- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಬೆಣ್ಣೆಯನ್ನು ತಿಳಿಯದವರು ಯಾರೂ ಇಲ್ಲ . ಹೆಚ್ಚಿನವರಿಗೆ ಬೆಣ್ಣೆಯಿಂದ ತುಪ್ಪ ಎಂದಷ್ಟೇ ಗೊತ್ತು. ಹಾಗೆಯೇ ಬೆಣ್ಣೆ ತಿಂದರೆ ಕಪ ಕೆಮ್ಮು ಜಾಸ್ತಿ ಆಗುತ್ತದೆ ಎಂದೇ ನಂಬಿಕೆ. ಆದರೆ ವದ್ಯಕೀಯ ಕ್ಷೇತ್ರದಲ್ಲಿ ಬೆಣ್ಣೆಯು ಅಧ್ಭುತವಾದ ಕೆಲಸವನ್ನು ಮಾಡುತ್ತದೆ.
- ಬೆಂಕಿ ಸುಟ್ಟು ಗಾಯ ಆದಾಗ ಬೆಣ್ಣೆ ಹಚ್ಚಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
- ಮೈಯಲ್ಲಿ ಕುರ ಮೂಡಿದಾಗ ಬೆಣ್ಣೆಗೆ ಸ್ವಲ್ಪ ವಿಭೂತಿ ಮಿಶ್ರ ಮಾಡಿ ಹಚ್ಚಿದರೆ ಬೇಗನೆ ಪಕ್ವವಾಗುತ್ತದೆ.
- ಒಣ ಚರ್ಮದ ಮೇಲೆ ಬೆಣ್ಣೆಯನ್ನು ಹಚ್ಚಿದರೆ ಚರ್ಮ ಮೃದು ಹಾಗು ಕಾಂತಿಯುತವಾಗುತ್ತದೆ.
- ಸ್ವಲ್ಪ ಬೆಣ್ಣೆಯನ್ನು ರಾತ್ರಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಜೀರಿಗೆ ಕಷಾಯಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಕುಡಿದರೆ ಸೊಂಟದ ಸೆಳೆತ ಹಾಗು ನೋವು ಕಡಿಮೆಯಾಗುತ್ತದೆ.
- ಬೆಣ್ಣೆಯನ್ನು ಹಚ್ಚುವುದರಿಂದ ತುಟಿ ಹಾಗು ಕಾಲಿನ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.
- ಬೆಣ್ಣೆಗೆ ಸ್ವಲ್ಪ ಅರಸಿನಪುಡಿ ಮಿಶ್ರಮಾಡಿ ಶರೀರಕ್ಕೆ ಹಚ್ಚುವುದರಿಂದ ಶರೀರದ ಕಾಂತಿ ಹೆಚ್ಚಾಗುತ್ತದೆ.
- ತಿಮರೆ ರಸಕ್ಕೆ ಬೆಣ್ಣೆಯನ್ನು ಸೇರಿಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಅಧಿಕವಾಗುತ್ತದೆ.
- ಬಾಯಿಯಲ್ಲಿ ಹುಣ್ಣು ಆದಾಗ ಬೆಣ್ಣೆಯನ್ನು ಬಾಯಿಯ ಒಳಗೆ ಹಚ್ಚಬೇಕು.
- ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕವಾಗಿ ಇರುವುದರಿಂದ ಕಣ್ಣಿನ ದೃಷ್ಟಿಗೆ ಉತ್ತಮವಾದುದು.
- ಮಧುಮೇಹದ ರೋಗಿಗಳು ಬೆಣ್ಣೆಯನ್ನು ಪಾದ ಹಾಗು ಕಾಲಿಗೆ ಹಚ್ಚುವುದರಿಂದ ಬೆಂಕಿ ಬರುವುದು ಕಡಿಮೆಯಾಗುತ್ತದೆ.
- ಬೆಣ್ಣೆಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಆರೋಗ್ಯದಲ್ಲಿ ಮಹತ್ತರ ಸುಧಾರಣೆ ಕಂಡುಬರುತ್ತದೆ.
- ಬೆಣ್ಣೆಯು ಶೀಘ್ರದಲ್ಲಿ ಶಕ್ತಿನೀಡುವ ದ್ರವ್ಯವಾಗಿದ್ದು ಇದು ಶರೀರದ ಕೊಬ್ಬಿನ ಜೊತೆ ಮಿಶ್ರವಾಗುವುದಿಲ್ಲ.
- ಬೆಣ್ಣೆಯ ನಿಯಮಿತ ಸೇವನೆಯು ಜೀರ್ಣಾಂಗ ವ್ಯೂಹದ ನಂಜನ್ನು ತಡೆಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
- ಸ್ತ್ರೀಯರಲ್ಲಿ ಗರ್ಭ ಧರಿಸುವಲ್ಲಿ ಬೆಣ್ಣೆಯು ಮಹತ್ತರ ಪಾತ್ರವಹಿಸುತ್ತದೆ.
- ಬೆಣ್ಣೆಯು ಶರೀರವು ಗಟ್ಟಿಯಾಗುವುದನ್ನು (stiffness) ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಅಂಶ ಅಧಿಕವಾಗುವುದನ್ನು ತಡೆಗಟ್ಟಲು ಸಹಕರಿಸುತ್ತದೆ.
- ಶರೀರಕ್ಕೆ ಅವಶ್ಯವಾದ ಲವಣ, ಖನಿಜ, ವಿಟಮಿನ್ ಗಳು ಶರೀರಕ್ಕೆ ಹೀರಿಕೊಳ್ಳಲು ಬೆಣ್ಣೆಯು ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ.
- ಕೆಲವೊಂದು ಚರ್ಮ ರೋಗಗಳಲ್ಲಿ (fungal infection) ಬೆಣ್ಣೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.
- ಬೆಣ್ಣೆ ಶರೀರದ ವ್ಯಾಧಿ ಕ್ಷಮತ್ವವನ್ನು ಹಾಗು ಮೇಧಾ ಶಕ್ತಿಯನ್ನು ಅಧಿಕಗೊಳಿಸುತ್ತದೆ.
Be the first to comment on "ಬೆಣ್ಣೆ ಹಚ್ಚಿದರೂ ಲಾಭ, ತಿಂದರೂ ಲಾಭ"