ಬಂಟ್ವಾಳ ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆ 9ರಿಂದ ಜೂನ್ 2ರವರೆಗೆ ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಶನಿವಾರವೂ ಆತಂಕದ ವಾತಾವರಣವಿತ್ತು. ಶನಿವಾರ ಬೆಳಗ್ಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವ ವೇಳೆ ಒಂದು ತಂಡ ಬಂದ್ ನಡೆಸುವಂತೆ ಒತ್ತಾಯಿಸಿದರು ಎಂದು ಆಕ್ಷೇಪಿಸಲಾಯಿತು. ಇದರಿಂದ ಕೆಲಕಾಲ ಕಲ್ಲಡ್ಕದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಯಿತಾದರೂ ಸ್ಥಳದಲ್ಲಿದ್ದ ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಎರಡೂ ಕಡೆಯವರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಇದೇ ಸಂದರ್ಭ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಅಲ್ಲೆ ಮೊಕ್ಕಾಂ ಹೂಡಿದ್ದ ಎಸ್ ಪಿ ಭೂಷಣ್ ಬೊರಸೆ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಕಲ್ಲಡ್ಕದ ಕೆಳಗಿನ ಪೇಟೆಯಲ್ಲಿ ಕೆಲ ಅಂಗಡಿ ಮುಂಗಟ್ಟು ತೆರೆದವು. ಆದರೆ ಜನರ ಓಡಾಟ ವಿರಳವಾಗಿತ್ತು. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂಜೆಯ ವೇಳೆ ಐಜಿ ಹರಿಶೇಖರನ್ ಸ್ಥಳಕ್ಕೆ ಭೇಟಿ ನೀಡಿ ಎಸ್ಪಿ ಭೂಷಣ್ ಬೊರಸೆ, ಡಿವೈಎಸ್ಪಿ ರವೀಶ್ ಸಿ.ಆರ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಆರೋಪಿಗಳನ್ನು ಬಂಧಿಸುವಂತೆ ಒಂದೆಡೆ ಒತ್ತಾಯ ಕೇಳಿಬಂದಿದ್ದರೆ, ಘಟನೆ ವೇಳೆ ಸ್ಥಳದಲ್ಲಿಲ್ಲದವರ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಇನ್ನೊಂದೆಡೆ ಆರೋಪಿಸಲಾಯಿತು.
for bantwalnews.com youtube click:
Also Read yesterdays news
Be the first to comment on "ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆ"