ಮಾತು ಮಾತಿಗೂ ಅಹಿಂದ ಎಂದು ಹೇಳುವ ಸರಕಾರ, ಅಹಿಂದರ ಅಭಿವೃದ್ಧಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲ್ಲೂರು ದೇವಳದಿಂದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಉಚಿತ ಊಟ ಮತ್ತು ಸಮವಸ್ತ್ರ ನೀಡುವ ವ್ಯವಸ್ಥೆಯನ್ನು ಕಸಿದಿದೆ ಎಂದು ಬಿಜೆಪಿ ಮುಖಂಡ ಉಳಿಪ್ಪಾಡಿ ರಾಜೇಶ್ ನಾಯಕ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಜಾಹೀರಾತು
ಈ ನಿರ್ಧಾರದಿಂದ ಅಹಿಂದ ಬಡ ಮಕ್ಕಳ ಊಟವನ್ನು ಕಸಿಯುವಂತೆ ಕೆಲಸವನ್ನು ಸರಕಾರ ಮಾಡಿದೆ. ದ್ವೇಷ ರಾಜಕೀಯಕ್ಕಾಗಿ ಮಕ್ಕಳ ಊಟ ಕಸಿಯುವುದು ಶೋಚನೀಯ ಮತ್ತು ರಾಜ್ಯ ಸರಕಾರಕ್ಕೆ ಶೋಭೆ ತರುವಂತ ಕೆಲಸವಲ್ಲ. ಹಸಿದು ಬಂದವರಿಗೆ ಅನ್ನದಾನ ಮಾಡುವುದು ನಮ್ಮ ಸಂಸ್ಕೃತಿ. ಆದರೆ ರಾಜ್ಯ ಸರಕಾರ ಬಡ ಮಕ್ಕಳ ಅನ್ನವನ್ನು ಕಸಿದು ವಿಕೃತಿ ಮೆರೆದಿದೆ ಎಂದು ಅವರು ದೂರಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಹಿಂದ ಮಕ್ಕಳ ಊಟ ಕಸಿದ ಸರಕಾರ: ರಾಜೇಶ್ ನಾಯಕ್"