ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯಲ್ಲಿ ರಚಿತವಾದ ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಸಮಿತಿಯು ಅಕ್ಟೋಬರ್ ೧ರಂದು ದಿನಪೂರ್ತಿ ಅಡಿಗರ ಸಾಹಿತ್ಯದ ಕುರಿತು ವಿಚಾರಸಂಕಿರಣವೊಂದನ್ನು ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಆಯೋಜಿಸಿರುತ್ತದೆ.
ಕನ್ನಡದ ಪ್ರಮುಖ ವಿಮರ್ಶಕರು ಭಾಗವಹಿಸುವ ಈ ವಿಚಾರಸಂಕಿರಣದ ಅಂಗವಾಗಿ ಅಡಿಗ: ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂಬ ವಿಷಯದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯಲಿದೆ. ವಿಜೇತ ಪ್ರಬಂಧಗಳಿಗೆ ರೂ. ೨೦೦೦, ೧೦೦೦ ಮತ್ತು ರೂ.೫೦೦ ನಗದು ಬಹುಮಾನ ನೀಡಲಾಗುವುದು. ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಗರಿಷ್ಠ ಆರು ಪುಟಗಳ ಪ್ರಬಂಧವನ್ನು ತಮ್ಮ ದೂರವಾಣಿ ಸಂಖ್ಯೆ, ವಿಳಾಸ ಹಾಗೂ ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ಸೆಪ್ಟೆಂಬರ್ ೧೫ರ ಒಳಗಾಗಿ ಈ ಮುಂದಿನ ವಿಳಾಸಕ್ಕೆ ಕಳುಹಿಸಬಹುದು. ಡಾ. ಅಜಕ್ಕಳ ಗಿರೀಶ ಭಟ್, ಮೊಡಂಕಾಪು, ಜೋಡುಮಾರ್ಗ, ದ.ಕ.-೫೭೪೨೧೯.
Be the first to comment on "ಅಡಿಗರ ಬಗ್ಗೆ ಪ್ರಬಂಧ ಸ್ಪರ್ಧೆ"