ಹಿಂಸೆಯನ್ನು ತ್ಯಜಿಸಿ ಅಹಿಂಸೆಯಿಂದ ಕೂಡಿ ಬಾಳಿದರೆ ಯಾವುದೇ ಕಾರ್ಯವನ್ನು ಸಾಸಬಹುದು. ಸೌಹಾರ್ದತೆ ಮತ್ತು ಸಾಮರಸ್ಯದಿಂದ ಕೂಡಿದ ಜೀವನವನ್ನು ನಡೆಸುವ ಮೂಲಕ ಕೋಮುವಾದವನ್ನು ಖಂಡಿಸಬೇಕು. ಆ ನಿಟ್ಟಿನಲ್ಲಿ ಯುವ ಜನತೆ ಕೈ ಜೋಡಿಸಿ ಸಮೃದ್ಧ ರಾಷ್ಟ್ರ ಕಟ್ಟುವ ಮಹತ್ಕಾರ್ಯದಲ್ಲಿ ಮುಂದಾಗಬೇಕು ಎಂದು ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ಭಂಡಾರಿ ನುಡಿದರು.
ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಆಯೋಜಿಸಲಾದ ಸದ್ಘಾವನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ತುಕಾರಾಂ ಪೂಜಾರಿ ವಹಿಸಿ ಸರ್ವಧರ್ಮಗಳ ಸಮನ್ವಯತೆಯ ಕಡೆಗೆ ನಾವು ದೃಷ್ಟಿ ಹರಿಸಬೇಕು. ಪರಸ್ಪರ ಪ್ರೀತಿ, ಸ್ನೇಹ, ಅನ್ಯೋನ್ಯತೆಯೊಂದಿಗೆ ನಾಗರಿಕ ಬದುಕನ್ನು ನಡೆಸುವಂತೆ ಕರೆಯಿತ್ತರು.
ಎನ್.ಎಸ್.ಎಸ್ ಯೋಜನಾಕಾರಿಗಳಾದ ಡಾ| ಮಂಜುನಾಥ ಉಡುಪ ಮತ್ತು ಕಿಟ್ಟು ರಾಮಕುಂಜ ಉಪಸ್ಥಿತರಿದ್ದರು. ಘಟಕ ನಾಯಕ ಕೀರ್ತನ್ ಸದ್ಭಾವನಾ ದಿನದ ಪ್ರತಿಜ್ಞಾ ವಿ ಬೋದರು. ಘಟಕ ನಾಯಕರಾದ ಪ್ರತೀಕ್ಷಾ ಸ್ವಾಗತಿಸಿ, ಸುಮಂತ್ ಎಸ್ ಕೆ ವಂದಿಸಿದರು. ಸ್ವಯಂ ಸೇವಕಿಯರಾದ ಶಿವಾನಿ, ಕ್ಷೆವಿನಾ, ರಕ್ಷಿತಾ, ಅಭಿಜ್ಞಾ ಭಾವೈಕ್ಯತಾ ಗೀತೆಯನ್ನು ಹಾಡಿದರು. ಘಟಕ ನಾಯಕಿ ಪಂಚಶ್ರೀ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸೌಹಾರ್ದತೆ, ಸಾಮರಸ್ಯದಿಂದ ಜೀವನ ನಡೆಸಿ: ನಾರಾಯಣ ಭಂಡಾರಿ"