ಮುಂದಿನ ಕಾಲಕ್ಕೆ ನಾವು ನೀಡಬಹುದಾದ ಏಕೈಕ ಸಂಪತ್ತು ನೀರು. ಹಾಗಾಗಿ ನೀರಿನ ಮೂಲವನ್ನು ವೃದ್ಧಿಸುವ, ಉಳಿಸುವ ಕಾರ್ಯ ಇಂದಿನಿಂದಲೇ ನಡೆಯಬೇಕೆಂದು ರಾಜ್ಯ ತರಬೇತುದಾರ ಮಂಜು ವಿಟ್ಲ ಅವರು ಹೇಳಿದರು.
ಕೇಂದ್ರ ಸರಕಾರದ ದತ್ತೋಪಂತ್ ಥೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಮಂಗಳೂರು ವತಿಯಿಂದ ರಾಯಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2 ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನದಿ, ಕೆರೆ, ಬಾವಿಗಳು ಬತ್ತಿ ಹೋಗಿದ್ದು, ನಾವಿಂದು ನಳ್ಳಿ ನೀರಿಗೆ ಅವಲಂಭಿತರಾಗಿದ್ದೇವೆ. ಇದೊಂದು ಅಪಾಯದ ಸೂಚನೆವಾಗಿದ್ದು, ಸಾರ್ವಜನಿಕ ಕೆರೆಗಳನ್ನು ಸಂರಕ್ಷಿಸುವ ಪ್ರಯತ್ನ ಸಾಮೂಹಿಕವಾಗಿ ನಡೆದಾಗ ಸ್ವಾಭಾವಿಕವಾದ ಜಲ ಮೂಲ ವೃದ್ಧಿಯಾಗುತ್ತದೆ ಎಂದವರು ತಿಳಿಸಿದರು.
ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಾರ್ಮಿಕ ಶಿಕ್ಷಣಾಧಿಕಾರಿ ಎ.ಸತೀಶ್ ಕುಮಾರ್ ಅವರು ಕಾರ್ಮಿಕರ ಹಕ್ಕು, ಅಧಿಕಾರಗಳನ್ನು ವಿವರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರು ಮಾತನಾಡಿ, ಸರಕಾರದ ಯೋಜನೆ, ಸವಲತ್ತು, ಕಾರ್ಯಕ್ರಮ ಯಶಸ್ವಿಯಾಗ ಬೇಕಾದರೆ, ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದರು. ಮಹಿಳೆಯರ ಹಾಗೂ ಮಕ್ಕಳ ಅಧಿಕಾರ, ಹಕ್ಕು, ಸ್ವಾತಂತ್ರ್ಯ, ಶಿಕ್ಷಣ ಕುರಿತು ಸಂವಾದ ನಡೆಯಿತು.
Be the first to comment on "ನೀರಿನ ಮೂಲ ವರ್ಧಿಸುವ ಕಾರ್ಯ ಅಗತ್ಯ: ಮಂಜು ವಿಟ್ಲ"