ಬಂಟ್ವಾಳದ ಬಿ.ಸಿ.ರೋಡ್ ಸಮೀಪ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಅಡಕೆ ವ್ಯಾಪಾರಿ ಮನೋಹರ ಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂದಿನಂತೆ ಬೈಪಾಸಿನ ಮನೆಯೊಂದಕ್ಕೆ ಬೆಳಗ್ಗೆ ಹಾಲು ಕೊಟ್ಟ ಬಳಿಕ ನಂದಾವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ ಮನೋಹರ್, ಸಂಜೆಯಾದರೂ ಮರಳಲಿಲ್ಲ. ಇದರಿಂದ ಆತಂಕಿತರಾದ ಮನೆಯವರು ಗೆಳೆಯರ ಬಳಿ ವಿಚಾರಿಸಿದಾಗ, ಹುಡುಕಾಟ ನಡೆಸಲಾಯಿತು. ಸಂಜೆ ಹೊತ್ತಿಗೆ ಅವರ ಬೈಕ್ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಕಂಡುಬಂತು. ಪಕ್ಕದಲ್ಲೇ ಶವ ಇತ್ತು. ಅದರೊಂದಿಗೆ ಡೆತ್ ನೋಟ್ ಬರೆದಿಟ್ಟಿದ್ದ ಮನೋಹರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಅವರ ತಮ್ಮ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಅವಿವಾಹಿತರಾಗಿದ್ದ ಮನೋಹರ್, ಸ್ನೇಹಜೀವಿಯಾಗಿದ್ದು, ತನ್ನ ಸರಳ ನಡೆ, ನುಡಿಯಿಂದ ಜನಾನುರಾಗಿಯಾಗಿದ್ದರು. ಬಂಟ್ವಾಳ ಎಸ್.ವಿ.ಎಸ್.ಕಾಲೇಜು ಬಳಿಯ ಕಂಚಿಲ್ದಗದ್ದೆ ನಿವಾಸಿಯಗಿರುವ ಅವರ ಶವ ಮಹಜರು ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಾಗಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ವಿಷ ಸೇವಿಸಿ ಅಡಕೆ ವ್ಯಾಪಾರಿ ಆತ್ಮಹತ್ಯೆ"