ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯ ಪಾಲನೆ ಮಾಡುವುದು ಅಗತ್ಯ ಎಂದು ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರು ಹೇಳಿದರು.
ಪಾಣೆಮಂಗಳೂರಿನಲ್ಲಿ ನಡೆಯುತ್ತಿರುವ ಚಾತುರ್ಮಾಸ – ಋಷಿಮಂಡಲ ಆರಾಧನೆ ಸಂಧರ್ಭ ಮಂಗಲ ಪ್ರವಚನ ನೀಡಿದ ಅವರು, ಜೀವನದಲ್ಲಿ ಧರ್ಮಾಚರಣೆಯ ಮಹತ್ವವನ್ನುಸಾರಿ ಹೇಳಿದರು. ಧರ್ಮಪಾಲನೆ, ಶಿಸ್ತು, ಸಂಯಮಗಳನ್ನು ಅಳವಡಿಸಿಕೊಂಡು ಜೀವನ ನಡೆಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಮುನಿಶ್ರೀ ಹೇಳಿದರು.
ಇದೇ ಸಂದರ್ಭ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಶ್ರೀ ಋಷಿ ಮಂಡಲ ಆರಾಧನೆಯನ್ನು ಮೂಡಬಿದಿರೆಯ ವೀರೇಂದ್ರ ಕುಮಾರ್ ಕುಟುಂಬ, ಸರ್ವ ಮಂಗಳ ಮಹಿಳಾ ಸಂಘ ಪ್ರಾಯೋಜಕತ್ವದಲ್ಲಿ, ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಸಲಾಯಿತು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ ಶಂಕಾ-ಸಮಾಧಾನ ನಡೆಯಿತು. ಶ್ರಾವಕ ಬಂಧುಗಳ ಅನೇಕ ಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಉತ್ತರಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶ್ರಾವಕರೂ ಶಂಕಾ-ಸಮಾಧಾನಕಾರ್ಯಕ್ರಮದಲ್ಲಿ, ತಮ್ಮ ಪ್ರಶ್ನೆಗಳನ್ನು ಕೇಳಿ ತಮ್ಮ ಉತ್ತರ ಪಡೆದು, ಧರ್ಮದ ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ, ವೇಣೂರು, ಪುತ್ತೂರು, ಕಾರ್ಕಳ, ಕಳಸ, ಸಂಸೆ ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮೂಡಬಿದಿರೆಯ ಶಾಸಕ ಕೆ. ಅಭಯಚಂದ್ರ ಜೈನ್, ಮಂಜುಳಾ ಅಭಯಚಂದ್ರ ಜೈನ್, ವಿಜಯರಾಜ್ ಅಧಿಕಾರಿ ವೇಣೂರು , ಜಿನೇಂದ್ರ ಜೈನ್ ಮಂಗಳೂರು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಭಯಚಂದ್ರ ಜೈನ್ ಮಾತನಾಡುತ್ತಾ, ಧರ್ಮ ಮಾರ್ಗದಲ್ಲಿ ನಡೆಯುವುದು ಜೀವನದಲ್ಲಿ ತುಂಬಾ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರ ಇಂದ್ರ, ಸುಭಾಶ್ಚಂದ್ರ ಜೈನ್, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯ ಪಾಲನೆ ಅಗತ್ಯ: ಮುನಿಶ್ರೀ ವೀರಸಾಗರ ಮಹಾರಾಜ್"