ಕರೋಪಾಡಿ ಗ್ರಾಮದ ಮುಗುಳಿಯಲ್ಲಿ ಯುವಕನೋರ್ವನ ಮೇಲೆ ತಂಡದಿಂದ ಹಲ್ಲೆ ನಡೆದಿದ್ದು, ಇದಕ್ಕೆ ಪ್ರತಿರೋಧವಾಗಿ ಇನ್ನೊಂದು ತಂಡ ಕನ್ಯಾನ ಪೇಟೆಯಲ್ಲಿ ಮಾರಕಾಯುಧಗಳನ್ನು ಜಳಪಿಸುತ್ತಾ ಎಲ್ಲರನ್ನು ಓಡಿಸಿದ ಘಟನೆ ಸೋಮವಾರ ರಾತ್ರಿ ಆತಂಕ ಸೃಷ್ಟಿಸಿತು.
ಘಟನೆ ತರುವಾಯ ವಿಟ್ಲ ಪೊಲೀಸರ ಸಹಿತ ಪೊಲೀಸರ ತಂಡವೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.
ಸದ್ಯ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಆತಂಕ ಬೇಡ. ಈ ಕುರಿತು ಯಾವುದೇ ವದಂತಿಗಳನ್ನು ಹರಡುವುದನ್ನಾಗಲೀ ಅಥವಾ ತಪ್ಪು ಸಂದೇಶಗಳನ್ನು ಕಳುಹಿಸುವುದನ್ನು ಮಾಡಬಾರದು ಎಂದು ಎಚ್ಚರಿಸಿರುವ ಪೊಲೀಸರು ಅಂಥ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನೆಕ್ಲಾಜೆ ಮಹಮ್ಮದ್ ಹನೀಫ್ ಎಂಬವರು ಹಲ್ಲೆಗೊಳಗಾಗಿದ್ದು, ಗಾಯಗೊಂಡ ಅವರು ಪುತ್ತೂರು ಖಾಸಗೀ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರ್ತನಾಡಿ ದಿನೇಶ್ ಮತ್ತು ಇತರ ತಂಡ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಹಲ್ಲೆ ನಡೆಸಿದ ವಿಚಾರ ತಿಳಿದ ತಂಡವೊಂದರ ಹತ್ತಕ್ಕೂ ಅಧಿಕ ಮಂದಿ ಬಂದಿ ಬೈಕ್ ನಲ್ಲಿ ಕುಳಿತಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಹಲವರಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ವಿಚಾರ ತಿಳಿದು ಕನ್ಯಾನ ಪೇಟೆಯಲ್ಲಿ ತಂಡವೊಂದು ಮಾರಕಾಯುಧಗಳನ್ನು ಹಿಡಿದುಕೊಂಡು ಎಲ್ಲರನ್ನು ಓಡಿಸಿ ಅಂಗಡಿಯನ್ನು ಬಂದ್ ಮಾಡಿಸಿದೆ. ಅಂಗಡಿಯ ಮುಂಭಾಗದಲ್ಲಿ ಉಳಿದಿದ್ದ ಸೋಡ ಬಾಟಲ್ ಹಾಗೂ ಗಾಜನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಎಸೆದದ್ದೂ ಅಲ್ಲದೆ, ರಸ್ತೆ ಪೂರ್ತಿ ಕಲ್ಲು ಎಸೆದಾಡಿ, ಮಾರಕಾಯುಧ ಹಿಡಿದುಕೊಂಡು ಆತಂಕ ಸೃಷ್ಟಿಸಿದರು. ಕೂಡಲೇ ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹೆಚ್ಚುವರಿ ಭದ್ರತೆಯನ್ನು ಕೈಗೊಂಡಿದ್ದು, ಮುಗುಳಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಎರಡು ಎರಡು ಪ್ರಕರಣಗಳನನ್ನು ದಾಖಲಿಸಲಾಗಿದೆ. ಎರಡು ಗುಂಪುಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ನಡೆದ ಪ್ರಕರಣ ಇದಾಗಿದ್ದು, ಯಾವುದೇ ಕೋಮು ಸಂಬಂಧಿ ವಿಚಾರವಲ್ಲ ಎಂದು ಎಸ್ಪಿ ಭೂಷಣ್ ಜಿ. ಬೊರಸೆ ಸ್ಪಷ್ಟಪಡಿಸಿದ್ದಾರೆ.
ಮುಗುಳಿ, ಕನ್ಯಾನಗಳಲ್ಲಿ ಪೊಲೀಸರ ಪಹರೆ ಇದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
Be the first to comment on "ಕರೋಪಾಡಿ ಕನ್ಯಾನದಲ್ಲಿ ಹಲ್ಲೆ ಘಟನೆ ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿ"