ಮಜ್ಜಿಗೆ ಇದ್ದರೆ ಅಮೃತ ಇದ್ದಂತೆ…

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ದೇವತೆಗಳಿಗೆ ಅಮೃತ ಪ್ರಧಾನವಾದರೆ ಮನುಷ್ಯರಿಗೆ ಮಜ್ಜಿಗೆಯೇ ಅಮೃತ ಸಮಾನ ಎಂಬ ಮಾತಿದೆ.ಬಹುತೇಕ ಮಂದಿಗೆ ಮಜ್ಜಿಗೆ ಅವರ ಆಹಾರ ಪದ್ದತಿಯ ಅವಿಭಾಜ್ಯ ವಸ್ತುವಾಗಿದೆ.ಹಾಗೆಯೇ ಆರೋಗ್ಯ ಕ್ಷೇತ್ರದಲ್ಲೂ ಸಹ ಆರೋಗ್ಯವನ್ನು ಕಾಪಾಡುವಲ್ಲಿ  ಮತ್ತು ಸರಿಪಡಿಸುವಲ್ಲಿ ಮಜ್ಜಿಗೆಯು ಬಹು ಮುಖ್ಯ ಪಾತ್ರವನ್ನು ಹೊಂದಿದೆ.

  1. ಮಜ್ಜಿಗೆಯು ಒಂದು ಸಂಪೂರ್ಣ ಆಹಾರವಾಗಿದ್ದು ತತ್ ಕ್ಷಣಕ್ಕೆ  ಹಸಿವು, ಬಾಯಾರಿಕೆ ಹಾಗು ಬಳಲಿಕೆಯನ್ನು ನಿವಾರಿಸುತ್ತದೆ.
  2. ನಿಧಾನವಾಗಿ ಕರಗುವ ಉದ್ದು ಇತ್ಯಾದಿಗಳಿಂದ ಹೊಟ್ಟೆ ಉಬ್ಬರಿಸಿದಂತಾದರೆ ಮಜ್ಜಿಗೆಗೆ ಉಪ್ಪು ಅಥವಾ ಹಿಂಗು ಹಾಕಿ ಕುಡಿಯಬೇಕು.
  3. ಅತಿಯಾದ ತುಪ್ಪ ಸೇವನೆಯಿಂದ ಅಜೀರ್ಣ ಹಾಗು ಕಪದ ಸಮಸ್ಯೆ ಇದ್ದಾಗ ಮಜ್ಜಿಗೆಯು ಅದನ್ನು ಕರಗಿಸಿ ಜೀರ್ಣ ಶಕ್ತಿಯನ್ನು ಸರಿಯಾಗಿಸುತ್ತದೆ.
  4. ಜೀರ್ಣ ಶಕ್ತಿ ಕಡಿಮೆಯಾಗಿ ಭೇದಿ ಅಥವಾ ಮಲಪ್ರವೃತ್ತಿ ಸರಿಯಾಗಿ ಆಗದಿದ್ದರೆ ಮಜ್ಜಿಗೆಗೆ ಸ್ವಲ್ಪ ಶುಂಠಿ ಹಾಕಿ ಕುಡಿಯಬೇಕು.
  5. ಕಪ ಸಂಬಂಧವಾದ ಗಂಟು ನೋವು ಹಾಗು ಊತ ಇದ್ದಾಗ ಮಜ್ಜಿಗೆಯನ್ನು ಪಥ್ಯ ಆಹಾರವಾಗಿ ಬಳಸಿದಲ್ಲಿ ನೋವು ಹಾಗು ಊತ ಕಡಿಮೆಯಾಗಲು ಸಹಕರಿಸುತ್ತದೆ.
  6. ಮಜ್ಜಿಗೆಯ ಸೇವನೆಯಿಂದ ವಾತ ಹಾಗು ಕಪ ಪ್ರಧಾನವಾದ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
  7. ಮಜ್ಜಿಗೆಯ ಸೇವನೆಯಿಂದ ಮೂತ್ರ ಪ್ರವೃತ್ತಿಯು ಸರಿಯಾಗಿ ಆಗುತ್ತದೆ.
  8. ಗುದದ್ವಾರದ ಹೊರಗೆ ಮೂಲವ್ಯಾಧಿ ಇದ್ದಾಗ ಮಜ್ಜಿಗೆಯನ್ನು ಬಿಸಿಮಾಡಿ ಹದಾ ಬೆಚ್ಚಗೆ ಇರುವಾಗ ಒಂದು ಪಾತ್ರೆಗೆ ಹಾಕಿ ಗುದದ್ವಾರ ಮುಟ್ಟುವ ಹಾಗೆ ಸಾಧಾರಣ 10 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು
  9. ತಲೆಯಲ್ಲಿ ಹೊಟ್ಟು ಮತ್ತು ತುರಿಕೆ ಇದ್ದಾಗ ಹುಳಿ ಮಜ್ಜಿಗೆಯನ್ನು ತಲೆಗೆ ಹಾಕಿ 30 ನಿಮಿಷ ಬಿಟ್ಟು ಸ್ನಾನ ಮಾಡಬೇಕು.ಇದರಿಂದ ತಲೆಕೂದಲು ನುಣುಪು ಸಹ ಆಗುತ್ತದೆ.
  10. ಮಜ್ಜಿಗೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಬಿಸಿಲಿನ ಬೊಕ್ಕೆ (sun burn ) ಹಾಗು ತುರಿಕೆ ಕಡಿಮೆಯಾಗುತ್ತದೆ.
  11. ಮಜ್ಜಿಗೆಗೆ ಒಣ ನೆಲ್ಲಿಕಾಯಿ ಹಾಕಿ ಕುದಿಸಿ ನಂತರ ಉಗುರು ಬೆಚ್ಚಗೆ ಇರುವಾಗ ತಲೆಗೆ ಧಾರೆ ಎರೆದರೆ ನಿದ್ರಾಹೀನತೆ,ಒತ್ತಡದ ತಲೆನೋವು ಕಡಿಮೆಯಾಗುತ್ತದೆ ಹಾಗು ರಕ್ತದ ಒತ್ತಡವು ಹತೋಟಿಗೆ ಬರುತ್ತದೆ.
  12. ಮಜ್ಜಿಗೆಯ ನಿಯಮಿತ ಸೇವನೆಯಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ ಮತ್ತು ರಕ್ತಹೀನತೆಯಿಂದ ಕಂಡುಬರುವ ಶರೀರದ ಊತವು ಸಹ ವಾಸಿಯಾಗುತ್ತದೆ.
  13. ಮಜ್ಜಿಗೆಯ ಸೇವನೆಯಿಂದ ಕರುಳಿನಲ್ಲಿರುವ ಕ್ರಿಮಿಯ ಬಾಧೆಯು ಕಡಿಮೆಯಾಗುತ್ತದೆ.
  14. ಬಿಸಿಯಾದ ಮಜ್ಜಿಗೆಯಲ್ಲಿ ಕಾಲು ಮುಳುಗಿಸಿ ಇಟ್ಟರೆ ಕಾಲಿನ ಹಿಮ್ಮಡಿ ನೋವು ಕಡಿಮೆಯಾಗುತ್ತದೆ ಮತ್ತು ಕಾಲು ಒಡೆಯುವ ಸಮಸ್ಯೆಯು ಸಹ ಹತೋಟಿಗೆ ಬರುತ್ತದೆ
  15. ಬೆಣ್ಣೆಯನ್ನು ತೆಗೆದ ಮಜ್ಜಿಗೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಶರೀರದ ಅಧಿಕ ಕೊಬ್ಬು ನಿವಾರಣೆಯಾಗುತ್ತದೆ ಮತ್ತು ಶರೀರದ ಭಾರ ಕಡಿಮೆಯಾಗುತ್ತದೆ .
  16. ಮಜ್ಜಿಗೆಯು ಉದರ ಸಂಬಂಧಿ ವ್ಯಾಧಿಗಳಿಗೆ ರಾಮಬಾಣವಾಗಿದ್ದು ಉದರದಲ್ಲಿ ನೀರುತುಂಬುವ ಖಾಯಿಲೆಯಲ್ಲಿ(ascitis ) ಉತ್ತಮ ಪರಿಣಾಮವನ್ನು ನೀಡುತ್ತದೆ.
  17. ಮಜ್ಜಿಗೆಯಲ್ಲಿನ ಕ್ಯಾಲ್ಸಿಯಂ ಅಂಶವು ಮೂಳೆ ಹಾಗು ಸಂಧುಗಳನ್ನು ದೃಢವಾಗಿರಿಸಲು  ಸಹಕರಿಸುತ್ತದೆ.
  18. ಮಜ್ಜಿಗೆಯು ಮಧುಮೇಹಿ,ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಪಥ್ಯ ಆಹಾರವಾಗಿದೆ.

 

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಮಜ್ಜಿಗೆ ಇದ್ದರೆ ಅಮೃತ ಇದ್ದಂತೆ…"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*