ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ನಿಜವಾದ ಸೇವಾ ಮನೋಭಾವ ಇದ್ದವರಷ್ಟೇ ಇಲ್ಲಿಗೆ ಬನ್ನಿ. ಸೇವೆಯಷ್ಟೇ ಇದರ ಗುರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ಮಾಜಿ ಅಧ್ಯಕ್ಷ ಹಾಗೂ ಲಯನ್ಸ್ ನ ಮಾಜಿ ಗವರ್ನರ್ ಹರಿಕೃಷ್ಣ ಪುನರೂರು ಹೇಳಿದರು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವೆ ಮಾಡುವವರು ಪ್ರತಿಫಲಾಪೇಕ್ಷೆ ಬಯಸಬಾರದು ಎಂಬುದಕ್ಕೆ ಹಲವು ದೃಷ್ಟಾಂತಗಳನ್ನು ಹೇಳಿದ ಅವರು, ನಿರ್ದಿಷ್ಟ ವೇಷ ಭೂಷಣ, ಆರ್ಥಿಕ ಸಂಪತ್ತು ಬೇಕು ಎಂದೇನಿಲ್ಲ. ಸೇವೆ ಮಾಡಲು ಬೇಕಾಗಿರುವುದು ನಿಸ್ವಾರ್ಥ ಮನಸ್ಸು ಎಂದು ಪುನರೂರು ಹೇಳಿದರು. ಬಳಿಕ ನೂತನ ಲಯನ್ಸ್ ಪದಾಧಿಕಾರಿಗಳಿಗೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ, ಪೊಸಿಶನ್ ಮತ್ತು ಪೊಸೆಶನ್ ಕುರಿತು ಚಿಂತಿಸದೆ ನಮ್ಮ ಕಾರ್ಯದಲ್ಲಷ್ಟೇ ತೊಡಗಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ. ಕಷ್ಟಗಳನ್ನು ನಾವು ಸವಾಲಾಗಿ ಸ್ವೀಕರಿಸಿ ಮುನ್ನಡೆಯೋಣ ಎಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ ಯಡಪಡಿತ್ತಾಯ, ಕಾರ್ಯದರ್ಶಿ ರಾಮಕೃಷ್ಣ ರಾವ್, ಕೋಶಾಧಿಕಾರಿ ರೋಹಿತಾಶ್ವ, ಜತೆ ಕಾರ್ಯದರ್ಶಿ ರೂಪೇಶ್ ಆಚಾರ್ಯ, ಜೊತೆ ಕೋಶಾಧಿಕಾರಿ ಕೃಷ್ಣಶ್ಯಾಮ್, ಲಯನೆಸ್ ಕ್ಲಬ್ ನೂತನ ಅಧ್ಯಕ್ಷೆ ಚಿತ್ರಾ ಜೆ. ಯಡಪಡಿತ್ತಾಯ, ಕಾರ್ಯದರ್ಶಿ ಸುಜಾತ ರವಿಶಂಕರ್, ಕೋಶಾಧಿಕಾರಿ ವಸಂತಿ ಎಲ್. ಶೆಟ್ಟಿ ಅಧಿಕಾರ ಸ್ವೀಕರಿಸಿಕೊಂಡರು.
ಲಯನ್ಸ್ ಜಿಲ್ಲೆ ಕ್ಯಾಬಿನೆಟ್ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ, ರೀಜನ್ ಚೇರ್ ಪರ್ಸನ್ ನರಸಿಂಹ ಶೆಟ್ಟಿ, ಜೋನ್ ಚೇರ್ ಪರ್ಸನ್ ಶಿವಾನಂದ ಬಾಳಿಗಾ, ಪ್ರಮುಖರಾದ ದಾಮೋದರ್ ಬಿ.ಎಂ, ಪ್ರಸಾದ್ ಕುಮಾರ್ ಮಾರ್ನಬೈಲು, ನಿಕಟಪೂರ್ವಾಧ್ಯಕ್ಷ ಲಕ್ಷ್ಮಣ್ ಅಗ್ರಬೈಲು, ಕಾರ್ಯದರ್ಶಿ ಉಮೇಶ್ ಆಚಾರ್, ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ನಿಕಟಪೂರ್ವಾಧ್ಯಕ್ಷೆ ದೇವಿಕಾ ದಾಮೋದರ್ , ಶರ್ಮಿಳಾ ಸುಧಾಕರ್, ವೃಂದಾ ಎಸ್ ಕುಡ್ವ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿಕಟಪೂರ್ವಾಧ್ಯಕ್ಷ ಲಕ್ಷ್ಮಣ್ ಅಗ್ರಬೈಲು ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಮಕೃಷ್ಣ ರಾವ್ ವಂದಿಸಿದರು. ದಿವ್ಯಾ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಡಿಯೋ ವರದಿಗೆ ಕ್ಲಿಕ್ ಮಾಡಿ:
Be the first to comment on "ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ: ಲಯನ್ಸ್ ಪದಾಧಿಕಾರಿಗಳಿಗೆ ಪುನರೂರು ಸಲಹೆ"