- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ನಮ್ಮಲ್ಲಿ ಹೆಚ್ಚಿನ ಪಾಯಸ, ಹಲ್ವ, ಕ್ಷೀರ, ಇತ್ಯಾದಿಗಳಿಗೆ ಗೇರು ಬೀಜ ಹಾಕದಿದ್ದರೆ ಅವುಗಳ ಘನತೆ ಕಡಿಮೆ ಎಂದೇ ತಿಳಿಯಲಾಗುತ್ತದೆ. ಈ ಗೇರುಬೀಜ ಅಥವಾ ಗೋಡಂಬಿ ಬೀಜವು ನಮ್ಮ ದೇಹದ ವಿವಿಧ ಅಂಗಾಂಗಗಳಿಗೆ ಬಲದಾಯಕವೂ ಪುಷ್ಟಿದಾಯಕವೂ ಆಗಿದೆ.
- ಗೇರು ಬೀಜದಲ್ಲಿರುವ ತಾಮ್ರದ ಅಂಶವು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಉತ್ತಮ ಪ್ರತಿರೋಧ ಅಂಶವಾಗಿದ್ದು ಈ ವ್ಯಾದಿಯಿಂದ ಬಳಲುತ್ತಿರುವವರಿಗೆ ಇದು ಪಥ್ಯ ಆಹಾರವಾಗಿದೆ.
- ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶವಿದ್ದು ಹೃದಯ ರೋಗವನ್ನು ತಡೆಕಟ್ಟಲು ಸಹಕಾರಿಯಾಗಿದೆ.
- ಗೇರುಬೀಜದಲ್ಲಿರುವ ಮೆಗ್ನೀಷಿಯಂ ಅಂಶವು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಪೂರಕವಾಗಿ ಕೆಲಸ ಮಾಡುತ್ತದೆ.
- ಗೇರುಬೀಜದಲ್ಲಿನ ತಾಮ್ರದ ಅಂಶವು ತಲೆಕೂದಲಿನ ಪ್ರಾಕೃತ ಬಣ್ಣ ಉಳಿಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
- ಗೋಡಂಬಿ ಬೀಜದಲ್ಲಿರುವ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಶರೀರದ ಮೂಳೆಯ ದೃಢತೆಯನ್ನು ಕಾಪಾಡಲು ಪ್ರಯೋಜನಕಾರಿಯಾಗಿದೆ.
- ಇದು ಪಿತ್ತಕೋಶದ ಕಲ್ಲನ್ನು ತಡೆಕಟ್ಟಲು ಪ್ರಯೋಜನಕಾರಿಯಾಗಿದೆ.
- ಇದರಲ್ಲಿರುವ ಉತ್ತಮವಾದ ಕೊಬ್ಬಿನ ಅಂಶವು ಶರೀರದ ತೂಕವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ. ಕ್ಷಯರೋಗ ಹಾಗು ರಕ್ತ ಹೀನತೆಯವರಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
- ಇದರಲ್ಲಿರುವ ವಿಟಮಿನ್ ರೈಬೋಫ್ಲೇವಿನ್,ಪೆನತೋನಿಕ್ ಆಮ್ಲ, ಥೈಮಿನ್ ಅಂಶಗಳು ದೇಹದ ನರಮಂಡಲಗಳಿಗೆ ಉತ್ತಮ ಬಲವನ್ನು ನೀಡುತ್ತದೆ.
- ಗೋಡಂಬಿ ಬೀಜದ ಓಡಿನ ಎಣ್ಣೆಯು ಕಾಲಿನ ಹಿಮ್ಮಡಿ ಒಡೆಯುವುದನ್ನು ಕಡಿಮೆ ಮಾಡುತ್ತದೆ.
- ಓಡಿನ ಎಣ್ಣೆಯು ಕೆಡು,ಕಾಲಿನ ಆಣಿ ,ಹುಣ್ಣು ಇತ್ಯಾದಿಗಳನ್ನು ಕರಗಿಸುತ್ತದೆ.
Be the first to comment on "ಬಲ ನೀಡುವ ಗೋಡಂಬಿ"