪೂರ್ಣಗೊಳಿಸಲು ಸುಮಾರು 50 ಲಕ್ಷಕ್ಕೂ ಮೀರಿ ಖರ್ಚುವೆಚ್ಚಗಳು ತಗಲುತ್ತದೆ. ಇದನ್ನು ಕುಟುಂಭ ಹಾಗು ಸಮಿತಿಯವರಾದ ಅದ್ಯಕ್ಷ ವಿವೇಕಾನಂದ ಸಪಳಿಗ, ಉಪದ್ಯಾಕ್ಷ ಸುಕುಮರ್ ತೊಕ್ಕೊಟ್ಟು. ಕಾರ್ಯದರ್ಶಿ ಸುರೇಶ್ ಬಿ. ಫಲಿಮಾರ್, ಕವೀತ, ರಮೇಶ್ ಕಂದವರ, ಮೋಹನ ತೊಕ್ಕೊಟ್ಟು ಹಾಗು ಸಮಿತಿಯ ಇತರ ಸದಸ್ಯರು ಮತ್ತು ಕುಟುಂಭಸ್ತರು ಸೇರಿ ಸನ್ನಿಧಾನವನ್ನು ನೆರವೇರಿಸುವಲ್ಲಿ ನಿರತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಗಾಣದಕೊಟ್ಯ ಸನ್ನಿಧಾನ ಪುನರ್ಜೀವಕ್ಕೆ ಭೂಮಿಪೂಜೆ"