ಬಿ.ಸಿ.ರೋಡ್ ಚಿಕ್ಕಯ್ಯನಮಠ ಸಮೀಪ ದೇವಸ್ಥಾನದ ಬಳಿ ಮೃತದೇಹವೊಂದು ಸೋಮವಾರ ಬೆಳಗ್ಗೆ ನೇತ್ರಾವತಿ ನದಿಯಲ್ಲಿ ತೇಲುತ್ತಿರುವುದು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು.
ಸ್ಥಳೀಯರು ಕೂಡಲೇ ಪೊಲೀಸರಿಗೆ ಹಾಗೂ ಸ್ಥಳೀಯ ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಗೂಡಿನಬಳಿ ಅವರಿಗೆ ಮಾಹಿತಿ ರವಾನಿಸಿದರು. ಮುಳುಗುತಜ್ಞ ಸತ್ತಾರ್ ಮತ್ತು ಸಂಗಡಿಗರು ಶವವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ಶವದ ಪ್ರಾಥಮಿಕ ಮಹಜರು ನಡೆಸಿದಾಗ ದೊರಕಿದ ಮಾಹಿತಿಯಂತೆ ಗಿರೀಶ್ ನಾಯಕ್ ಎಂದು ಹೆಸರು ಕಂಡುಬಂದಿದೆ. ಒಂದು ದಿನದ ಹಿಂದೆ ವಾಕಿಂಗ್ ತೆರಳುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದಿರಬಹುದು ಎಂದು ಸಂಶಯಿಸಲಾಗಿದ್ದು, ಪೂರ್ಣ ಮಾಹಿತಿ ತನಿಖೆಯಿಂದಲಷ್ಟೇ ಗೊತ್ತಾಗಲಿದೆ. ಶವ ಮಹಜರು ಸಂದರ್ಭ ವಿಲೇಜ್ ಅಕೌಂಟೆಂಟ್ ಯೋಗಾನಂದ, ಕಂದಾಯ ಇಲಾಖೆ ಸಿಬ್ಬಂದಿ ಸದಾಶಿವ ಕೈಕಂಬ ಸಹಿತ ಹಲವರು ಜತೆಗಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಾಗಿದೆ.

Pic: SR BCROAD


Be the first to comment on "ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ"