- ಬಿ.ತಮ್ಮಯ್ಯ
ಭಾರತದ ಲಿಪಿ ವಿಕಾಸ ಬ್ರಾಹ್ಮೀ ಲಿಪಿಯಿಂದ ಪ್ರಾರಂಭವಾಯಿತು. ಇಲ್ಲಿ ಎರಡು ವಿಭಾಗ.
- ದಕ್ಷಿಣ ಭಾರತ ಗುಹಾಲಿಪಿ.
- ಗುಪ್ತರ ಕಾಲದ ಬ್ರಾಹ್ಮೀ ಲಿಪಿ.
ಇಲ್ಲಿ ಶಾರದಾ ಲಿಪಿ ಕಾಶ್ಮೀರಲಿಪಿ ಎಂಬ ಒಂದು ಭಾಗ ಸಿದ್ಧ ಮಾತೃಕೆ ಮತ್ತು ನಾಗರಿ ಎಂಬುದಾಗಿ ಮತ್ತೊಂದ ಭಾಗ ವಿಂಗಡವಾಗಿ ಮತ್ತೆ ಮೂರು ಭಾಗ. ಮೊದಲನೆಯದ್ದು ರಾಜಸ್ತಾನಿ, ಬಂಗಾಲಿ, ಒರಿಯಾ, ಅಸ್ಸಾಮಿ, ಗುಜರಾತ್. ಎರಡನೆಯದ್ದು ನಂದಿನಾಗರಿ. ಮೂರನೆಯದ್ದು ದೇವನಾಗರಿ. ಮೋಡಿ, ಮರಾಠಿ ಇವತ್ತು ಉತ್ತರ ಭಾರತದ ಎಲ್ಲ ಭಾಷೆಗಳ ಲಿಪಿಗಳು. ನಾಗರಿ ಲಿಪಿಯ ಮಾದರಿಯನ್ನೇ ಅವಲಂಬಿಸಿದೆ. ಕಾಣುವವರಿಗೆ ದೇವನಾಗರಿ ಲಿಪಿಯಂತೆ ಕಂಡರೂ ಒಳಗೆ ಅನೇಕ ಬದಲಾವಣೆಗಳು ಇವೆ. ಆದುದರಿಂದ ಅವುಗಳೆಲ್ಲ ಪ್ರತ್ಯೇಕ ಭಾಷೆ ಮತ್ತು ಲಿಪಿ ಹೊಂದಿವೆ. ಇದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ.
ದಕ್ಷಿಣ ಭಾರತ ಗುಹಾಲಿಪಿ ವಿಂಗಡವಾಗಿ ಗ್ರಂಥಲಿಪಿಯಿಂದ ತಮಿಳುಲಿಪಿ ಸೃಷ್ಟಿಯಾಯಿತು. ಎರಡನೆಯ ವಟ್ಟೆ ಎಳತ್ತು ಲಿಪಿಯಿಂದ ಕನ್ನಡ ಲಿಪಿ ಮತ್ತು ತೆಲುಗುಲಿಪಿ ಸೃಷ್ಟಿಯಾಯಿತು. ಮೂರನೆಯ ಆರ್ಯ ೆಳತ್ತುನಿಂದ ತುಳುಲಿಪಿ ಮತ್ತು ಮಲೆಯಾಳ ಲಿಪಿ ಸೃಷ್ಟಿಯಾಯಿತು. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ತಮಿಳು ಲಿಪಿ ಮತ್ತು ಕನ್ನಡ ತೆಲುಗು ಲಿಪಿಗಳು ಆಕಾರ ವ್ಯತ್ಯಾಸ ಇದೆ. ಕನ್ನಡ, ತೆಲುಗು ಸಾಮಾನ್ಯವಾಗಿ ಒಂದೇ ತರ ಇದೆ. ಮುಂದೆ ತುಳು ಲಿಪಿ ಮತ್ತು ಮಲೆಯಾಳ ಲಿಪಿ ಒಂದೇ ತರ ಇದೆ. ಆದರೆ ಪ್ರತ್ಯೇಕತೆಯನ್ನು ಅವು ಉಳಿಸಿಕೊಂಡಿವೆ.
ಈಗ ಆರ್ಯಪಿಳತ್ತು ವಿಭಾಗದಲ್ಲಿ ತಿಗಳಾರಿ ಲಿಪಿ ಎಂಬ ಲಿಪಿ ಇದೆ. ಅದೇ ತುಳು ಲಿಪಿ ಎಂದು ಕೆಲವರು ವಾದಿಸುತ್ತಾರೆ. ತಿಗಳಾರಿ ಲಿಪಿಯು ತುಳು ಲಿಪಿಯ ಅಕ್ಷರಗಳಿಂದ ತುಂಬಾ ಭಿನ್ನವಾಗಿದೆ. ಆರ್ಯ ಎಳತ್ತು ವಿಭಾಗದಲ್ಲಿ ಇಂಥ ಒಂದು ಲಿಪಿ ಇರಬಹುದು. ಆದರೆ ಅದೇ ತುಳು ಲಿಪಿ ಎಂದು ವಾದಿಸುವುದಕ್ಕೆ ಕಾರಣವಿಲ್ಲ. ಉತ್ತರ ಭಾರತದ ಎಲ್ಲ ಭಾಷೆಗಳ ಲಿಪಿಯು ದೇವನಾಗರಿ ಲಿಪಿಯನ್ನು ಹೋಲುತ್ತದೆ. ದಕ್ಷಿಣ ಭಾರತದಲ್ಲಿ ಮೂರು ಮುಖ್ಯ ಗುಂಪುಗಳಲ್ಲಿ ಪ್ರಕೃತ ಭಾಷೆಯ ಲಿಪಿಗಳು ಹೋಲುತ್ತವೆ. ತಿಗಳಾರಿ ಭಾಷೆ ಇದೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಲಿಪಿ ಇದ್ದರೆ ಸಂತೋಷ. ಅದಕ್ಕಾಗಿ ತುಳು ಲಿಪಿಯನ್ನು ತಿಗಳಾರಿ ಲಿಪಿ ಎಂದು ಕರೆದು ತುಳುವಿಗೆ ಲಿಪಿಯೇ ಇಲ್ಲ ಎಂದು ವಾದಿಸುವುದು ಎಷ್ಟು ಸರಿ? ಹಾಗಾದರೆ, ಉತ್ತರ ಭಾರತದ ಎಲ್ಲ ಭಾಷೆಗಳನ್ನು ನಾಗರಿ ಭಾಷೆ ಎಂದು ಕರೆಯಲು ಸಾಧ್ಯವೇ, ಅನೇಕ ತುಳು ಬ್ರಾಹ್ಮಣ ಮನೆಯಲ್ಲಿರುವ ಮಂತ್ರದ ಪುಸ್ತಕಗಳು ತುಳು ಲಿಪಿಯಲ್ಲಿದೆ ಎಂದು ಅವರ ವಾರೀಸುದಾರರು ಹೇಳುತ್ತಾರೆ. ಆದುದರಿಂದ ಇಂಥ ವಾದಗಳು ಅನಗತ್ಯ ಎಂಬುದು ನನ್ನ ನಂಬಿಕೆ.
Be the first to comment on "ಭಾರತೀಯ ಲಿಪಿ ವಿಕಾಸ"