ತುಳುನಾಡಿನ ಕಲೆ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರ ಅಪಾರವಾದದ್ದು, ಇಂತಹ ಸಂಸ್ಕೃತಿಯಲ್ಲಿ ಬೆಳೆದು ಬಂದ ನಾವೆಲ್ಲರೂ ಪುಣ್ಯವಂತರು ಹಾಗೆಯೇ ಮುಂದಿನ ಪೀಳಿಗೆಗೆ ಇಂತಹ ಸಂಸ್ಕೃತಿಯನ್ನು ಮುಟ್ಟಿಸುವಂಥ ಜವಾಬ್ಧಾರಿ ನಮ್ಮೊಂದಿಗಿದೆ ಎಂದು ಚಲನಚಿತ್ರ ಕಲಾವಿದ ಪ್ರಕಾಶ್ ತುಮಿನಾಡು ಹೇಳಿದರು.
ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಕದಿಕೆ ತುಳು ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾವಿದರಾದ ಶನಿಲ್ ಗುರು, ರಾಜೇಶ್ ಕೊಳಕೆ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತುಳುನಾಡ್ದ ಐಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಡಾ| ಕಮಲಾ ಪ್ರಭಾಕರ ಭಟ್, ಲಕ್ಷ್ಮೀ ರಘುರಾಜ್, ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಕದಿಕೆ ತುಳು ಸಂಘದ ನಿರ್ದೇಶಕಿ ಹಾಗೂ ವಾಣಿಜ್ಯ ಉಪನ್ಯಾಸಕಿ ಸುಕನ್ಯಾ ಮತ್ತು ವಾಣಿಜ್ಯ ಉಪನ್ಯಾಸಕಿ ಶೈಲಜಾ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಉಪನ್ಯಾಸಕ ಯತಿರಾಜ್ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಲಾವಣ್ಯ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿ ವರದರಾಜ್ ವಂದಿಸಿದರು.
Be the first to comment on "ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮಲ್ಲಿದೆ: ಪ್ರಕಾಶ್ ತುಮಿನಾಡು"